ದಿನ ಭವಿಷ್ಯ: ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ..
Published 24 ಫೆಬ್ರುವರಿ 2026, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಾಧಾನ ದೊರೆತು ಹಂತ ಹಂತವಾಗಿ ಅನುಕೂಲ ವಾತಾವರಣದ ಅನುಭವ ದೊರಕಲಿದೆ. ಸದುದ್ದೇಶ ಕಾರಣದಿಂದ ಕೆಲಸವನ್ನು ಗೌಪ್ಯವಾಗಿ ನಿರ್ವಹಿಸಬೇಕಾಗುವುದು.
24 ಫೆಬ್ರುವರಿ 2026, 23:31 IST
ವೃಷಭ
ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿವೆ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕಬಹುದು.
24 ಫೆಬ್ರುವರಿ 2026, 23:31 IST
ಮಿಥುನ
ಕೆಲಸಕ್ಕೆ ಇನ್ನೊಂದು ಕೆಲಸ ಜೊತೆ ಜೊತೆಗೂಡಿ ಮುಕ್ತಾಯದ ಹಂತ ತಲುಪಲು ಸಾಧ್ಯವಾಗುವುದಿಲ್ಲ. ಆತ್ಮೀಯರ ಮತ್ತು ಬಂಧುವರ್ಗದವರ ಸಹಾಯ ಸ್ವೀಕರಿಸಿ.
24 ಫೆಬ್ರುವರಿ 2026, 23:31 IST
ಕರ್ಕಾಟಕ
ಬರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಷಯ. ಗೃಹ ಬಳಕೆಯ ಸಾಮಗ್ರಿ ಖರೀದಿಯಿಂದ ಸಂತಸವಾಗಲಿದೆ. ಮಕ್ಕಳಿಂದ ಸೌಖ್ಯವಿರುವುದು.
24 ಫೆಬ್ರುವರಿ 2026, 23:31 IST
ಸಿಂಹ
ಈವರೆಗೂ ಕೂಡಿಟ್ಟ ಶ್ರಮದ ಠೇವಣಿ ಹಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬೇಕಾಗುವುದು. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
24 ಫೆಬ್ರುವರಿ 2026, 23:31 IST
ಕನ್ಯಾ
ನಿಯಮ ಉಲ್ಲಂಘನೆ ಮಾಡುವ, ದಬ್ಬಾಳಿಕೆ ನಡೆಸುವ ರೀತಿನೀತಿಯನ್ನು ಬದಲಿಸಿಕೊಳ್ಳಿ. ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ.
24 ಫೆಬ್ರುವರಿ 2026, 23:31 IST
ತುಲಾ
ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವ ತೀರ್ಮಾನ ಅಭಿವೃದ್ಧಿಗೆ ಕಾರಣವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಕುಟುಂಬದವರೂ ಸಂತಸ ಪಡುತ್ತಾರೆ.
24 ಫೆಬ್ರುವರಿ 2026, 23:31 IST
ವೃಶ್ಚಿಕ
ಇಬ್ಬನಿಯಲ್ಲಿ ನೆನೆಯುವುದು ಅಥವಾ ನಿಮ್ಮ ದೇಹಕ್ಕೆ ಅಹಿತಕರ ಕೆಲವು ಕೆಲಸದ ಕಾರಣದಿಂದ ಜ್ವರ ಬರಬಹುದು. ಕುಟುಂಬದ ಸದಸ್ಯರಲ್ಲಿ ಆದಷ್ಟು ತಾಳ್ಮೆ-ಸಮಾಧಾನದಿಂದ ವರ್ತಿಸಿ.
24 ಫೆಬ್ರುವರಿ 2026, 23:31 IST
ಧನು
ವ್ಯವಹಾರದಲ್ಲಿ ಅದರಲ್ಲೂ ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ತಪ್ಪುಗಳಾಗದಂತೆ ಜಾಗರೂಕತೆ ವಹಿಸಿರಿ. ಯೋಗ ಹೇಳಿಕೊಡುವ ಶಿಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯವಾಗುತ್ತದೆ.
24 ಫೆಬ್ರುವರಿ 2026, 23:31 IST
ಮಕರ
ಮನೆ ನಿರ್ಮಾಣದ ಕಾರ್ಯ ಅಡ್ಡಿ-ಆತಂಕಗಳಿಲ್ಲದೆ ಸರಾಗವಾಗಿ ನಡೆಯಲಿದೆ. ಯೋಚನೆಗಿಂತ ಅಧಿಕ ಮಟ್ಟದಲ್ಲಿ ಹಣ ವ್ಯಯವಾಗುತ್ತದೆ. ಕುಟುಂಬದ ಸದಸ್ಯರ ಜತೆ ಸಮಯ ಕಳೆಯಲಿದ್ದೀರಿ.
24 ಫೆಬ್ರುವರಿ 2026, 23:31 IST
ಕುಂಭ
ಸ್ವಂತ ಉದ್ಯೋಗಿಗಳಿಗೆ ಬರುವ ನೂತನ ಯೋಚನೆಗಳನ್ನು ಕೈ ಬಿಟ್ಟು ಈಗಿನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಿ.ನಿಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುದು ತಿಳಿದು ಬರಲಿದೆ.
24 ಫೆಬ್ರುವರಿ 2026, 23:31 IST
ಮೀನ
ಅನೇಕ ದಿನಗಳಿಂದ ಸೇವಿಸುತ್ತಿರುವ ಅಪಥ್ಯದ ಆಹಾರದ ಪರಿಣಾಮವಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲಿವೆ. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚುತ್ತದೆ.
24 ಫೆಬ್ರುವರಿ 2026, 23:31 IST