ದಿನ ಭವಿಷ್ಯ: ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ
Published 1 ಫೆಬ್ರುವರಿ 2026, 0:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೀವು ಖರೀದಿಸಿದ ನಿವೇಶನ ಈಗ ಮಾರುವುದಾದರೆ ಉತ್ತಮ ಬೆಲೆಗೆ ಮಾರಾಟ ಆಗುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ.
01 ಫೆಬ್ರುವರಿ 2026, 00:20 IST
ವೃಷಭ
ಉದ್ಯೋಗದಲ್ಲಿ ನಿಮ್ಮೊಂದಿಗೆ ಸೆಣಸಾಡಲು ಬಂದವರನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ . ನಿಮ್ಮ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಎದುರಾದರೂ ಅದು ಕ್ಷಣ ಮಾತ್ರದ್ದಾಗಿರುತ್ತದೆ.
01 ಫೆಬ್ರುವರಿ 2026, 00:20 IST
ಮಿಥುನ
ಮೈಬಣ್ಣದ ಕಾರಣಕ್ಕೆ ಸಂಬಂಧದಲ್ಲಾಗಲಿ, ವ್ಯವಹಾರದಲ್ಲಾಗಲಿ ಯಾರನ್ನೂ ಕಡೆಗಣಿಸಬೇಡಿ. ಆರೋಗ್ಯಕ್ಕಿಂತ ಹಣ ಮುಖ್ಯ ಎನ್ನುವ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು.
01 ಫೆಬ್ರುವರಿ 2026, 00:20 IST
ಕರ್ಕಾಟಕ
ನೀವು ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪದೇ ಇರುವುದರಿಂದ ಹಿಡಿದಂತಹ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ.
01 ಫೆಬ್ರುವರಿ 2026, 00:20 IST
ಸಿಂಹ
ವಿದ್ಯಾರ್ಥಿಗಳು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವಿರಿ. ಬಂದಂತಹ ಫಲಿತಾಂಶವು ನಿರೀಕ್ಷೆಗಿಂತ ಹೆಚ್ಚಿನ ಸಂತೋಷವನ್ನು ನೀಡುವುದು.
01 ಫೆಬ್ರುವರಿ 2026, 00:20 IST
ಕನ್ಯಾ
ಮನೆಯಲ್ಲಿನ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ನೀವು ಪ್ರತಿಯೊಂದು ರೂಪಾಯಿಯನ್ನು ಖರ್ಚು ಮಾಡುವಾಗ ಅನೇಕ ಬಾರಿ ಯೋಚಿಸುವಿರಿ. ಲೇಖಕರಿಗೆ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ.
01 ಫೆಬ್ರುವರಿ 2026, 00:20 IST
ತುಲಾ
ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹೋದರನಲ್ಲಿ ಹೇಳಿಕೊಂಡಾಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಹಾಯ ದೊರೆಯಲಿದೆ. ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಬರಲಿದೆ.
01 ಫೆಬ್ರುವರಿ 2026, 00:20 IST
ವೃಶ್ಚಿಕ
ನಿಮ್ಮ ಕೆಲಸಗಳಿಗೆ ಹೆಚ್ಚಿನ ಸಾಮಾಜಿಕ ಸಹಕಾರ ಸಿಗುವುದು. ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗುವುದು ಲಾಭವನ್ನು ತರಲಿದೆ. ಮದುವೆಯ ನಿಮಿತ್ತವಾಗಿ ಒಡವೆಗಳ ಖರೀದಿ ಮಾಡುವಿರಿ.
01 ಫೆಬ್ರುವರಿ 2026, 00:20 IST
ಧನು
ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಏಕೆಂದರೆ ನಿಮ್ಮ ಮೇಲಿರುವ ವಿಶ್ವಾಸದಿಂದಾಗಿ ಹಲವಾರು ಅವಕಾಶಗಳು ನಿಮ್ಮದಾಗಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಯ ಕರೆಯೋಲೆ ಬರಬಹುದು.
01 ಫೆಬ್ರುವರಿ 2026, 00:20 IST
ಮಕರ
ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರವನ್ನು ಮಾಡುವವರಿಗೆ ರಫ್ತು ಕಾರ್ಯದಲ್ಲಿ ಕೆಲವು ತಾಪತ್ರಯಗಳು ಕಾಣಿಸಿಕೊಳ್ಳಲಿವೆ. ಅನಾವಶ್ಯಕವಾಗಿ ಯಾರನ್ನೂ ಟೀಕಿಸುವುದು ಸರಿಯಲ್ಲ.
01 ಫೆಬ್ರುವರಿ 2026, 00:20 IST
ಕುಂಭ
ಅಚ್ಚುಕಟ್ಟಾದ ಕೆಲಸಗಳಿಂದ ಮೇಲಾಧಿಕಾರಿಗಳಿಗೆ ನಿಮ್ಮ ಮೇಲಿನ ವಿಶ್ವಾಸ ಹೆಚ್ಚಲಿದೆ. ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ ಕೊಂಡಲ್ಲಿ ಯಶಸ್ಸು ಪಡೆಯುವಿರಿ.
01 ಫೆಬ್ರುವರಿ 2026, 00:20 IST
ಮೀನ
ಹಣಕಾಸು ಸಂಸ್ಥೆಗಳನ್ನು ನಡೆಸುವವರಿಗೆ ನಷ್ಟ ಸಂಭವಿಸಲಿದೆ. ಆಫೀಸಿನ ಕಾರ್ಯದಲ್ಲಿ ಎಲ್ಲರ ಮಾತನ್ನು ತಾಳ್ಮೆಯಿಂದ ಕೇಳಿ. ಮಗನ ಪ್ರಬುದ್ಧತೆಯಿಂದ ನಿಮ್ಮ ಹೆಗಲ ಭಾರ ಕಡಿಮೆಯಾಗುತ್ತದೆ.
01 ಫೆಬ್ರುವರಿ 2026, 00:20 IST