ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿ.9 – ಈ ರಾಶಿಗೆ ರಹಸ್ಯವಾಗಿ ಸಿಗುವ ಬೆಂಬಲದಿಂದ ಕನಸುಗಳು ಈಡೇರಲಿವೆ
Published 8 ಡಿಸೆಂಬರ್ 2023, 23:05 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಶಸ್ತ್ರವೈದ್ಯ ವೃತ್ತಿಯವರು ಸವಾಲು ಎನಿಸುವ ಪರಿಸ್ಥಿತಿ ಎದುರಿಸಬೇಕಾಗುವುದು. ಬಹುಜನರ ಒಡನಾಟದಿಂದ ಬಲ, ವಿಶ್ವಾಸ, ಪ್ರೀತಿಯನ್ನು ಪಡೆಯುವಂತಾಗಲಿದೆ. ಹಗಲು ರಾತ್ರಿಯ ವ್ಯತ್ಯಾಸವಿಲ್ಲದೇ ಶ್ರಮ ಪಡಬೇಕಾಗಲಿದೆ.
ವೃಷಭ
ಸಹೋದ್ಯೋಗಿಗಳೊಂದಿಗೆ ಸಂಯಮದಿಂದ ವರ್ತಿಸಿ, ಅದರ ಫಲವಾಗಿ ಕೆಲಸ ಸಾಧಿಸಿಕೊಳ್ಳುವಿರಿ. ನಿಮ್ಮ ಹೊಸ ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂತಹ ಉತ್ತಮ ಅವಕಾಶಗಳು ಈ ದಿನ ಎದುರಾಗುವುವು.
ಮಿಥುನ
ನೀವು ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲ ಉತ್ತಮವಾಗಿ ನಡೆಯುವವು. ಸೃಜನಶೀಲ ಯೋಜನೆಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಷೇರು ಮಾರಾಟದಿಂದ ಅಧಿಕ ಲಾಭವಿದೆ.
ಕರ್ಕಾಟಕ
ಆರ್ಥಿಕ ಬಲ ಮತ್ತು ನೆಮ್ಮದಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಹೊಂದಿರುವ ನಿಮಗೆ ಮಹಾಗಣಪತಿಯ ಆರಾಧನೆ ಶುಭವನ್ನುಂಟುಮಾಡುವುದು. ನಾಯಕತ್ವದ ಹೊಣೆ ನಿಭಾಯಿಸುವುದು ಅನಿವಾರ್ಯವಾಗುವುದು.
ಸಿಂಹ
ಸಮರ್ಥವಾಗಿ ಯೋಜನೆಗಳನ್ನು ಪೂರ್ಣಗೊಳಿಸುವಿರಿ, ಆದರೆ ಹಣಕಾಸಿನ ವಿಚಾರದಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವುದು ಉತ್ತಮ. ಗೆಳೆಯರ ಜೊತೆಗೂಡಿ ದೂರದ ಊರಿಗೆ ಪ್ರವಾಸಕ್ಕೆ ತೆರಳುವ ಮನಸ್ಸಾಗಲಿದೆ.
ಕನ್ಯಾ
ನಿಮ್ಮ ಭಾವನೆಗಳಿಗೆ ನಿಮ್ಮ ಮಕ್ಕಳು ಅಥವಾ ಸಹಚರರು ಸ್ಪಂದಿಸದೇ ಇರುವುದು ಬೇಸರಕ್ಕೆ ಮುಖ್ಯ ಕಾರಣವಾಗುತ್ತದೆ. ಸಂಯಮದಿಂದ ನಡೆದುಕೊಳ್ಳುವುದು ವ್ಯಾವಹಾರಿಕವಾಗಿ ಲಾಭವನ್ನು ತಂದುಕೊಡುವುದು.
ತುಲಾ
ದೈನಂದಿನ ಯಾಂತ್ರಿಕ ಬದುಕಿನಿಂದ ಸ್ವಲ್ಪ ವಿರಾಮ ಪಡೆದು ಕುಟುಂಬ ದೊಂದಿಗೆ ಕಾಲ ಕಳೆಯುವ ಆಲೋಚನೆ ಕೈಗೂಡಲಿದೆ. ಫೋಟೋ ಸ್ಟುಡಿಯೋದವರಿಗೆ ಹೆಚ್ಚಿನ ಅವಕಾಶಗಳೊಂದಿಗೆ ಜನಪ್ರಿಯತೆಯೂ ಹೆಚ್ಚುವುದು.
ವೃಶ್ಚಿಕ
ತೊಂದರೆಗಳೆಲ್ಲಾ ಒಂದೊಂದಾಗಿ ಉಪಶಮನಗೊಳ್ಳುತ್ತಾ ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ನಿಮ್ಮ ಅಗಾಧ ಅನುಭವ, ಪ್ರಯತ್ನ ಬಲ ಹಾಗೂ ಆತ್ಮವಿಶ್ವಾಸದಿಂದ ರಂಗಕಲೆಯಲ್ಲಿ ಹೆಸರು ಮಾಡುವಂತಾಗಲಿದೆ.
ಧನು
ಸರಿ ತಪ್ಪುಗಳ ವಿಚಾರದಲ್ಲಿ ಈ ದಿನ ನೀವು ಯಾರಲ್ಲಿಯೂ ವಾದ ಮಾಡುವುದು ಸರಿಯಲ್ಲ. ವಿಶ್ವಾಸದಲ್ಲಿ ಯಾರಿಗೂ ಹಣ ನೀಡಬೇಡಿ. ದಿನಸಿ ವ್ಯವಹಾರಗಳಲ್ಲಿ ಹೆಚ್ಚಿನ ಹೂಡಿಕೆಯಿಂದ ಲಾಭವಾಗುವುದು.
ಮಕರ
ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ. ಆಂಜನೇಯ ಸಹಿತ ಶ್ರೀರಾಮಚಂದ್ರನನ್ನು ಮನಃಪೂರ್ವಕವಾಗಿ ಪೂಜಿಸಿಕೊಂಡು ಕೆಲಸ ಮುಂದುವರಿಸಿ, ಫಲಕಾರಿಯಾಗುವುದು.
ಕುಂಭ
ಉದ್ಯೋಗದಲ್ಲಿ ಅಧಿಕ ಲಾಭ ಮಾಡುವ ಉದ್ದೇಶದಿಂದ ಕೈ ಸುಡುವ ಕೆಲಸ ಮಾಡದಿರಿ. ನೀವು ಅನಾವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ.
ಮೀನ
ರಹಸ್ಯವಾಗಿ ಸಿಗುವ ಬೆಂಬಲದಿಂದ ನಿಮ್ಮ ಕನಸುಗಳು ನನಸಾಗಲಿದೆ. ಯಾವುದೇ ಗೊಂದಲಗಳಿಗೆ ಒಳಗಾಗದೆ ನಿಮ್ಮ ನಿಲುವು ಸ್ಪಷ್ಟಪಡಿಸಿಕೊಂಡಲ್ಲಿ ಗೆಲುವು ನಿಮ್ಮದಾಗಲಿದೆ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಿರಿ.