ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
Todays Horoscope | ದಿನ ಭವಿಷ್ಯ– 10 ಜೂನ್ 2023
Published 9 ಜೂನ್ 2023, 22:28 IST
ಪ್ರಜಾವಾಣಿ ವಿಶೇಷ
author
ಮೇಷ
ಈ ದಿನ ಹೆಚ್ಚಿನ ಆತ್ಮಸ್ಥೈರ್ಯದಿಂದ ಕೆಲಸ ಪ್ರಾರಂಭಿಸಿದರೂ ಜಯ ಕಾಣುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನಗಳು ದೊರಕುತ್ತದೆ. ವರಮಾನ ತೆರಿಗೆ ಸಿಬ್ಬಂದಿಗೆ ಕೆಲಸದಲ್ಲಿ ಸ್ವಲ್ಪ ಬಿಡುವು ಸಿಗುವುದು.
ವೃಷಭ
ಸೃಜನಶೀಲ ಯೋಜನೆ ಮುಂದುವರಿಸಲು ಇದು ಶುಭದಿನ. ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿಯಲ್ಲಿ ಮಾಡಿಕೊಳ್ಳುವುದು ಒಳ್ಳೆಯದು. ದಿನದ ಅಂತ್ಯದಲ್ಲಿ ಸಂತಸದ ಸುದ್ದಿ ಕೇಳಿ ಬರುವುದು.
ಮಿಥುನ
ಶೈಕ್ಷಣಿಕ ರಂಗದಲ್ಲಿನ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಗಳಿಸಿಕೊಳ್ಳಬಹುದು. ಕಾರ್ಮಿಕರ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಸಂಪಾದಿಸಿಕೊಳ್ಳುವಂತೆ ಆಗಲಿದೆ.
ಕರ್ಕಾಟಕ
ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ. ಈ ದಿನ ಸಿಗುವ ಅನಿರೀಕ್ಷಿತ ಅವಕಾಶಗಳನ್ನು ಯಾವುದೇ ಮುಜುಗರವಿಲ್ಲದೆ ಬಳಸಿಕೊಳ್ಳದ್ದಿದ್ದರೆ ದಡ್ಡತನ ಪ್ರದರ್ಶಿಸಿದಂತಾಗುವುದು.
ಸಿಂಹ
ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನ ಎನಿಸಲಿದೆ. ಆಫೀಸಿನ ಕೆಲಸಗಳಿಗಾಗಿ ದೂರದ ಪ್ರಯಾಣ ಲಾಭದಾಯಕ. ವೈಯಕ್ತಿಕ ಕೆಲಸಗಳಿಗೆ ಮೇಲಧಿಕಾರಿಗಳಿಂದ ಅಡಚಣೆ ಇರುವುದಿಲ್ಲ.
ಕನ್ಯಾ
ಪೊಲೀಸ್ ಅಧಿಕಾರಿಗಳು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು. ನಿಮ್ಮಲ್ಲಿನ ಏಕಾಗ್ರತೆಯಿಂದಾಗಿ ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸ ಒಪ್ಪಿಕೊಳ್ಳಬಹುದು.
ತುಲಾ
ಸರ್ಕಾರಿ ಅಧಿಕಾರಿಗಳು ಕಾನೂನು ವಿಷಯಗಳ ಬಗ್ಗೆ ಗಮನ ಹರಿಸ ಬೇಕಾಗಬಹುದು. ಅವಶ್ಯಕತೆಗಳು ಆಶ್ಚರ್ಯಕರ ರೀತಿಯಲ್ಲಿ ಲಭಿಸಲಿದೆ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲ.
ವೃಶ್ಚಿಕ
ಆಫೀಸಿನ ಕೆಲಸದ ವಿಚಾರದಲ್ಲಿ ಕಟ್ಟು ನಿಟ್ಟಿನ ಕ್ರಮ ಮತ್ತು ಉತ್ಸಾಹ ಕೈಗೊಳ್ಳಬೇಕಾಗುವುದು. ಬೆಂಕಿಯಿಂದ ಅನಾಹುತಗಳು ಸಂಭವಿಸುವ ಲಕ್ಷಣಗಳಿರುವುದು. ನಿರೀಕ್ಷೆಗೂ ಮೀರಿದ ಫಲಿತಾಂಶ ಕಾಣುವಿರಿ.
ಧನು
ಎಲ್ಲಾ ಆಸೆಗಳನ್ನು ಕೈಬಿಟ್ಟು ಜೀವನ ನಡೆಸುವ ಸಮಯದಲ್ಲಿ ಪುನಃ ಅದೃಷ್ಟ ನಿಮ್ಮನ್ನು ಕೈ ಬೀಸಿ ಕರೆಯುವುದು. ಕ್ರೀಡಾಪಟುಗಳಿಗೆ ದೇಹಬಾಧೆ ಕಾಣಿಸಬಹುದು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕಾಗುವುದು.
ಮಕರ
ವಿದ್ಯಾರ್ಥಿ ವರ್ಗಕ್ಕೆ ಬಂದಿರುವ ಜವಾಬ್ದಾರಿಯುಕ್ತ ನಡವಳಿಕೆ ಮತ್ತು ಉತ್ಸಾಹದಿಂದ ಏಳಿಗೆಯ ಸೂಚನೆ ಇರುವುದು. ದೇಹದಲ್ಲಿ ಉತ್ಸಾಹವಿರುವುದರಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು.
ಕುಂಭ
ವಾಹನಾದಿಗಳ ಅಥವಾ ದೊಡ್ಡ ದೊಡ್ಡ ಯಂತ್ರಗಳಲ್ಲಿ ಕೆಲಸ ಮಾಡು ವವರಿಗೆ ಜಾಗ್ರತೆ ಅಗತ್ಯ. ಆಸ್ತಿ ಕೊಳ್ಳುವಾಗ ಎಲ್ಲಾ ವಿವರಗಳ ಬಗ್ಗೆ ಎರಡೆರಡು ಬಾರಿ ಮಾಹಿತಿ ಪಡೆದುಕೊಳ್ಳಿರಿ. ಕೆಲಸದ ಒತ್ತಡ ಕಡಿಮೆಯಾಗಲಿದೆ.
ಮೀನ
ನಿಯಮ, ನಿಷ್ಠೆಗಳಿಂದ ಅಧಿಕಾರದಲ್ಲಿ ಪದೋನ್ನತಿ ಪಡೆಯಬಹುದು. ವಿದೇಶ ಪ್ರಯಾಣದ ನಿಮ್ಮ ಹಲವು ವರ್ಷಗಳ ಕನಸು ನೆರೆವೇರುವ ಅವಕಾಶ ಸಿಗುವುದು. ನಾಸ್ತಿಕತೆಯನ್ನು ಬದಿಗಿಟ್ಟು ದೇವತಾರಾಧನೆಯ ಹಾದಿ ಹಿಡಿಯಿರಿ.
ADVERTISEMENT
ADVERTISEMENT