ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
Today's Horoscope | ದಿನ ಭವಿಷ್ಯ – 11 ಜೂನ್ 2023
Published 10 ಜೂನ್ 2023, 22:41 IST
ಪ್ರಜಾವಾಣಿ ವಿಶೇಷ
author
ಮೇಷ
ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು. ಗೃಹ ನಿರ್ಮಾಣ ಅಥವಾ ಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ನಿಮ್ಮ ಶ್ರಮವಿರಲಿ.
ವೃಷಭ
ಅಧ್ಯಯನ ಸಂಶೋಧನೆಯಿಂದ ಯೋಚಿಸಿದ ಹಣ ಮತ್ತು ಖ್ಯಾತಿಯನ್ನು ನಿಮ್ಮ ಇಷ್ಟದಂತೆ ಪಡೆದುಕೊಳ್ಳಲು ಆಗದೇ ಇರುವುದರಿಂದ ನೆಮ್ಮದಿ ಕಳೆದುಕೊಳ್ಳುವಂತಾಗಲಿದೆ. ಬಂಧು ಮಿತ್ರರ ಸಹಾಯ ಸಕಾಲಕ್ಕೆ ಒದಗುವುದು.
ಮಿಥುನ
ನಿಮ್ಮ ಅಸಾಧಾರಣ ಸಾಧನೆಗಳಿಗಾಗಿ ಪ್ರಶಂಸೆಯ ನುಡಿ ಮತ್ತು ಸನ್ಮಾನಗಳನ್ನು ಪಡೆಯುವಿರಿ. ದೀನರ ಸೇವೆಯಿಂದ ನಿಮ್ಮ ಅದೃಷ್ಟ ಈ ದಿನ ಇಮ್ಮಡಿಗೊಳ್ಳಲಿದೆ. ಗುರಿಯನ್ನು ತಲುಪುವಲ್ಲಿ ನಿಮ್ಮ ಶ್ರಮವು ಸಾರ್ಥಕವೆನಿಸುವುದು.
ಕರ್ಕಾಟಕ
ಕರ್ಕಾಟಕ: ಮದುವೆ ಮುಂತಾದ ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ ಬರಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ ಗಳಿಸಬಹುದು. ವ್ಯವಸಾಯದ ಕೆಲಸಗಳಿಗಾಗಿ ಹೆಚ್ಚಿನ ಶ್ರಮ ಪಡುವಂತಾಗಲಿದೆ.
ಸಿಂಹ
ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿಮ್ಮೊಳಗಿನ ನಾಯಕನನ್ನು ಜಾಗೃತಗೊಳಿಸಿ. ಕೆಲವು ಪ್ರಮುಖ ಕಾರ್ಯಗಳನ್ನು ಮಾಡುವಾಗ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು, ಅವನ್ನು ಲೆಕ್ಕಿಸದೆ ಗುರಿ ಸಾಧನೆಯ ಬಗ್ಗೆ ಯೋಚಿಸಿರಿ.
ಕನ್ಯಾ
ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ, ಏಕೆಂದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಹೊಂದುವಿರಿ. ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಅಥವಾ ಅಪವಾದದ ಸಮಸ್ಯೆ ಇರುತ್ತದೆ.
ತುಲಾ
ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ. ವಾಹನ ಮಾರಾಟಗಳಿಂದ ಉತ್ತಮ ಆದಾಯವನ್ನು ಪಡೆದುಕೊಳ್ಳುವಿರಿ. ಪೆಟ್ರೋಲಿಯಂ ಉತ್ಪನ್ನಗಳಿಂದ ಹೆಚ್ಚಿನ ಆದಾಯವಿದೆ.
ವೃಶ್ಚಿಕ
ಸುದ್ದಿಗೋಷ್ಟಿಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶವನ್ನು ಸಿಗುವುದು. ಈ ದಿನದ ಪರಿಸ್ಥಿತಿಯನ್ನು ನೀವು ಬುದ್ಧಿವಂತಿಕೆ ಮತ್ತು ಬಹಳ ಎಚ್ಚರಿಕೆಯಿಂದ ನಿಭಾಯಿಸಿ. ಮನೆಯ ಹೆಚ್ಚುವರಿ ಆದಾಯದಿಂದ ಹುಮ್ಮಸ್ಸು ಹೆಚ್ಚುವುದು.
ಧನು
ಹಿಂದೆ ಕೆಲಸ ತಿರಸ್ಕರಿಸಿದವರು ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚನೆ ಮಾಡಿ. ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಸಫಲತೆಯನ್ನು ಹೊಂದುವರು.
ಮಕರ
ನಿಮ್ಮೆಲ್ಲಾ ಕೆಲಸಗಳಿಗೂ ಕುಟುಂಬ ವರ್ಗದವರ ಉತ್ತಮವಾದ ಬೆಂಬಲವಿರುವುದು. ರಾಜಕೀಯ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ಗಮನಿರಿ. ಶ್ರಮದ ಬದುಕಿನಿಂದ ಹೊಸ ಘಟ್ಟವನ್ನು ತಲುಪುವಂತಾಗಲಿದೆ.
ಕುಂಭ
ಕಲೆ, ಅಲಂಕಾರಿಕ ಹಾಗೂ ವೈಭೋಗ ವಸ್ತುಗಳಿಂದಾಗಿ ಹೆಚ್ಚಿನ ಲಾಭಾಂಶವನ್ನು ಈ ದಿನದಲ್ಲಿ ನೀವು ನಿರೀಕ್ಷಿಸಬಹುದು. ಮನೆಯಲ್ಲಿ ಮಂಗಳಕಾರ್ಯಗಳು ನೆಡೆಯುವ ಸೂಚನೆ ಕಾಣುತ್ತದೆ. . ನಿಮ್ಮ ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
ಮೀನ
ಚರ ಅಥವಾ ಸ್ಥಿರ ಸ್ವತ್ತುಗಳು ಸಿಗುವ ಸಂಭವವಿದೆ. ಮನೆಯ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಕುಟುಂಬ ಸದಸ್ಯರ ಆರೋಗ್ಯದ ಬಗೆಗಿನ ಚಿಂತೆ ತಪ್ಪಿದ್ದಲ್ಲ. ಪೋಲೀಸ್ ಸಿಬ್ಬಂದಿಗಳಿಗೆ ಹೆಚ್ಚಿನ ಕೆಲಸವಿರಲಿದೆ.