ಬೆಂಗಳೂರು: ಭಾರತದ ತಾರೆಗಳಾದ ಸುಮಿತ್ ನಗಾಲ್, ಶ್ರೀವಲ್ಲಿ ಭಮಿಡಿಪಾಟಿ ಅವರು ವಿಶ್ವ ಟೆನಿಸ್ ಲೀಗ್ನ ಮೂರನೇ ದಿನವಾದ ಶುಕ್ರವಾರ ಉತ್ತಮ ಆಟದ ಪ್ರದರ್ಶನದಿಂದ ಗಮನ ಸೆಳೆದರು. ಈಗಲ್ಸ್ ತಂಡ ದಿನದ ಮೊದಲ ಪಂದ್ಯದಲ್ಲಿ 22–12 ರಿಂದ ಹಾಕ್ಸ್ ತಂಡವನ್ನು ಸೋಲಿಸಿತು. ಮೂರನೇ ಗೆಲುವಿನೊಡನೆ ಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿತು.

ಮೂರು ಪಂದ್ಯಗಳಿಂದ ಈಗಲ್ಸ್ 65 ಅಂಕಗಳನ್ನು ಪಡೆದಿದೆ. ಕಬ್ಬನ್ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಶನಿವಾರ ನಡೆಯಲಿದೆ. ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಈ ಲೀಗ್ ಆಯೋಜಿಸಿದೆ.

ಮೊದಲು ನಡೆದ ಮಿಶ್ರ ಡಬಲ್ಸ್ನಲ್ಲಿ ‘ಟೆನಿಸ್ನ ದಂಪತಿ’ ಜೋಡಿ ಉಕ್ರೇನಿನ ಎಲಿನಾ ಸ್ವಿಟೋಲಿನಾ – ಫ್ರಾನ್ಸ್ನ ಗೇಲ್ ಮಾನ್ಫಿಲ್ಸ್ ‘ಎದುರಾಳಿ’ಗಳಾದರು. ಹಾಕ್ಸ್ ತಂಡಕ್ಕೆ ಆಡಿದ ಯುಕಿ ಭಾಂಬ್ರಿ– ಸ್ವಿಟೋಲಿನಾ 6–4 ರಿಂದ ಈಗಲ್ಸ್ ತಂಡದ ಮಾನ್ಫಿಲ್ಸ್ –ಶ್ರೀವಲ್ಲಿ ಭಮಿಡಿಪಾಟಿ ಜೋಡಿಯನ್ನು ಮಣಿಸಿದರು.

ಈಗಲ್ಸ್ ಪರ ಪುರುಷರ ಸಿಂಗಲ್ಸ್ ಆಡಿದ 28 ವರ್ಷ ವಯಸ್ಸಿನ ನಗಾಲ್ 6–1 ರಿಂದ ವಿಂಬಲ್ಡನ್ ಫೈನಲಿಸ್ಟ್ ಡೆನಿಸ್ ಶಪೊವಲೋವ್ ಅವರನ್ನು ಸೋಲಿಸಿ ಗಮನ ಸೆಳೆದರಲ್ಲದೇ ಈಗಲ್ಸ್ಗೆ ಮುನ್ನಡೆ ಗಳಿಸಿಕೊಟ್ಟರು. ಮಹಿಳಾ ಸಿಂಗಲ್ಸ್ನಲ್ಲಿ ಶ್ರೀವಲ್ಲಿ ಭಮಿಟಿಪಾಟಿ 6–2 ರಿಂದ ಹಾಕ್ಸ್ನ ಮಾಯಾ ರಾಜೇಶ್ವರನ್ ರೇವತಿ ಅವರನ್ನು ಸೋಲಿಸಿ ತಂಡದ ಮುನ್ನಡೆ ಹೆಚ್ಚಿಸಿದರು.

ಮಹಿಳಾ ಡಬಲ್ಸ್ನಲ್ಲಿ ಶ್ರೀವಲ್ಲಿ– ಪೌಲಾ ಬಡೋಸಾ ಜೋಡಿ 6–3 ರಿಂದ ಮಾಯಾ ರಾಜೇಶ್ವರನ್ ರೇವತಿ– ಸ್ವಿಟೋಲಿನಾ ಜೋಡಿಯನ್ನು ಸೋಲಿಸಿ ಈಗಲ್ಸ್ ಫೈನಲ್ ಹಾದಿ ಬಲಗೊಳಿಸಿದರು. ದುಬೈನಲ್ಲಿ ನೆಲೆಸಿರುವ ಸ್ಪೇನ್ನ ಆಟಗಾರ್ತಿ ಬಡೋಸಾ, ಈ ವೇಳೆ ಮಾತನಾಡಿ ‘ಶ್ರೀವಲ್ಲಿ ಭಾರತದ ಭವಿಷ್ಯದ ತಾರೆ’ ಎಂದು ಶ್ಲಾಘಿಸಿದರು.ಡಬಲ್ಸ್ನಲ್ಲಿ ಎದುರಾಳಿಗಳಾಗಿ ಆಡಿದ ನಂತರ ಗೇಲ್ ಮಾನ್ಫಿಲ್ಸ್ (ಎಡಗಡೆ) ಅವರು ಪತ್ನಿ ಎಲಿನಾ ಸ್ವಿಟೋಲಿನಾ ಅವರನ್ನು ಚುಂಬಿಸಿ ಅಭಿನಂದಿಸಿದರು. ಸ್ವಿಟೋಲಿನಾ ಈ ಪಂದ್ಯದಲ್ಲಿ ಯುಕಿ ಭಾಂಬ್ರಿ ಜೊತೆ ಆಡಿ ಜಯಗಳಿಸಿದರು ಚಿತ್ರಗಳು: ಜನಾರ್ದನ ಬಿ.ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.