ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಪಾಪಗಳೆಲ್ಲವೂ ನಾಶವಾದ ದಿವ್ಯ ಅನುಭವವನ್ನು ಹೊಂದುವಿರಿ
Published 10 ಜೂನ್ 2024, 23:43 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದು ಮಿತ್ರರ ಹಾಗೂ ಸಹೋದ್ಯೋಗಿಗಳ ಮೇಲಿಟ್ಟ ಪ್ರೀತಿ ವಿಶ್ವಾಸವು ಅನುಭವಕ್ಕೆ ಬರಲಿದೆ.  ಶಿಶುವಿನ ಜನನ ಕುಟುಂಬದ ಸಂತೋಷಕ್ಕೆ ಕಾರಣವಾಗುತ್ತದೆ. ವಾಣಿಜ್ಯ ವ್ಯವಹಾರಗಳು ಲಾಭ ತರಲಿವೆ.
ವೃಷಭ
ಕುಲದೇವರ ಅಥವಾ ಕಾರಣೀಕ ಸ್ಥಳದ ಭೇಟಿಯಿಂದಾಗಿ ಪಾಪಗಳೆಲ್ಲವೂ ನಾಶವಾದ ದಿವ್ಯ ಅನುಭವವನ್ನು ಹೊಂದುವಿರಿ. ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ, ಮನೆಯಲ್ಲಿಯೂ ನೆಮ್ಮದಿಯ ವಾತಾವರಣ ಇರಲಿದೆ.
ಮಿಥುನ
ಸ್ವಂತ ಉದ್ಯಮದಲ್ಲಿರುವವರು ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಬಹಳ ಉತ್ಸಾಹ ತೋರಿ, ಯಶಸ್ವಿಯಾಗುವರು. ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳುವ ಹಂತಕ್ಕೆ ಬರಲಿವೆ.
ಕರ್ಕಾಟಕ
ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ. ಹಿಡಿದ ಕೆಲಸಗಳು ಹಂತ ಹಂತವಾಗಿ ಅಥವಾ ಒಂದೊಂದಾಗಿ ಮುಗಿಸುವ ಪ್ರಯತ್ನವಿರಲಿ. ವಿಶ್ವಾಸವಿರಲಿ.
ಸಿಂಹ
ಸ್ವಾಧ್ಯಯನ ನಡೆಸದೆ ವಿದ್ಯಾರ್ಥಿಗಳ ಮುಂದೆ ಪಾಠ ಮಾಡಲು ತೆರಳಿ ವಿಷಯಗಳು ಅದಲು ಬದಲು ಮಾಡಿಕೊಳ್ಳುವ ಸಾಧ್ಯತೆ ಇದೆ. ಗೌರವಾನ್ವಿತ ವ್ಯಕ್ತಿಯೆಂದು ಅನಿಸಿಕೊಂಡ ನಿಮಗೆ ಸಮಾಜದಲ್ಲಿ ಅಪಮಾನವಾಗಬಹುದು.
ಕನ್ಯಾ
ಸಲಹೆ ಸೂಚನೆಗಳನ್ನು ಹೆಚ್ಚಿನ ಯೋಚನೆ ಇಲ್ಲದೆ ಮೇಲಧಿಕಾರಿಗಳು ಒಪ್ಪುವಂತೆ ಆಗುತ್ತದೆ. ಈ ದಿನ ದೈಹಿಕ  ಶ್ರಮ ಕಡಿಮೆ ಇದ್ದರೂ ಹೆಚ್ಚಿನ ಆದಾಯವಿರುವುದರಿಂದ ಮನಸ್ಸಿಗೆ ಸ್ವಲ ನೆಮ್ಮದಿ ತೋರುವುದು.
ತುಲಾ
ಕೆಲವು ವಸ್ತುಗಳ ದರ್ಶನದಿಂದ ಪೂರ್ವಾಶ್ರಮದ ಘಟನೆಗಳು ನೆನಪಾಗಿ ಜೊತೆಗಾರರೊಂದಿಗೆ ಹಂಚಿಕೊಳ್ಳುವಿರಿ. ಬದಲಾದ ಕೆಲವು ಗೃಹೋಪಯೋಗಿ ವಸ್ತುಗಳು ಅಡ್ಡಪರಿಣಾಮ ಉಂಟುಮಾಡುವುದು
ವೃಶ್ಚಿಕ
ಉತ್ತಮ ಗುಣಮಟ್ಟದ್ದೆಂದು ತಿಳಿದು ತಂದಂಥ ವಸ್ತುಗಳು ಕಳಪೆ ಪ್ರದರ್ಶನ ನೀಡುತ್ತವೆ. ಕುಟುಂಬದ ಅಭಿವೃದ್ಧಿಗಾಗಿ ಉತ್ತಮ ಯೋಚನೆಗಳು ಬರಲಿವೆ. ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ.
ಧನು
ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿ ಸಂಘಟಿಸಲು ಸುದಿನ. ಪಿತೃ ಸಮಾನರಿಂದ ಮನೆಯಲ್ಲಿ ನಡೆಯುವ ಶುಭ ಸಮಾರಂಭಕ್ಕೆ ಆಶೀರ್ವಾದ  ಪಡೆಯಲು ಮರೆಯದಿರಿ.
ಮಕರ
ಬಾಣಸಿಗರಿಗೆ ಕಾರ್ಯದ ಶುಚಿತ್ವವು ರುಚಿತ್ವದಷ್ಟೇ ಪ್ರಾಮುಖ್ಯ  ಪಡೆದುಕೊಳ್ಳುತ್ತದೆ. ಉದ್ಯಮಿ ಹಾಗೂ ಅಧಿಕಾರಿಗಳು ನಿಯಂತ್ರಣದಲ್ಲಿ ಇರುವರು. ಸೌಂದರ್ಯವರ್ಧಕಗಳ ಮಾರಾಟಗಾರರಿಗೆ ಲಾಭದ ದಿನ.
ಕುಂಭ
ನಿಮ್ಮ ಪ್ರಭಾವದಿಂದ ಬೇರೆಯವರು ಲಾಭ ಪಡೆಯುವಷ್ಟು ಯೋಗ್ಯತೆ ನಿಮ್ಮದಾಗುತ್ತದೆ. ಲಾಭದಾಯಕ ನಡೆಯುವ ವ್ಯವಹಾರದ ಮೇಲೆ ನಿಗಾ ಇರಲಿ. ಮುಖ್ಯ ವಿಚಾರ ಮರೆಯದಿರಿ
ಮೀನ
ಮಕ್ಕಳ ಸರ್ವತೋಮುಖ ಚಟುವಟಿಕೆ ಮತ್ತು ವಿದ್ಯಾಭ್ಯಾಸ ಉತ್ತಮವಾಗಿದ್ದು , ಶಾಂತಿ ತುಂಬಿರುತ್ತವೆ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನಾಗಲಿದೆ. ಪ್ರಯಾಣದಿಂದ ಆಯಾಸವಾಗಬಹುದು.