ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರು ಬಾಳ ಸಂಗಾತಿಯನ್ನು ಪಡೆಯುವ ಸೂಚನೆಗಳು ಕಾಣಲಿವೆ
Published 11 ಜೂನ್ 2024, 23:29 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಶುಭದ ಸಂಕೇತವೆಂದು ಕಂಡ ವಿಷಯಗಳ ಬಗ್ಗೆ ಹೆಚ್ಚಿನ ಯೋಚನೆಯ ಅಗತ್ಯವಿಲ್ಲ. ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು  ಬರಲಿದೆ.
ವೃಷಭ
ಮುಕ್ತ ಮಾತುಕತೆಯಿಂದ ಮನೋಭಿಲಾಷೆಯ ಸ್ಥಾನಮಾನ ದೊರೆಯುತ್ತದೆ. ತಿಳಿಯದೆ ಮಾಡಿದ ತಪ್ಪಿನಿಂದಾಗಿ ಅನುಭವಿಸುತ್ತಿರುವ ಕಷ್ಟಗಳಿಗೆ ಪರಿಹಾರವನ್ನು ಪ್ರಾಜ್ಞರಿಂದ ಪಡೆಯಿರಿ.
ಮಿಥುನ
ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಸ್ವೀಕರಿಸುವ ಉತ್ತಮ ಅವಕಾಶಗಳು ಎದುರಾಗಲಿವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಸಾಂಸಾರಿಕ ಜವಾಬ್ದಾರಿಗಳು ಹೆಚ್ಚಲಿವೆ.
ಕರ್ಕಾಟಕ
ದಾನ-ಧರ್ಮ ಸ್ವಭಾವವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ಮನೆಯ ಶುಭ ಸಮಾರಂಭಕ್ಕೆ ಹೋಗುವ ಸಲುವಾಗಿ ಕಿರು ಪ್ರಯಾಣ ಇರುವುದು. ದೇವರ ಅನುಗ್ರಹಕ್ಕೆ ಪ್ರಾರ್ಥನೆ ಇರಲಿ.
ಸಿಂಹ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ನಡೆದು ಹೋದ ದುರ್ಘಟನೆಗಳನ್ನು ಪದೇ ಪದೇ ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ.
ಕನ್ಯಾ
ಹೊಸ ಒಪ್ಪಂದವನ್ನು ಒಪ್ಪಿಕೊಳ್ಳುವ ಮುನ್ನ ತುಸು ಯೋಚಿಸುವುದು ಉತ್ತಮ. ಅವಿವಾಹಿತರು ಬಾಳ ಸಂಗಾತಿಯನ್ನು ಪಡೆಯುವ ಸೂಚನೆಗಳು ಕಾಣಲಿವೆ.
ತುಲಾ
ಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳನ್ನು ಆರಂಭಿಸಿದಲ್ಲಿ ಜಯ ಸಿಗುತ್ತದೆ. ವಿದ್ಯಾರ್ಥಿ ಜೀವನವನ್ನು ಇಷ್ಟ ಪಡುವವರಿಗೆ ಹೆಚ್ಚಿನ ಅಧ್ಯಯನಕ್ಕೆ ಸಕಾಲವಾಗಿರುತ್ತದೆ.
ವೃಶ್ಚಿಕ
ಆರ್ಥಿಕ ಬಲ ಕಡಿಮೆ ಹೊಂದಿರುವ ನಿಮಗೆ ಮಹಾಗಣಪತಿಯ ಆರಾಧನೆ ಶುಭ ಉಂಟು ಮಾಡುತ್ತದೆ. ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರು ಬರಲಿದ್ದಾರೆ.
ಧನು
ವಿನಾಕಾರಣ ಬೇರೆಯವರ ಮನಸ್ಸನ್ನು ನೋಯಿಸುವುದು ಸರಿಯಲ್ಲವೆಂದೂ ಗೊತ್ತಿದ್ದರೂ ಆ ತಪ್ಪು ನಡೆಯುವ ಸಾಧ್ಯತೆ ಇರುತ್ತದೆ. ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆಯಿಂದ ಮಾನಸಿಕ ನೆಮ್ಮದಿ. 
ಮಕರ
ಹಲವು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರ ಅಪೇಕ್ಷಿಸಬಹುದು. ವಿವಾಹ ವಿಚಾರವಾಗಿ ಮುಂದುವರಿದ ಸಂಬಂಧಗಳು ವಿನಾಕಾರಣ ಮುರಿದು ಬೀಳುವಂತಾಗಬಹುದು.
ಕುಂಭ
ಸಾಕುಪ್ರಾಣಿಯ ತೀವ್ರ ಅನಾರೋಗ್ಯ ದುಃಖಕರವನ್ನಾಗಿ ಮಾಡಬಹುದು. ಸ್ನೇಹಿತರೊಡನೆ ಸುಂದರ ಸಂಜೆಯನ್ನು ಕಳೆಯುವ ಅವಕಾಶಗಳನ್ನು ತಪ್ಪಿಸಿಕೊಳ್ಳದಿರಿ. 
ಮೀನ
ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಅರ್ಧದ ಹಾದಿಯನ್ನು ಮಾತ್ರ ನೋಡುವುದು. ಅನಿರೀಕ್ಷಿತ ಬಂಧುಗಳ ಆಗಮನವು ದಿನಚರಿಯನ್ನು ಅದಲು ಬದಲು ಮಾಡುತ್ತದೆ.