ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಬಲ ಕೂಡಿ ಬರಲಿದೆ
Published 22 ಮಾರ್ಚ್ 2024, 2:13 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಸೆಯಂತೆ ವಿದೇಶಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಲಭಿಸುವುದು. ಜೀವನದಲ್ಲಿ ಹೊಸ ಚೈತನ್ಯ ತುಂಬಿ, ಆಸಕ್ತಿ ಹೆಚ್ಚಿಸಿಕೊಳ್ಳಿ. ಅವಿವಾಹಿತರಿಗೆ ಸೂಕ್ತ ಸಂಬಂಧಗಳು ಸ್ನೇಹಿತರ ಬಳಗದಿಂದ ಒದಗಿಬರಬಹುದು.
ವೃಷಭ
ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಸರ್ಕಾರಿ ನೌಕರರು ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಪ್ರಯಾಣ ನೀವು ಅಂದುಕೊಂಡಂತೆ ಸುಗಮವಾಗಿರುತ್ತದೆ.
ಮಿಥುನ
ಕಾರ್ಯದ ಒತ್ತಡ ತೀವ್ರವಾದ ಕಾರಣ ಶಿರೋವೇದನೆ ಕಾಡಲಿದೆ. ಬಂಧುಗಳ ಸಹಾಯವನ್ನು ನಯವಾಗಿ ನಿಷ್ಠೂರಗಳಿಲ್ಲದೇ ನಿರಾಕರಿಸುವ ಮಾರ್ಗ ಅತ್ಯಂತ ಶುಭಪ್ರದವಾದದ್ದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ.
ಕರ್ಕಾಟಕ
ಈ ದಿನದ ಕಹಿ ಘಟನೆಗಳಿಗೆ ಹೆಚ್ಚು ಪ್ರಾಶಸ್ತ ಕೊಡುವ ಅವಶ್ಯಕತೆಯಿಲ್ಲ. ಅಂಥ ಘಟನೆಗಳನ್ನು ನಿರ್ಲಕ್ಷಿಸಬಹುದು. ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಕೆಲವು ತಂತ್ರಗಾರಿಕೆಯನ್ನು ನಡೆಸಬೇಕಾಗುತ್ತದೆ.
ಸಿಂಹ
ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ಇಂದು ಸರ್ಕಾರದಿಂದ ಅನುಕೂಲ ಉಂಟಾಗುವುದು. ಉನ್ನತ ಹುದ್ದೆಯಿಂದ ಮನಸ್ಸಿಗೆ ಖುಷಿ ಇದ್ದರೂ ಕೆಲಸದ ಒತ್ತಡದಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು.
ಕನ್ಯಾ
ರಾಜಕೀಯ ವ್ಯಕ್ತಿಗಳಿಗೆ ಇದ್ದಕ್ಕಿದ್ದಂತೆ ಜನಪ್ರಿಯತೆ ಉತ್ತುಂಗಕ್ಕೆ ಏರಬಹುದು. ಇದನ್ನು ನಂಬುವುದು ಕಷ್ಟವಾಗುವುದು. ಅಗೌರವಿಸಿದ ಸಂಬಂಧಿಕರ ಎದುರು ತಲೆ ಎತ್ತಿನಿಲ್ಲುವಂತಾಗುತ್ತದೆ.
ತುಲಾ
ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಇಂದಿನ ಕೊಡುಗೆಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತೀರಿ. ವಿಚಾರ ಸಂಕಿರಣ ಒಂದರಲ್ಲಿ ಭಾಗವಹಿಸುವ ಸಲುವಾಗಿ ನಿಮಗೆ ಆಮಂತ್ರಣ ಸಿಗಲಿದೆ.
ವೃಶ್ಚಿಕ
ನೇರ ನುಡಿಯ ಸ್ವಭಾವದಿಂದಾಗಿ ಸಹೋದ್ಯೋಗಿಗಳಲ್ಲಿ ಮನಸ್ತಾಪ ಉಂಟಾಗಬಹುದು. ವಿದ್ಯಾರ್ಥಿಗಳ ಮನೋಕಾಮನೆ ಇಂದು ಪೂರ್ಣಗೊಳ್ಳಲಿದೆ. ಮುಂದಿನ ಕಾರ್ಯ ಯೋಜನೆಗಳಿಗೆ ಸ್ಪಷ್ಟ ರೂಪ ಕೊಡುವಿರಿ.
ಧನು
ಎಲ್ಲ ವಿಷಯಗಳನ್ನು ಮುಕ್ತವಾಗಿ ಚರ್ಚಿಸಬೇಕೆಂಬ ಮನಸ್ಸಾಗುವುದು ಅದರಂತೆ ಚರ್ಚಿಸಲು ಸಿದ್ಧರಾಗುವಿರಿ. ಮಕ್ಕಳೊಂದಿಗೆ ವಿದೇಶಕ್ಕೆ ಪ್ರಯಾಣ ಮಾಡುವ ಸಂದರ್ಭ ಬರಲಿದೆ.
ಮಕರ
ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಯೋಗಾಭ್ಯಾಸವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ. ವರಮಾನದಲ್ಲಿ ಯಾವುದೇ ರೀತಿಯ ಕೊರತೆ ಇರುವುದಿಲ್ಲ.
ಕುಂಭ
ಮುಕ್ತ ಮನೋಭಾವ ನೀವಾಡುವ ಮಾತುಗಳಿಂದ ಬಹಿರಂಗಗೊಳ್ಳಲಿದೆ. ಪ್ರಮೋಷನ್ ಅವಕಾಶವನ್ನು ಕೈತಪ್ಪದಂತೆ ನೋಡಿಕೊಳ್ಳಿ. ಹೊಸ ಮನೆ ನಿರ್ಮಾಣಕ್ಕಾಗಿ ತಯಾರಿ ನಡೆಸಬಹುದು.
ಮೀನ
ಎಲ್ಲಾ ಬೆಳವಣಿಗೆಯಲ್ಲಿ ನಾಯಕತ್ವ ವಹಿಸುವುದರಿಂದ ಕೆಟ್ಟ ಜನಗಳ ದೃಷ್ಟಿದೋಷಕ್ಕೆ ಗುರಿಯಾಗಲಿದ್ದೀರಿ. ಅಧಿಕ ಪರಿಶ್ರಮದಿಂದ ಬಹು ದಿನಗಳ ಕನಸು ನನಸಾಗುತ್ತದೆ. ಕಂಕಣ ಬಲದ ಸಾಧ್ಯತೆ ಇರುವುದು.