ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯ ಯುವ ಕಲಾವಿದರಿಗೆ ಹೆಚ್ಚು ಅವಕಾಶಗಳು ಲಭಿಸುವುದು
Published 22 ಆಗಸ್ಟ್ 2024, 23:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾರಿಗೂ ಶಕ್ತಿಯಿಂದ ಗೆಲ್ಲಲಾಗದ ಕೆಲವು ಸವಾಲುಗಳನ್ನು ಯುಕ್ತಿ ಯಿಂದ ಸರಳವಾಗಿ ಗೆದ್ದು ಬೀಗುವಿರಿ. ಹೋಟೆಲ್ ಉದ್ಯಮದವರಿಗೆ ಅತ್ಯಧಿಕ ಲಾಭ ಪ್ರಾಪ್ತಿಯಾಗುವುದು. ನೀಲಿ ಬಣ್ಣ ಶುಭ ತರಲಿದೆ.
ವೃಷಭ
ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆತು ವಿದ್ಯಾಭ್ಯಾಸಕ್ಕೆ ಅವಕಾಶಗಳು ದೊರೆಯುತ್ತವೆ. ಸಹೋದ್ಯೋಗಿಗಳಿಂದ ಕಾರ್ಯಾನುಕೂಲ ಆಗುತ್ತದೆ. ವ್ಯಾಪಾರಿಗಳು ವ್ಯಾಪಾರದಲ್ಲಿ ಪ್ರಬುದ್ಧತೆಯಿಂದ ವ್ಯವಹರಿಸಿ.
ಮಿಥುನ
ನಿರುದ್ಯೋಗಿಗಳಿಗೆ ಜೀವನ ನಿರ್ವಹಿಸಲು ಸಾಕಾಗುವಂಥ ವರಮಾನವಿರುವ ಸಣ್ಣಮಟ್ಟದ ಕೆಲಸ ದೊರೆತು ಸಂತಸವಾಗಲಿದೆ. ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.
ಕರ್ಕಾಟಕ
ಹಿರಿಯರಿಂದ ಅಪೂರ್ಣವಾದಂಥ ಕೆಲಸವನ್ನು ಪೂರ್ಣಗೊಳಿಸುವಂಥ ಅವಕಾಶ ನಿಮಗೆ ಒದಗಿಬರಲಿದೆ. ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗುವುದು.
ಸಿಂಹ
ಅನಾರೋಗ್ಯ ಅಥವಾ ಇನ್ನಿತರ ಕಾರಣಗಳಿಂದಾಗಿ ಏರುಪೇರಾಗಿದ್ದ ಮಕ್ಕಳ ವೇಳಾಪಟ್ಟಿಯು ನಿಧಾನವಾಗಿ ಸರಿಯಾಗುತ್ತದೆ. ಅನಿವಾರ್ಯದ ಪ್ರಯಾಣ ಹೆಚ್ಚಲಿದೆ. ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆಗಳಿದೆ.
ಕನ್ಯಾ
ಸುಖಕರವಾಗಿರುವ ದಾಂಪತ್ಯದಲ್ಲಿ ಬೇರೆಯವರ ಮಾತಿಗೆ ಆಸ್ಪದ ಕೊಟ್ಟು ಮೋಸ ಹೋಗಬೇಡಿ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಯಾಗುವ ಸಂದರ್ಭವು ಒದಗಿ ಬರಲಿದೆ. ದ್ವಿಚಕ್ರ ವಾಹನ ಖರೀದಿ ಯೋಗವಿದೆ.
ತುಲಾ
ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಯುವ ಕಲಾವಿದರಿಗೆ ಹೆಚ್ಚು ಅವಕಾಶಗಳು ಲಭಿಸುವುದು.
ವೃಶ್ಚಿಕ
ಕೆಲಸ ಕಾರ್ಯಗಳಲ್ಲಿ ಉತ್ಸಾಹವನ್ನು ಕಾಣುವಿರಿ. ಪ್ರತಿಭೆ ಬೆಳಕಿಗೆ ಬರಲಿದೆ. ಗುಂಪು ಚಟುವಟಿಕೆಗಳಿಗೆ ನಿಮ್ಮ ಮುಂದಾಳತ್ವವು ಅನಗತ್ಯವಾಗಿರುವುದು. ಖಾದಿ ಉದ್ಯಮದವರಿಗೆ ಸಹಾಯ ಸೌಲಭ್ಯಗಳು ದೊರೆಯಲಿವೆ.
ಧನು
ಸಂತೋಷದ ಸುದ್ದಿಯನ್ನು ಮಾತ್ರ ತಿಳಿಸಿ ದುಃಖದ ವಿಷಯವನ್ನು ತಿಳಿಸದಿರುವುದು ಸರಿ ಎನ್ನಿಸುವುದಿಲ್ಲ. ನೈತಿಕ ಶಕ್ತಿ ಹೆಚ್ಚುವುದರಿಂದ ಕೆಲಸದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ.
ಮಕರ
ನೌಕರರ ಜತೆಗಿನ ವಿಶ್ವಾಸವು ಅತಿಯಾಗಿ ಸಂಸ್ಥೆಗೆ ನಷ್ಟವಾಗಬಹುದು. ಸಂಸಾರದ ವಿಷಯಗಳತ್ತ ಗಮನ ಹರಿಸುವಿರಿ. ಸಣ್ಣಪುಟ್ಟ ಭಿನ್ನಾಭಿಪ್ರಾಯ ದೂರಾಗುವುದು.
ಕುಂಭ
ಖಾಸಗಿ ಸಂಸ್ಥೆಯಿಂದ ಅಥವಾ ಒಬ್ಬ ವ್ಯಕ್ತಿಯಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡು ಸ್ವಂತ ಉದ್ಯಮವನ್ನು ಆರಂಭಿಸುವ ಸಂಭವವಿದೆ. ಮನೆ ನಿರ್ಮಾಣ ಕಾರ್ಯವನ್ನು ಅನಿವಾರ್ಯ ಪರಿಸ್ಥಿತಿಯಿಂದ ನಿಲ್ಲಿಸಬೇಕಾಗುತ್ತದೆ.
ಮೀನ
ಒಪ್ಪಂದದಲ್ಲಿ ವ್ಯವಹಾರಗಳನ್ನು ಮಾಡುತ್ತಿರುವವರ ಸಂಘದಲ್ಲಿ ಹಣಕಾಸಿನ ಬಗ್ಗೆ ಸಣ್ಣಪುಟ್ಟ ಮಾನಸಿಕ ಭಿನ್ನಾಭಿಪ್ರಾಯಗಳು ಉದ್ಭವಗೊಳ್ಳಲಿವೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗಲಿದೆ.
ADVERTISEMENT
ADVERTISEMENT