ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರದಲ್ಲಿ ನಷ್ಟವಾಗಬಹುದು
Published 24 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಕಸ್ಮಿಕವಾಗಿ ಹಳೆಯ ಗೆಳೆಯನ ಭೇಟಿಯಾಗಲಿದೆ. ಆತಂಕವಿಲ್ಲದೆ ಕೆಲಸ ಕಾರ್ಯಗಳು ಸಾಗುವುದು. ಆಹಾರ ಸೇವನೆಯ ವಿಷಯದಲ್ಲಿ ಆದಷ್ಟು ಜಾಗೃತರಾಗಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
ವೃಷಭ
ನಿಮ್ಮ ಚಟುವಟಿಕೆಯಲ್ಲಿ ಟೀಕೆಗಳಿಗೆ ಕಿವಿಯೊಡ್ಡಿದರೆ ಯಾವುದೇ ಉಪಯೋಗವಾಗುವುದಿಲ್ಲ, ಕೇವಲ ಸಮಯ ಮಾತ್ರಾ ಹಾಳಾಗುವುದು ಎಂದು ತಿಳಿದಿರಲಿ. ವಾಹನಗಳಿಂದ ಆದಾಯವನ್ನು ನಿರೀಕ್ಷಿಸಬಹುದು.
ಮಿಥುನ
ಸ್ನೇಹಿತರು ನಿಮ್ಮ ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಂಡು ಲಾಭ ಮಾಡಿಕೊಳ್ಳಬಹುದು. ಜವಳಿ ವ್ಯಾಪಾರಿಗಳು ವಿಶೇಷ ರಿಯಾಯಿತಿಯಂತಹ ಮಾರಾಟಗಳಿಂದ ಹೆಚ್ಚಿನ ಲಾಭವು ಉಂಟಾಗುವುದು.
ಕರ್ಕಾಟಕ
ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ರಾಸಾಯನಿಕ ಶಾಸ್ತ್ರದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಬೇಕಾಗುವುದು. ನಿಮ್ಮ ಆಲಸ್ಯದಿಂದಾಗಿ ಅಧಿಕಾರ ಹೋಗುವ ಪರಿಸ್ಥಿತಿ ಉಂಟಾಗುವುದು. ಎಚ್ಚರದಿಂದಿರಿ.
ಸಿಂಹ
ಹಿಂದೆ ಯಾವುದೋ ದಿನ ಮಾಡಿದ ಕೆಲಸದ ಫಲವಾಗಿ ಈ ದಿನ ಅದರ ಲಾಭ ಬಂದು ಕೈ ಸೇರಿದ ಸಂತಸ ಆಗಲಿದೆ. ಪ್ರತಿಭೆಗೆ ಅನುಗುಣವಾದ ಉದ್ಯೋಗ ಅವಕಾಶ ದೊರೆಯಲಿದೆ. ಭಿನ್ನಾಭಿಪ್ರಾಯಗಳು ದೂರಾಗುವವು.
ಕನ್ಯಾ
ಭೂಸಂಬಂಧಿ ಅದರಲ್ಲೂ ಕೃಷಿ ಭೂಮಿ ವ್ಯವಹಾರದಲ್ಲಿರುವವರಿಗೆ ಧನಲಾಭವಾಗುವುದು. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಮಸ್ಯೆಗೆ ಸಿಕ್ಕಿಕೊಳ್ಳಬೇಡಿ.
ತುಲಾ
ವಿಶೇಷವಾದ ತಿಂಡಿ-ತಿನಿಸುಗಳು ಪ್ರಾಪ್ತಿಯಾಗಿ ಸಂತೋಷ ಉಂಟಾಗುತ್ತದೆ. ಹಳೆಯ ಜವಾಬ್ದಾರಿ ಬದ್ಧತೆ ಇವುಗಳಿಂದ ಈ ದಿನ ಮುಕ್ತಿಯನ್ನು ಹೊಂದಬಹುದು. ಮಹಾಗಣಪತಿಯನ್ನು ಆರಾಧಿಸಿ.
ವೃಶ್ಚಿಕ
ಈ ದಿನದ ಅಂತ್ಯದಲ್ಲಿ ನಾಳೆಯ ದಿನದ ಕೆಲಸಗಳ ಬಗ್ಗೆ ಗಮನಹರಿಸಿ ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದರಿಂದ ನಾಳೆ ಸುಲಭವಾಗುತ್ತದೆ. ನಿಮ್ಮ ಈ ದಿನದ ಕೆಲಸದಿಂದ ನಿಮ್ಮ ಬದುಕಿಗೆ ಅರ್ಥ ಸಿಗುವಂತಾಗಲಿದೆ.
ಧನು
ಚರ್ಚೆ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಜಾಗರೂಕತೆಯನ್ನು ವಹಿಸಿರಿ. ಸಾಂಸಾರಿಕ ವಿಚಾರಕ್ಕೆ ಸಂಬಂಧಿಸದಂತೆ ಈ ದಿನ ಆತುರದಿಂದ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಕೆಂಪು ಶುಭ ತರುವುದು.
ಮಕರ
ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ. ನಿಮ್ಮ ಸ್ವಾರ್ಥದ ಬದುಕಿಗಾಗಿ ಇನ್ನೊಬ್ಬರ ಭಾವನೆಗಳನ್ನು ಒಡೆಯಬೇಡಿ. ಸ್ನೇಹಿತರೊಂದಿಗೆ ಅಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ.
ಕುಂಭ
ಅನಿವಾರ್ಯದಿಂದ ಅಥವಾ ಬೇಜವಾಬ್ದಾರಿಯಿಂದ ಅವಶ್ಯಕತೆಗಿಂತ ಹೆಚ್ಚಾಗಿ ಹಣ ವ್ಯಯವಾಗುವುದು. ಶ್ರೀಮಂತಿಕೆಯ ಬದುಕಿಗೆ ಮನಸ್ಸು ಹಾತೊರೆಯುವುದು. ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚಿ.
ಮೀನ
ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ. ಹೃದಯ ಸಂಬಂಧವಾದ ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಷೇರು ವ್ಯವಹಾರದಲ್ಲಿ ನಷ್ಟವಾಗಬಹುದು.
ADVERTISEMENT
ADVERTISEMENT