ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಔಷಧ ವ್ಯಾಪಾರಿಗಳಿಗೆ ಲಾಭದ ದಿನ
Published 24 ಮಾರ್ಚ್ 2024, 22:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಔಷಧ ವ್ಯಾಪಾರಿಗಳಿಗೆ ಲಾಭದ ದಿನ. ಆಟಿಕೆಗಳ ಅಥವಾ ಕ್ರೀಡಾ ವಸ್ತುಗಳ ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಆಂಜನೇಯನ ಅನುಗ್ರಹ ಪಡೆದಲ್ಲಿ ಮಾನಸಿಕ ಧೈರ್ಯ ಹೆಚ್ಚಾಗುವುದು.
ವೃಷಭ
ಮಕ್ಕಳ ವಿಷಯದಲ್ಲಿ ಕಾಳಜಿಯನ್ನು ತೋರಿದಲ್ಲಿ ಭವಿಷ್ಯ ಉತ್ತಮಗೊಳ್ಳಲಿದೆ. ಕ್ರೀಡಾಸಕ್ತರಿಗೆ ಉತ್ತಮ ಸಮಯ ಮತ್ತು ಅವಕಾಶ ಸಿಗಲಿದೆ. ವೈವಾಹಿಕ ಜೀವನಕ್ಕೆ ಸಮಯ ಕೂಡಿಬರಲಿದೆ.
ಮಿಥುನ
ಆಪ್ತರ ಸಲಹೆ ತೆಗೆದುಕೊಂಡು ಮಾಡಿದ ಕೆಲಸ ಸಮಸ್ಯೆ ಇಲ್ಲದೆ ಮುಕ್ತಾಯ ಹಂತ ತಲುಪುವುದು. ತಾಂತ್ರಿಕ ಕ್ಷೇತ್ರದಲ್ಲಿ ನೂತನ ಉದ್ಯೋಗ ಸಂಪಾದನೆಗೆ ಹೊರಟಂಥ ವ್ಯಕ್ತಿಗಳಿಗೆ ಈ ದಿನ ಅಭಿವೃದ್ಧಿದಾಯಕ ಅನಿಸಲಿದೆ.
ಕರ್ಕಾಟಕ
ಜಮೀನು ಖರೀದಿ ಅಥವಾ ಜಮೀನಿನ ಗುತ್ತಿಗೆಯಂಥ ವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸುವುದು ಅಗತ್ಯವಾಗುತ್ತದೆ.
ಸಿಂಹ
ನೀರಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಗೊಳ್ಳುವ ಹಂತಕ್ಕೆ ಬರ ಲಿದೆ. ಸವಾಲೊಡ್ಡುವ ಸನ್ನಿವೇಶಗಳು ಸಹೋದರಿ ಅಥವಾ ಭಾವನ ಬಳಿಯಲ್ಲಿ ಎದುರಾಗಬಹುದು. ಹೈನು ಉತ್ಪನ್ನಗಳಿಂದ ಆದಾಯ ಪಡೆಯುವಿರಿ.
ಕನ್ಯಾ
ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಸಹೋದರರಿಗೋಸ್ಕರವಾಗಿ ತ್ಯಾಗ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಋಣಾತ್ಮಕವಾಗಿ ಚಿಂತಿಸದಿರಿ.
ತುಲಾ
ಬತ್ತದ ಉತ್ಸಾಹ, ಹುಮ್ಮಸ್ಸಿನಿಂದ ಹೊಸ ಅವಕಾಶಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕೃಷಿ ಕೆಲಸದಲ್ಲಿನ ಆಯುಧಗಳನ್ನು ಬಳಸುವಾಗ ಅತ್ಯಂತ ಜಾಗ್ರತೆಯಿಂದ ಕೆಲಸ ಮಾಡಿ.
ವೃಶ್ಚಿಕ
ತಾಯಿಯ ಅಥವಾ ಬಾಳ ಸಂಗಾತಿಯ ಮಾತನ್ನು ಮೀರದಿರುವುದು ಲೇಸು. ಉದ್ಯೋಗದಲ್ಲಿ ಎದುರಾಗುವ ಆಯ್ಕೆಯಂಥ ಸಮಸ್ಯೆಗೆ ಈ ದಿನ ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟಕರವೆನಿಸುವುದು.
ಧನು
ವ್ಯವಹಾರಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೃಧು ಧೋರಣೆಯಿಂದ ಕೆಲವು ಮಂದಿ ನಿಮ್ಮ ವಿರುದ್ಧ ಧ್ವನಿ ಎತ್ತುವ ಸಾಧ್ಯತೆ ಇದೆ. ಮನೆಯಲ್ಲಿ ಗುರು-ಹಿರಿಯರ ಶುಭ ಆಶೀರ್ವಾದದಿಂದ ಮಂಗಳ ಕೆಲಸ ನಡೆಯಲಿದೆ.
ಮಕರ
ಹೊಸ ಮನೆಯನ್ನು ಕೊಳ್ಳುವ ಬಗ್ಗೆ ದಲ್ಲಾಳಿಗಳೊಂದಿಗೆ ಮಾತುಕತೆ ನಡೆಸಬಹುದು. ಕೌಟುಂಬಿಕವಾಗಿ ಕೆಟ್ಟುಹೋದಂತಹ ಸಂಬಂಧಗಳು ಇಂದು ಮತ್ತೆ ಮರಳಿ ಸರಿಯಾಗಬಹುದು. ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ.
ಕುಂಭ
ಅಬಕಾರಿ ಮತ್ತು ಕಂದಾಯ ಇಲಾಖೆಯವರಿಗೆ ಉದ್ಯೋಗದಲ್ಲಿ ಹೆಸರು, ಕೀರ್ತಿಗಳನ್ನು ಕಾಪಾಡಿಕೊಳ್ಳಲು ಕಷ್ಟವಾಗಲಿದೆ. ವಿದ್ಯುತ್‌ ಸ್ಥಾವರದ ಕಾರ್ಮಿಕರು ವಿದ್ಯುತ್ ಶಕ್ತಿಯ ಬಳಕೆ ಮಾಡುವಾಗ ಗಮನವಿರಲಿ.
ಮೀನ
ಯಶಸ್ಸಿಗೆ ಕಾರಣರಾದವರನ್ನು ಮತ್ತು ಹೆಗಲು ಕೊಟ್ಟವರನ್ನು ಕಾರ್ಯ ಮುಗಿಯುವವರೆಗೆ ಜತೆಯಲ್ಲಿಯೆ ಇರಿಸಿಕೊಳ್ಳಿ. ಅಧಿಕವಾದ ಪ್ರಯತ್ನದಿಂದ ನಿವೇಶನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ.