ಢಾಕಾ: ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ)ಯು 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ದಶಕಗಳ ನಂತರ ಅಧಿಕಾರಕ್ಕೆ ಬಂದಿದೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಿಚಾರಣೆಗಾಗಿ ಬಾಂಗ್ಲಾಗೆ ಹಸ್ತಾಂತರಿಸುವಂತೆ ಬಿಎನ್ಪಿ ನಾಯಕರು ಭಾರತಕ್ಕೆ ಒತ್ತಾಯಿಸಿದ್ದಾರೆ.

ಕಾನೂನಿನ ಪ್ರಕಾರ, ಶೇಖ್ ಹಸೀನಾ ಅವರ ಹಸ್ತಾಂತರಕ್ಕೆ ನಾವು ಒತ್ತಾಯಿಸುತ್ತಾ ಬಂದಿದ್ದೇವೆ. ಇದೀಗ ಈ ಕುರಿತು ನಮ್ಮ ವಿದೇಶಾಂಗ ಸಚಿವರು ಭಾರತದೊಂದಿಗೆ ಮಾತುಕತೆ ನಡೆಸಿದ್ದು, ಅವರ ನಿರ್ಧಾರವನ್ನು ನಾವು ಕೂಡ ಸ್ವಾಗತಿಸುತ್ತೇವೆ ಎಂದು ಬಿಎನ್ಪಿ ಹಿರಿಯ ನಾಯಕ ಸಲಾವುದ್ದೀನ್ ಅಹಮದ್ ಹೇಳಿದ್ದಾರೆ.

2024ರಲ್ಲಿ ನಡೆದ ಸಾಮೂಹಿಕ ದಂಗೆಯ ನಂತರ, ಶೇಖ್ ಹಸೀನಾ ಅವರು ಬಾಂಗ್ಲಾದೇಶವನ್ನು ತೊರೆದಿದ್ದರು. ನಂತರ ಭಾರತಕ್ಕೆ ಬಂದಿದ್ದರು. ದಂಗೆಯಲ್ಲಾದ ಹತ್ಯೆಗಳ ಆರೋಪದ ಮೇಲೆ, ಶೇಖ್ ಹಸೀನಾ ಅವರಿಗೆ ಅಲ್ಲಿನ ನ್ಯಾಯಾಲಯವು, 2025ರ ನವೆಂಬರ್ನಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.