ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ದೂರ ಪ್ರಯಾಣವು ಆತಂಕಕ್ಕೆ ಎಡೆ ಮಾಡಿಕೊಡಬಹುದು
Published 28 ಮೇ 2024, 1:21 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಉತ್ತಮ ಸೌಕರ್ಯವನ್ನು ಮನೆಯಿಂದ ಹೊರಗೆ ಹುಡುಕುವಂತಹ ಪ್ರಯತ್ನವನ್ನು ಮಾಡುವಿರಿ. ಕಠಿಣ ಕೆಲಸವೊಂದಕ್ಕೆ ಕೈ ಹಾಕುವ ಮನಸ್ಸಾಗಲಿದೆ, ನಿಧಾನವಾಗಿ ಯೋಚಿಸಿ ನಿರ್ಧರಿಸಿ.
ವೃಷಭ
ವೃಷಭ: ಸ್ವಂತ ಉದ್ಯೋಗಸ್ಥರಿಗೆ ಬಿಡುವಿಲ್ಲದೆ ಕೆಲಸಗಳು ಪೂರ್ತಿಗೊಳಿಸಬೇಕಾದ ಸಂದರ್ಭ ಎದುರಾಗುವುದು. ಒಂದೇ ಬಾರಿ ಹೆಚ್ಚು ಹಣವನ್ನು ಒಂದು ಕೆಲಸಕ್ಕೆ ವಿನಿಯೋಗಿಸುವುದರ ಬದಲು ಕಂತಿನಲ್ಲಿ ತೀರಿಸುವ ಬಗ್ಗೆ ಯೋಚಿಸಿ.
ಮಿಥುನ
ಮಿಥುನ: ಹಳೆಯ ಸ್ನೇಹಿತರೊಂದಿಗಿನ ಭೇಟಿ, ಅವರೊಂದಿಗಿನ ಮಾತುಕತೆ, ವ್ಯವಹಾರಗಳ ಬಗ್ಗೆ ಚರ್ಚೆ ಹಾಗೂ ಹಳೆಯ ದಿನದ ನೆನಪುಗಳ ಮೆಲುಕು ಹೊಸ ಉತ್ಸಾಹವನ್ನು ಕೊಡಲಿದೆ. ಮಕ್ಕಳ ಮೇಲೆ ನಿಗಾ ಇರಲಿ.
ಕರ್ಕಾಟಕ
ಕರ್ಕಾಟಕ: ಹಲವು ದಿನಗಳಿಂದ ಪರಊರಿನ ಪ್ರಯಾಣ ಹೆಚ್ಚಿನ ಆಯಾಸ ಉಂಟುಮಾಡುವುದು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹೆಚ್ಚಿನ ಸಂಪಾದನೆ ಇರುವುದು. ರಾಜಕೀಯ ವಿದ್ಯಮಾನಗಳಿಂದ ಓಡಾಟವಾಗುವುದು.
ಸಿಂಹ
ಸಿಂಹ: ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯು ಈ ದಿನದಿಂದಲೇ ಉಂಟಾಗಲಿದೆ. ಗೃಹೋಪಕರಣದ ತಯಾರಕರಿಗೆ ಉತ್ತಮವಾದ ಅವಕಾಶಗಳು ಲಭಿಸಲಿವೆ.
ಕನ್ಯಾ
ಕನ್ಯಾ: ಸದ್ಯದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆಸಕ್ತಿ ವಹಿಸುವುದು ಉತ್ತಮವಾಗಿ ಕಾಣುತ್ತದೆ. ಮಗಳು ಮತ್ತು ಸೊಸೆ ಎನ್ನುವ ಭಾವನೆಯಿಲ್ಲದೆ ಸಮಾನವಾಗಿ ಕಾಣುವ ಗುಣದ ಉತ್ತಮ ಫಲಗಳು ಕಾಣಸಿಗುತ್ತವೆ.
ತುಲಾ
ತುಲಾ: ಇತರರಿಗೆ ಅಸೂಯೆಯಾಗದಂತೆ ಕಾರ್ಯಗಳನ್ನು ಸಾಧಿಸಿಕೊಳ್ಳುವ ಉತ್ತಮ ಗುಣ ನಿಮ್ಮಲ್ಲಿರುವುದರಿಂದ ಯಶಸ್ಸನ್ನು ಕಾಣುವಿರಿ. ದೂರಪ್ರಯಾಣವು ಆತಂಕಕ್ಕೆ ಎಡೆ ಮಾಡಿಕೊಡಬಹುದು.
ವೃಶ್ಚಿಕ
ವೃಶ್ಚಿಕ: ಕೆಲಸ ಕಾರ್ಯಗಳನ್ನು ಮಾಡುವ ರೀತಿಯನ್ನು ಒಬ್ಬರಿಗೆ ವಿಸ್ತಾರವಾಗಿ ವಿವರಿಸುವ ಮೂಲಕ ಅದರ ಚೌಕಟ್ಟು ನಿಮಗೆ ದೊರಕುತ್ತದೆ. ವಾರ್ಷಿಕವಾಗಿ ನೀವು ಆಚರಣೆ ಮಾಡುವ ದೇವತಾ ಕಾರ್ಯಗಳತ್ತ ಗಮನವನ್ನು ನೀಡಿ.
ಧನು
ಧನು:ಮನೆಯವರೆಲ್ಲರೂ ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ನಿಮ್ಮಿಚ್ಛೆಯಂತೆ ನಡೆದುಕೊಳ್ಳುವರು.ಹಿಂಸೆಯುಂಟಾಗುತ್ತದೆ ಎನ್ನಿಸುವ ವಿಚಾರದಿಂದ ಆದಷ್ಟು ದೂರ ಇರುವಂತಹ ಪ್ರಯತ್ನವನ್ನು ಮಾಡಿ.
ಮಕರ
ಮಕರ:ಮುಖ್ಯ ವಿಚಾರಗಳನ್ನು ಮರೆಯುವುದರಿಂದಾಗಿ ನಿಧಾನಗತಿ ಉಂಟಾಗಬಹುದು. ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇ ಬೇಕಾದ ಸಮಯ ಬರುವುದು. ಮನಸ್ಸಿನ ದುಗುಡ ನಿವಾರಣೆಗೆ ತಾಳ್ಮೆ ಅತ್ಯವಶ್ಯ.
ಕುಂಭ
ಕುಂಭ: ಯೋಗಾಭ್ಯಾಸ ಹಾಗೂ ವೈದ್ಯರ ಸಲಹೆಯಿಂದ ಆರೋಗ್ಯವು ಉತ್ತಮ ರೀತಿಯಲ್ಲಿ ಸುಧಾರಿಸುವುದು. ರಕ್ತ ಸಂಬಂಧಿ ಕಾಯಿಲೆಯನ್ನು ಹೊಂದಿದವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ಮೀನ
ಮೀನ: ಮನದಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳಿರಿ. ಸಾಮಾಜಿಕ ಸ್ಥಾನಮಾನಗಳನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ಕಟ್ಟುಪಾಡುಗಳು ಹೆಚ್ಚೆಂದು ಎನ್ನಿಸುವುದು.