ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಆಟೋಮೊಬೈಲ್ ಎಂಜಿನಿಯರ್‌ಗಳಿಗೆ ವಿಶೇಷ ಲಾಭ ಪ್ರಾಪ್ತಿ
Published 13 ಮಾರ್ಚ್ 2024, 23:47 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಈ ದಿನ ಗ್ರಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು . ನಿಮ್ಮ ಅಭಿರುಚಿಗೆ ತಕ್ಕ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೆಚ್ಚು ಸೂಕ್ತವಾಗಿರುತ್ತದೆ.
ವೃಷಭ
ಭೋಗ ವಸ್ತುವಿನ ಖರೀದಿಯ ಅವಕಾಶವು ನಿಮ್ಮದಾಗಲಿದೆ. ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕಾದೀತು. ಆಲಸ್ಯಮಯ ಸಮಯವನ್ನು ಅನುಭವಿಸುವಿರಿ.
ಮಿಥುನ
ಷೇರು ವ್ಯವಹಾರಗಳು ಇಂದು ಕೂಡಿ ಬರುವುವು. ಪರಿಶ್ರಮದ ಜೊತೆ ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡುವುದರಿಂದ ಅಧಿಕ ಲಾಭ. ಕುಟುಂಬದವರೊಡನೆ ಮನರಂಜನೆಗಾಗಿ ಅಲ್ಪಕಾಲ ಮೀಸಲಿಡಲು ಪ್ರಯತ್ನಿಸಿ.
ಕರ್ಕಾಟಕ
ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪದಂತಹ ಸಮಸ್ಯೆಗಳು ಎದುರಾಗಬಹುದು, ಕಾಳಜಿವಹಿಸಿ. ಸಂಸಾರದ ವಿಚಾರದಲ್ಲಿ ಮನಸ್ತಾಪ ಬರದಂತೆ ಜಾಗ್ರತೆವಹಿಸಿ. ದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ದೊರೆಯುವುದು.
ಸಿಂಹ
ಬಹಳ ಕಾಲದಿಂದ ಅಪೇಕ್ಷಿಸಿದ್ದ ವಸ್ತುವೊಂದು ಅಲ್ಪ ಶ್ರಮದಿಂದ ಈ ದಿನ ನಿಮಗೆ ದೊರಕಲಿದೆ. ನಿಮ್ಮೆಲ್ಲಾ ವ್ಯವಹಾರಗಳು ಬಹಿರಂಗವಾಗಿದ್ದರೆ ಒಳ್ಳೆಯದು. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಪರಿಶ್ರಮ ವಹಿಸಬೇಕಾಗುವುದು.
ಕನ್ಯಾ
ಯುವ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ಲಭಿಸುವುದು. ಎಂದಿನಂತೆ ಮನಸ್ಸು ಹೆಚ್ಚು ಉಲ್ಲಾಸದಿಂದ ಕೂಡಿರುವುದರಿಂದ ಕಾರ್ಯಗಳು ಸರಾಗವಾಗಿ ನಡೆಯುವುದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
ತುಲಾ
ಆಟೋಮೊಬೈಲ್ ಎಂಜಿನಿಯರ್‌ಗಳಿಗೆ ವಿಶೇಷ ಲಾಭ ಪ್ರಾಪ್ತಿ. ಕೆಲಸದಲ್ಲಿ ಅಪ್ರಾಮಾಣಿಕತೆ ಹಾಗು ದುಡುಕಿನ ನಿರ್ಧಾರ ತೆಗೆದುಕೊಂಡಲ್ಲಿ ಪಶ್ಚಾತಾಪ ಪಡಬೇಕಾದ ಸಂದರ್ಭ ಅನಿವಾರ್ಯ ಒದಗಿಬರುತ್ತದೆ.
ವೃಶ್ಚಿಕ
ಹಣ ಹೂಡಿಕೆಯ ವಿಷಯದಲ್ಲಿ ಇತರರ ಸಲಹೆಗಳಿಗೆ ಗಮನಕೊಡುವುದಕ್ಕಿಂತ ಅನಿಸಿಕೆಯಂತೆ ನಡೆಯುವುದು ಉತ್ತಮ. ದೇಹದಲ್ಲಿ ಅಧಿಕವಾದ ಉಷ್ಣಾಂಶದಿಂದ ಅನಾರೋಗ್ಯ ಉಂಟಾಗುವ ಸಂಭವವಿದೆ.
ಧನು
ಮಂಗಳ ಕಾರ್ಯಗಳ ಶುಭ ಸೂಚನೆಗಳು ಕಂಡುಬರುತ್ತವೆ. ಹಂತ ಹಂತವಾಗಿ ನಿಮ್ಮ ಆರ್ಥಿಕ ಸ್ಥಿತಿಯು ಗಟ್ಟಿಯಾಗುತ್ತಲೇ ಹೋಗಲಿದೆ. ದಿನದಿಂದ ದಿನಕ್ಕೆ ತಂದೆ-ತಾಯಿಯವರ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
ಮಕರ
ಸಗಟು ವ್ಯಾಪಾರಿಗಳಿಗೆ ಹೇರಳ ಲಾಭ ಇರಲಿದೆ. ಆರ್ಥಿಕವಾಗಿ ಸೌಕರ್ಯ ಪಡೆದುಕೊಳ್ಳುವಿರಿ. ಪ್ರಗತಿಯ ಲಕ್ಷಣಗಳು ನಿಚ್ಚಳವಾಗಿ ತೋರಿ ಬರುವುದು. ಕೋರ್ಟ್‌-ಕಚೇರಿಯಲ್ಲಿ ಸಮಯ ವ್ಯರ್ಥವಾಗಲಿದೆ.
ಕುಂಭ
ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ದಲ್ಲಾಳಿತನದ ವ್ಯವಹಾರದಲ್ಲಿ ಎಚ್ಚರವಹಿಸುವುದು ಸೂಕ್ತ. ವಿಷ್ಣು ಸಹಸ್ರನಾಮ ಪಾರಾಯಣ ಅಥವಾ ನಾರಾಯಣನ ನಾಮ ಸ್ಮರಣೆ ಮಾಡಿದಲ್ಲಿ ಒಳ್ಳೆಯದಾಗುವುದು.
ಮೀನ
ಅಧಿಕ ಖರ್ಚು ವೆಚ್ಚಗಳಿಂದ ಮುಕ್ತಿಹೊಂದಲು ದುಸ್ಸಹವಾಸ, ದುರಭ್ಯಾಸದಿಂದ ಹೊರಬರುವ ಯೋಚನೆ ಮಾಡಿರಿ. ಕೃಷಿ ಭೂಮಿಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಏಜೆಂಟರ್‌ಗೆ ಲಾಭ ದೊರೆಯುತ್ತದೆ.