ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸುವುದು
Published 7 ಜೂನ್ 2024, 0:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಸ್ತ್ರ ವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಗುವ ಕುರುಹುಗಳು ಸಿಗುತ್ತವೆ. ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ.
ವೃಷಭ
ಆತುರದಲ್ಲಿ ವಿದ್ಯಾಭ್ಯಾಸ ಹಾಗು ವೃತ್ತಿಯ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಪಶ್ಚಾತಾಪ ಪಡಬೇಕಾಗುವುದು. ದನ ಕರುಗಳ ಅಥವಾ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸಿ.
ಮಿಥುನ
ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಅದೇ ರೀತಿ ಗ್ರಾಹಕರಿಂದ ದೂರುಗಳನ್ನು ಕೇಳುವ ಸಂಭವವೂ ಇದೆ. ತಾಯಿಯವರ ಆರೋಗ್ಯ ಸುಧಾರಿಸಿ ನೆಮ್ಮದಿ ಉಂಟಾಗಲಿದೆ.
ಕರ್ಕಾಟಕ
ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ಯಾವುದೇ ವ್ಯತ್ಯಾಸವಿಲ್ಲದೆ ಜಾರಿಗೆ ತಂದದ್ದಕ್ಕೆ ಸಂತೋಷವಾಗಲಿದೆ. ಕಾಲಿನ ನೋವು ನಿವಾರಿಸಿಕೊಳ್ಳಲು ಸೂಕ್ತ ವ್ಯಾಯಾಮ, ತೈಲ ಲೇಪನದಂತಹ ಪರಿಹಾರ ತಿಳಿದುಕೊಳ್ಳುವಿರಿ.
ಸಿಂಹ
ಔಷಧಿ, ರಸಗೊಬ್ಬರ ಮತ್ತು ಕೀಟ ನಾಶಕಗಳಂಥ ರಾಸಾಯನಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಹೊಸ ಪ್ರಯೋಗವು ಉತ್ತಮ ಫಲಿತಾಂಶ ನೀಡಲಿದೆ. ಕಷ್ಟಪಟ್ಟು ದುಡಿದ ಹಣ ಕೈಯಲ್ಲಿ ನಿಲ್ಲುವುದು.
ಕನ್ಯಾ
ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಲಭಿಸುವುದು ಅಥವಾ ಸಮಾಜದಲ್ಲಿ ಹೆಸರು ಲಭಿಸುವುದರ ಜತೆಗೆ ಬೇಡಿಕೆ ಹೆಚ್ಚಾಗಲಿದೆ. ದೂರ ಸಂಚಾರದಲ್ಲಿ ಕಾರ್ಯಾನುಕೂಲ ತೋರಿಬಂದು ಮಾನಸಿಕ ನೆಮ್ಮದಿ ತರಲಿದೆ.
ತುಲಾ
ಭೂಮಿ ಅಥವಾ ವಾಹನ ಖರೀದಿಯಲ್ಲಿ ಮೋಸ ಹೋಗುವ ಅದರಲ್ಲೂ ದಾಖಲೆಗಳ ವಿಚಾರದಲ್ಲಿ ವ್ಯತ್ಯಾಸ ಆಗಬಹುದು. ಮನಸ್ಸಿಗೆ ಅಸಮಾಧಾನ ಆಗುವಂತಹ ಹಲವು ಘಟನೆಯು ನಡೆಯಲಿದೆ.
ವೃಶ್ಚಿಕ
ಪಿತ್ರಾರ್ಜಿತವಾದ ಕೃಷಿ ಪ್ರದೇಶ ಅಥವ ಗೃಹ ಮಾರಾಟವು ನಿಮ್ಮ ಹಿರಿಯರ ಮನಸ್ಸನ್ನು ನೋವಿಸಲಿದೆ. ತೀಕ್ಷ್ಣ ಮಾತುಗಳು ಬೇರೆಯವರ ದುಃಖಕ್ಕೆ ಕಾರಣವಾಗದಂತೆ ಗಮನಿಸುವುದು ಮುಖ್ಯ.
ಧನು
ಮನೆಯಲ್ಲಿನ ಯುದ್ಧದ ವಾತಾವರಣವನ್ನು ಮನೆಯ ಯಜಮಾನತಿಯ ಸ್ಥಾನದಲ್ಲಿ ನಿಂತು ತಿಳಿಗೊಳಿಸಬೇಕಾದುದು ಕರ್ತವ್ಯವಾಗಿರುತ್ತದೆ. ಗೋ ಉತ್ಪನ್ನಗಳ ಮಾರಾಟವು ಲಾಭದಾಯಕ.
ಮಕರ
ಮನರಂಜನೆಗಾಗಿ ಅಥವ ಕ್ಷಣಿಕ ಸುಖದ ಅನುಭವಕ್ಕಾಗಿ ದುಂದುವೆಚ್ಚ ಮಾಡಿ ಮುಂದಿನ ದಿನಗಳಲ್ಲಿ ಕೊರಗುವಂತೆ ಮಾಡಿಕೊಳ್ಳದಿರಿ. ಗಾರ್ಮೆಂಟ್ಸ್ ಕೆಲಸಗಾರರಿಗೆ ವೇತನ ಹೆಚ್ಚುವುದರಿಂದ ಸಂತಸವಿರುವುದು.
ಕುಂಭ
ರಬ್ಬರ್, ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯ ವ್ಯವಹಾರದಲ್ಲಿರುವವರು ಏಳಿಗೆ ಕಂಡು ನೆಮ್ಮದಿಯನ್ನು ಕಾಣುವರು. ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಕಡಿಮೆ ಪ್ರಯತ್ನದಿಂದಲೇ ಅಧ್ಯಾಪಕ ವೃತ್ತಿ ದೊರೆಯುವ ಸಂಭವವಿದೆ.
ಮೀನ
ಸ್ನೇಹಪರ ಸ್ವಭಾವದಿಂದಾಗಿ ಕಾರ್ಯಕ್ಷೇತ್ರದಲ್ಲಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ಬಂದಿದೆ. ಸುಲಭವಾಗಿ ಕೆಲಸ ಪೂರೈಸುವಿರಿ.