ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಹೂವು–ಹಣ್ಣುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ
Published 8 ಜೂನ್ 2024, 0:08 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಸೃಜನಶೀಲತೆ, ಚಿಂತನಾ ಲಹರಿಗಳು ಹಾಗೂ ಕಾರ್ಯ ವೈಖರಿಯು ಇತರರಿಗೆ ವಿಭಿನ್ನವೆನಿಸಲಿದೆ. ಇತರರನ್ನು ಗೌರವಿಸುವುದು ಮತ್ತು ಮಾತು ಪರಾಮರ್ಶಿಸುವುದರ ಜೊತೆಗೆ ಮನ್ನಣೆಯೂ ಇರಲಿ.
ವೃಷಭ
ನಿಮ್ಮನ್ನು ಸಂದರ್ಶಿಸಲು ಬರುವ ವ್ಯಕ್ತಿಯ ಬಳಿ ದರ್ಪದಿಂದ ನಡೆದುಕೊಳ್ಳುವುದು ಸರಿಯಾದ ವರ್ತನೆ ಅಲ್ಲ. ಪ್ರಯಾಣ ವೇಳೆ ಸ್ನೇಹಿತರೊಂದಿಗೆ ಭೋಗ ವಸ್ತುವಿನ ಖರೀದಿಸುವ ಅವಕಾಶವು ಈ ದಿನ ನಿಮ್ಮದಾಗಲಿದೆ.
ಮಿಥುನ
ಹಿರಿಯರ ಜೊತೆಯಲ್ಲಿ ತೀರ್ಥಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡುವುದರಿಂದ ದಿವ್ಯ ಅನುಭೂತಿಯೊಂದಿಗೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮೊಮ್ಮಕ್ಕಳ ಬಹಳ ದಿನದ ನಂತರದ ಭೇಟಿಯು ಸಂತಸ ತರಲಿದೆ.
ಕರ್ಕಾಟಕ
ನೀವು ನಿಮ್ಮ ನೀತಿ ನಿಯಮಗಳಿಗೆ ಬದ್ಧರಾದರೆ, ಸತ್ಯ ನಿಮ್ಮದಾಗಿದ್ದರೆ ಉದ್ಯೋಗದಲ್ಲಿ ಹೆದರುವ ಅಗತ್ಯವಿಲ್ಲ. ಚಾಣಕ್ಷತನದ ನಿಮ್ಮ ಮಾತುಗಳನ್ನು ಸರಿಯಾದ ಸಮಯದಲ್ಲಿ ಆಡುವುದು ಒಳಿತು.
ಸಿಂಹ
ಈ ದಿನ ನಿಮ್ಮನ್ನು ಎದುರು ಹಾಕಿಕೊಳ್ಳುವವರಿಗೆ ದೇವರು ತಕ್ಕ ಉತ್ತರ ನೀಡುತ್ತಾನೆ. ಆಶ್ಚರ್ಯಕರ ಘಟನೆ ನಡೆದು ದೇವರಿದ್ದಾನೆ ಎಂಬ ನಂಬಿಕೆ ವೈದ್ಯರ ಅನುಭವಕ್ಕೆ ಬರುವಂತಾಗಲಿದೆ.
ಕನ್ಯಾ
ಹೊಸ ವಾಹನ ಖರೀದಿಗೆ ಯೋಚಿಸಿದವರು ಸ್ವಲ್ಪ ದಿನಗಳ ಮಟ್ಟಿಗೆ ತಟಸ್ಥರಾಗಿರಿ. ನಿಮ್ಮ ಕೆಲಸಗಳ ಬಗೆಗೆ ಸಾರ್ವಜನಿಕರಿಂದ ನೇರವಾಗಿ ಪ್ರತಿಕ್ರಿಯೆ ಪಡೆಯುವುದರಿಂದ ಗುಣಮಟ್ಟ ವೃದ್ಧಿಸಿಕೊಳ್ಳಲು ಸಾಧ್ಯ.
ತುಲಾ
ಹೂವು-ಹಣ್ಣುಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಲಾಭವನ್ನು ವ್ಯಾಪಾರದಲ್ಲಿ ಪಡೆದುಕೊಳ್ಳುವುದರಿಂದ ಸಂತೋಷ ಇರುವುದು. ಋಣಾತ್ಮಕ ಚಿಂತನೆಯು ಮಹಿಳೆಯರ ಆರೋಗ್ಯ ಹಾಳು ಮಾಡುತ್ತದೆ.
ವೃಶ್ಚಿಕ
ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ. ಯಾರೋ ಮಾಡಿದ ತಪ್ಪುಗಳಿಗೆ ಅಧಿಕಾರಿಗಳ ಜೊತೆ ನೀವೂ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶಗಳು ಎದುರಾಗಬಹುದು.
ಧನು
ದೈವಬಲದ ಕಾರಣ ಕೈಗೊಂಡ ಕೆಲಸ-ಕಾರ್ಯಗಳಲ್ಲಿ ಜಯ ಅಥವಾ ಹೊಸ ಕಾರ್ಯ ಕೈಗೊಳ್ಳಲು ಧೈರ್ಯ ಉಂಟಾಗಲಿದೆ. ನಿಮ್ಮ ಈ ದಿನದ ಪ್ರಮುಖ ಕೆಲಸಗಳಿಗೆ ಪೂರ್ವ ತಯಾರಿ ಅಗತ್ಯವೆನಿಸಲಿದೆ.
ಮಕರ
ನಿಮ್ಮ ಸಂಗಾತಿಯೊಂದಿಗೆ ಇದ್ದ ದೀರ್ಘಕಾಲದ ಸಮಸ್ಯೆ ಸಮಾಧಾನದಿಂದ ಮಾತನಾಡಿ ಪರಿಹರಿಸಿಕೊಳ್ಳುವಿರಿ. ನಿಮ್ಮಿಂದಾದ ಗಡಿಬಿಡಿಯನ್ನು ಇತರರ ಹೆಗಲ ಮೇಲೆ ಹೊರೆಸುವ ಮೂರ್ಖತನದ ಕೆಲಸ ಮಾಡದಿರಿ.
ಕುಂಭ
ಲೋಕದಲ್ಲಿ ಸಾಮಾನ್ಯವಾಗಿರುವ ಬದುಕಿನ ಪರಿಭಾಷೆಯಂತಲ್ಲದೆ ವಿಭಿನ್ನವಾಗಿ ಬದುಕಿ ತೋರಿಸುತ್ತೇವೆಂಬ ಕಲ್ಪನೆ ಹುಸಿಯಾಗಲಿದೆ. ಮಾದ್ಯಮ ಸಂಸ್ಥೆಗಳಲ್ಲಿರುವವರಿಗೆ ಉತ್ತಮ ದಿನವಾಗಿ ಪರಿಣಮಿಸಲಿದೆ.
ಮೀನ
ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಎಲ್ಲದರಲ್ಲೂ ಹೆಚ್ಚಿನ ಜಾಗ್ರತೆ ವಹಿಸಿರಿ. ಅವರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ ಇದ್ದರೂ, ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಳ್ಳಬೇಕಾಗಬಹುದು.