ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
Horoscope Today | ದಿನ ಭವಿಷ್ಯ: ಈ ರಾಶಿಯವರ ನಡವಳಿಕೆಯು ಮನೆಯಲ್ಲಿ ಸಂತಸ ಮೂಡಿಸುತ್ತದೆ
Published 6 ಜುಲೈ 2023, 23:30 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ಆಟಿಕೆಗಳ ಮಾರಾಟದವರಿಗೆ ಉತ್ತಮ ಮಾರಾಟ ಹಾಗೂ ಲಾಭ ಸಿದ್ಧಿಸುತ್ತದೆ. ಮದುವೆ ಕೆಲಸಗಳಿಂದಾಗಿ ಓಡಾಟ ಹೆಚ್ಚುವುದು. ಕಾರ್ಮಿಕರ ಬೇಜವಾಬ್ದಾರಿತನದಿಂದಾಗಿ ಲಾಭಕ್ಕೆ ತೊಂದರೆ ಉಂಟಾಗಬಹುದು.
ವೃಷಭ
ಸೋಮಾರಿತನ, ಅತಿಯಾದ ನಿದ್ದೆ ಕಾರ್ಯಕ್ಕೆ ಭಂಗವನ್ನು ತರಲಿದೆ. ಪರಿಸರದ ಸನ್ನಿವೇಶವೂ ಇದಕ್ಕೆ ಪೂರಕವಾಗಿರುವುದು. ರಕ್ಷಣಾ ವೃತ್ತಿಗೆ ಸಂಬಂಧಿಸಿದವರು ಎಚ್ಚರದಿಂದ ಕಾರ್ಯ ನಿರ್ವಹಿಸಿ.
ಮಿಥುನ
ತಾಯಿಯ ದೇಹದಲ್ಲಿ ವಾಯು ಪ್ರಕೋಪದಿಂದಾಗಿ ಹಲವು ಸಮಸ್ಯೆಗಳು ಕಾಡಬಹುದು. ಅವರ ಆರೋಗ್ಯ ಸುಧಾರಿಸಲು ಧಾರ್ಮಿಕ ಕಾರ್ಯ ಮಾಡಿ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ.
ಕರ್ಕಾಟಕ
ಬದುಕಿನಲ್ಲಿ ಸಕಾರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿ. ಇಂದಿನ ದಿನದ ಕೆಲಸ, ಇಂದಿನ ದಿನವೇಮುಗಿಸುವುದನ್ನು ಕಾರ್ಯರೂಪಕ್ಕೆ ತಂದುಕೊಳ್ಳಿರಿ.ಶನೈಶ್ಚರನ ದರ್ಶನ ಮಾಡಿ ಕೃಪೆಗೆ ಪಾತ್ರರಾಗಿ.
ಸಿಂಹ
ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ಕಥೆ, ಕವನದ ಬರಹಗಾರರಿಗೆ ಅವಕಾಶ ಹೆಚ್ಚಲಿದೆ. ಪತ್ರಿಕಾರಂಗದವರಿಗೆ ಶುಭ ದಿನ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ.
ಕನ್ಯಾ
ಯೋಜನೆಗಳು ಸ್ಥಗಿತಗೊಂಡಂತೆ ಆಗಬಹುದು. ಕೃಷಿ ಕಾರ್ಯಗಳು ಚುರುಕುಗೊಂಡು ರೈತಾಪಿ ವರ್ಗದವರಲ್ಲಿ ಸಂತಸ ಮೂಡಲಿದೆ. ಸಡಗರದಲ್ಲಿ ವಸ್ತ್ರಾಭರಣ ಖರೀದಿಗೆ ಹಣ ವಿನಿಯೋಗ ಮಾಡುವಿರಿ.
ತುಲಾ
ಆರನೆಯ ಇಂದ್ರಿಯದ ಸೂಚನೆಯ ಸಹಾಯ ಉಪಯುಕ್ತವಾಗಲಿದೆ. ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಅಧಿಕ ಲಾಭಂಶ ಹೊಂದುವಿರಿ. ಅಪೇಕ್ಷಿಗಳಿಗೆ ಸಂತಾನ ಭಾಗ್ಯ ದೊರೆಯುವುದು.
ವೃಶ್ಚಿಕ
ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು. ಸುಂದರ ಸಂಜೆ ನಿಮ್ಮದಾಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಮತ್ತು ಪ್ರಯಾಣ ನಡೆಸುವಾಗ ನಯವಂಚಕರ ಬಗ್ಗೆ ಎಚ್ಚರವಹಿಸಿ.
ಧನು
ಹಿಂಜರಿಕೆಯ ಸ್ವಭಾವದಿಂದ ವೃತ್ತಿಯನ್ನು ಸಂಪಾದಿಸಲು ಕಷ್ಟವಾಗುತ್ತದೆ. ಈ ದಿನ ದೇವತಾನುಗ್ರಹದಿಂದ ಆರ್ಥಿಕ ಖರ್ಚು-ವೆಚ್ಚಗಳ ಸಮತೋಲನ, ಕುಟುಂಬದಲ್ಲೂ ತೃಪ್ತಿ, ಅರೋಗ್ಯದಿಂದ ಮಾನಸಿಕ ಶಾಂತಿ ಕಾಣುವಿರಿ.
ಮಕರ
ನಡವಳಿಕೆಯು ಮನೆಯವರಲ್ಲಿ ಸಂತಸವನ್ನು ಮೂಡಿಸುತ್ತದೆ. ಹಾಲು, ಮೊಸರು, ತುಪ್ಪದಂತಹ ಗೋ ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭವಾಗಲಿದೆ. ಆಧ್ಯಾತ್ಮಿಕ ವಿಚಾರಗಳತ್ತ ಗಮನ ಹರಿಸುವಿರಿ.
ಕುಂಭ
ಮಕ್ಕಳ ಮದುವೆಯಂತಹ ವಿಚಾರವನ್ನು ತಿಳಿ ಮನಸ್ಸಿನಿಂದ ಆಲೋಚಿಸಿ, ಸಮಸ್ಯೆಗಳಿಗೆ ಉತ್ತರ ಸಿಗುವುದು. ಅನಿರೀಕ್ಷಿತ ಪ್ರಯಾಣ ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಧನವ್ಯಯದಲ್ಲಿ ಗಮನವಿರಲಿ .
ಮೀನ
ಬೆಂಕಿಯಿಂದ ಅಥವಾ ಸುಡುವ ಪದಾರ್ಥದಿಂದ ದೂರವಿರುವುದು ಉತ್ತಮ. ಪಿತ್ತಕೋಶಕ್ಕೆ ಸಂಬಂ ಧಿಸಿದಂತೆ ಅನಾರೋಗ್ಯಗಳು ಎದುರಾಗ ಬಹುದು. ತಾಯಿ ದುರ್ಗಾಪರಮೇಶ್ವರಿಯ ಆರಾಧನೆಯಿಂದ ಶುಭಪ್ರಾಪ್ತಿ.