ದಿನ ಭವಿಷ್ಯ: ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ಆಗುವುದು...
Published 3 ಜನವರಿ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇಹಕ್ಕೆ ಅತಿಯಾದ ಶ್ರಮವಾದರೂ ಇಷ್ಟ ಪ್ರಾಪ್ತಿಗಾಗಿ ಕಾರ್ಯವನ್ನು ಸಾಧಿಸಿದ ಸಂತೋಷ ಇರುವುದು. ತಾಯಿಯವರ ಆರೋಗ್ಯ ಸುಧಾರಿಸಿ ಆಸ್ಪತ್ರೆಯಿಂದ ಮನೆಗೆ ಬರುವಂತಾಗಲಿದೆ.
ವೃಷಭ
ಔದ್ಯೋಗಿಕ ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ಸತ್ಕಾರ್ಯಗಳಲ್ಲಿ ಆದಾಯವನ್ನು ಮೀರಿ ಖರ್ಚುಗಳಿದ್ದರೂ ಚಿಂತಿಸುವ ಅಗತ್ಯವಿಲ್ಲ.
ಮಿಥುನ
ಸಂಘದಲ್ಲಿ ನಾಯಕತ್ವವನ್ನು ವಹಿಸುತ್ತಿರುವುದರಿಂದ ತಪ್ಪುಗಳಿಗೆ ನೇರವಾಗಿ ಅಲ್ಲದಿದ್ದರೂ ಹೊಣೆಗಾರಿಕೆ ನಿಮ್ಮದೂ ಸಹ ಆಗಿರುತ್ತದೆ. ನಿಮ್ಮ ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಿ ನೆರವೇರಲಿದೆ.
ಕರ್ಕಾಟಕ
ಇಂದಿನ ದಿನದ ಪರಿಸ್ಥಿತಿಗಳನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿ ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
ಸಿಂಹ
ನಿಮ್ಮ ವ್ಯವಹಾರದ ಮೂಲ ವಿಚಾರವನ್ನು ನಿಮ್ಮ ಉತ್ತರಾಧಿಕಾರಿಗಳಿಗೆ ತಿಳಿಸುವ ಮನಸ್ಸಾಗಲಿದೆ. ನಿಮ್ಮ ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸುತ್ತದೆ. ಮುಖ್ಯ ಕೆಲಸಗಳಿಗೆ ಆಪ್ತರ ಸಲಹೆ ಅಗತ್ಯ.
ಕನ್ಯಾ
ರಾಜಕೀಯ ವ್ಯಕ್ತಿಗಳಿಗೆ ಸಾಮಾಜಿಕವಾಗಿ ಜನ ಬೆಂಬಲದ ಮತ್ತು ಆರ್ಥಿಕತೆಯ ಕೊರತೆ ಕಾಡಲಿದೆ. ದುಡ್ಡಿನ ವಿಷಯದಲ್ಲಿ ಮೋಸ ಹೋಗುವ ಸಂಭವವಿದೆ. ಹೆತ್ತವರೊಂದಿಗೆ ವಾಗ್ವಾದ ಅಶ್ರೇಯಸ್ಸಿಗೆ ಕಾರಣವಾಗುತ್ತದೆ.
ತುಲಾ
ಕುಟುಂಬದಲ್ಲಿ ಇರುವಂತಹ ಎಲ್ಲರ ಅಭಿಪ್ರಾಯವನ್ನೂ ಕೇಳಿ ತೀರ್ಮಾನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಈ ದಿನ ನಿಮಗೆ ಯಾವುದೇ ಸಮಸ್ಯಗೆ ಪರಿಹಾರ ಕಂಡುಹಿಡಿಯಲು ಕಷ್ಟವಾಗುವುದಿಲ್ಲ.
ವೃಶ್ಚಿಕ
ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ಆಗುವುದು. ಹವಾ ಬದಲಾವಣೆಗಾಗಿ ಕಿರು ಪ್ರವಾಸದ ಸಾಧ್ಯತೆಗಳಿವೆ. ಪತ್ರಿಕೋದ್ಯಮಿಗಳಿಗೆ ಕ್ರಿಯಾತ್ಮಕ ಬರವಣಿಗೆಯಿಂದ ಏಳಿಗೆ ದೊರಕುವುದು.
ಧನು
ಗುರಿಯನ್ನು ಮುಟ್ಟುವತ್ತ ನಿಮ್ಮ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿ ಕೊಂಡಲ್ಲಿ ನಿಮ್ಮ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿ ನೆರವೇರುವುದು. ವೃತ್ತಿರಂಗದಲ್ಲಿ ಎಚ್ಚರವಿರಲಿ.
ಮಕರ
ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸಿಗಾಗಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ವಿಷಯದಲ್ಲಿ ಪರಿಶ್ರಮವನ್ನು ಪಡಬೇಕಾಗುತ್ತದೆ. ಹಿರಿಯರು ನಡೆಸಿಕೊಂಡು ಬಂದ ಧಾರ್ಮಿಕ ವಿಧಿವಿಧಾನವನ್ನು ಆಚರಿಸುವ ಬಗ್ಗೆ ತೀರ್ಮಾನಿಸಿ.
ಕುಂಭ
ನಿರುದ್ಯೋಗಿಗಳಿಗೆ ಪ್ರತಿಷ್ಠಿತರ ಪರಿಚಯದಿಂದ ಗೌರವಾನ್ವಿತ ಜಾಗದಲ್ಲಿ ಉದ್ಯೋಗ ಸಿಗಲಿದೆ. ಹೆಂಡತಿ ಮಕ್ಕಳೊಂದಿಗೆ ಕೈಗೊಂಡ ಪ್ರವಾಸ ಸುಖದಾಯಕವಾಗಿರುವುದು. ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ.
ಮೀನ
ನಿಮ್ಮ ಆಲೋಚನೆಯಲ್ಲಿ ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ಕಚ್ಚಾ ತೈಲದ ವ್ಯವಹಾರದಲ್ಲಿರು ವವರಿಗೆ ಅಧಿಕ ಲಾಭ ಸಿಗಲಿದೆ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರದಿರಿ.