ಶುಕ್ರವಾರ, 4 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಣ್ಣ ಕೈಗಾರಿಕೆ ಉದ್ಯಮಿಗಳಿಗೆ ಅಧಿಕ ಲಾಭವಿದೆ
Published 23 ಏಪ್ರಿಲ್ 2024, 18:55 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿಂದ ನಿಮ್ಮ ಜೀವನದಲ್ಲೂ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾ ಭಾವನೆ ಮರೆಯದಿರಿ. ಮನೆಯಲ್ಲಿ ಮಕ್ಕಳ ಒಡನಾಟದಿಂದ ಮನಸ್ಸು ಉಲ್ಲಸಿತವಾಗುವುದು.
ವೃಷಭ
ಮನೆ ನಿರ್ಮಾಣ ಅಥವಾ ನವೀಕರಿಸುವಂತಹ ಆಲೋಚನೆಯಲ್ಲಿ ತೊಡಗುವಿರಿ. ನಿಮ್ಮ ಅಂತರಾತ್ಮದ ಮಾತು ಕೇಳುವುದರಿಂದ ಶ್ರೇಯಸ್ಸು ಉಂಟಾಗುತ್ತದೆ. ಸಣ್ಣ ಕೈಗಾರಿಕೆ ಉದ್ಯಮಿಗಳಿಗೆ ಅಧಿಕ ಲಾಭವಿದೆ.
ಮಿಥುನ
ಅಡಿಕೆ ಮಾರಾಟಗಾರರು ನಷ್ಟದಿಂದ ಪಾರಾಗಲು ಪರ್ಯಾಯ ಬೆಳೆ ಬೆಳೆಯುವುದು ಸೂಕ್ತ ಎಂಬ ಯೋಚನೆ ಬರಬಹುದು. ನಿಮ್ಮ ಇತಿ ಮಿತಿಯ ಬಗ್ಗೆ ಮೇಲಿನ ಅಧಿಕಾರಿಗಳು ಅರಿವು ಮೂಡಿಸಲಿದ್ದಾರೆ.
ಕರ್ಕಾಟಕ
ನಿಮ್ಮ ಕೆಲವೊಂದು ಯೋಜನೆಗಳು ಇಂದು ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗೂ ಸಹಾಯಕವಾಗಿರುತ್ತವೆ. ನಿಮ್ಮ ವಾಕ್ಚಾತುರ್ಯವು ಇಂದು ಸರಿಯಾದ ಸಮಯಕ್ಕೆ ನಿಮ್ಮ ಸಹಾಯಕ್ಕೆ ಬರಲಿದೆ.
ಸಿಂಹ
ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನೀವು ಮತ್ತೊಮ್ಮೆ ಮರುಪರಿಶೀಲಿಸಲು ಹೋಗಿ ದಾರಿ ತಪ್ಪಬೇಡಿ. ಖರ್ಚು ಕಡಿಮೆ ಗಳಿಕೆ ಹೆಚ್ಚಿರುವುದರಿಂದ ನಿಮ್ಮ ಸಂಪಾದನೆಯಲ್ಲಿ ಹೆಚ್ಚಿನ ಪಾಲು ಉಳಿಸಬಹುದು.
ಕನ್ಯಾ
ಮನೆಯಲ್ಲಿ ಸಣ್ಣ ಕಲಹಕ್ಕೆ ನೀವು ಕಾರಣರಾದಿರಿ ಎಂದು ದುಃಖಿಸುವಂತಾಗಲಿದೆ. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಬೇಕಾದ ಸ್ಥಿತಿ ಬರಲಿದೆ. ಅನಿರೀಕ್ಷಿತವಾಗಿ ಎದುರಾಗುವ ಅಡ್ಡಿ-ಆತಂಕಗಳಿಗೆ ಧ್ಯೆರ್ಯಗೆಡದಿರಿ.
ತುಲಾ
ಮನುಷ್ಯ ಪ್ರಯತ್ನದ ಜೊತೆ ದೇವರ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಎದುರಾಳಿಗಳು ಮರುಪ್ರಶ್ನೆ ಮಾಡಲಾಗದಂಥ ಮಾತನ್ನು ನೀವು ಆಡಿದಲ್ಲಿ ಉದ್ಯೋಗದ ಗೆಲುವು ನಿಮ್ಮದೆ ಆಗಿರುತ್ತದೆ.
ವೃಶ್ಚಿಕ
ರಾಜಕಾರಣಿಗಳು ಎಲ್ಲರೊಂದಿಗೆ ಸಹಕಾರ ಮನೋಭಾವನೆ ಮತ್ತು ಸರಳತೆಯಿಂದ ಮುಂದುವರಿದಲ್ಲಿ ಯಶಸ್ಸು ಇನ್ನೂ ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತದೆ. ಸ್ಟೀಲ್ ವ್ಯಾಪಾರಿಗಳಿಗೆ ಲಾಭವಾಗಲಿದೆ.
ಧನು
ಚಂಚಲ ಸ್ವಭಾವದ ನೀವು ಇಂದು ಅಚಲ ನಿರ್ಧಾರ ಕೈಗೊಳ್ಳುವುದು ಒಳಿತು. ಧಾರ್ಮಿಕ ಕೆಲಸದಲ್ಲಿ ಶ್ರದ್ಧೆ ತೋರಿದಷ್ಟೂ, ಅಭಿವೃದ್ಧಿಯ ದಾರಿ ಕಾಣಬಹುದು. ಗಣಪತಿಯ ಆರಾಧನೆ ವಿಘ್ನ ನಿವಾರಣೆ ಆಗಲಿದೆ.
ಮಕರ
ಉತ್ಪತ್ತಿಯನ್ನು ಲೆಕ್ಕಿಸಿ ಅರಸಿ ಬಂದ ಉದ್ಯೋಗ ದೂರಮಾಡುವುದು ನಿಮ್ಮ ಮೂರ್ಖತನವಾಗಲಿದೆ. ಸಂಜೆ ಕಾಲದ ವೇಳೆ ಆತ್ಮೀಯರ ಮನೆಯಲ್ಲಿನ ಸಮಾರಂಭಗಳಲ್ಲಿ ಭಾಗವಹಿಸಲಿದ್ದೀರಿ.
ಕುಂಭ
ರಾಜಕೀಯ ಸಂಬಂಧ ಹೊಂದಿರುವ ವ್ಯಕ್ತಿಗಳು ಇಂದು ನಿಮ್ಮ ಬಳಿ ದೇಹಿ ಎಂದು ಬರಲಿದ್ದು, ಅವರನ್ನು ನೀವು ಗೌರವಿಸುವಿರಿ. ನಿಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಇತರರ ಜತೆ ಸಂವಾದದಲ್ಲಿ ಉತ್ತಮ ಭಾಷೆ ಬಳಸಿ.
ಮೀನ
ದಿನ ನಿತ್ಯದ ವಸ್ತುಗಳ ಖರೀದಿಯಿಂದ ಕುಟುಂಬ ಸದಸ್ಯರಿಂದ ದೂಷಣೆಗೆ ಒಳಗಾಗುವ ಸಾಧ್ಯತೆ ಇದೆ. ಮನೆಯ ಸಮೀಪ ನಡೆಯುವ ಸಾರ್ವಜನಿಕ ಕಾರ್ಯಕ್ರಮದಿಂದ ನಿಮಗೆ ಕಿರಿಕಿರಿಯಾಗಲಿದೆ.
ADVERTISEMENT
ADVERTISEMENT