ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಕೊಡು-ಕೊಳ್ಳುವಿಕೆಯಿಂದ ಅಧಿಕ ಲಾಭ
Published 28 ಸೆಪ್ಟೆಂಬರ್ 2024, 21:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾಡಿದ ತಪ್ಪುಗಳಿಗೆ ಪಶ್ಚಾತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆಯಾಗುತ್ತದೆ. ನೃತ್ಯಾಭ್ಯಾಸ ಮುಂದುವರಿಸುವಂತೆ ಅಧ್ಯಾಪಕರಿಂದ ಒತ್ತಾಯ. ಕೊಡು-ಕೊಳ್ಳುವಿಕೆಯಿಂದ ಅಧಿಕ ಲಾಭ.
ವೃಷಭ
ಬಾಲ್ಯ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಂದರ್ಭ ಒದಗಿಬರುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಬಂದಿರುವ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಲಿದೆ. ಗಣಪತಿ ಆರಾಧನೆಯಿಂದ ಶುಭವಾಗುತ್ತದೆ.
ಮಿಥುನ
ಕೊಡು ಕೊಳ್ಳುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡು ಕೆಲಸಗಳನ್ನು ವೃದ್ಧಿಸಿಕೊಳ್ಳುವಿರಿ. ಗೃಹ ನಿರ್ಮಾಣ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ. ಹವ್ಯಾಸಿ ಉಪನ್ಯಾಸಕರಿಗೆ ಹೇರಳ ಅವಕಾಶ ಸಿಗಲಿದೆ.
ಕರ್ಕಾಟಕ
ನೀವು ಮಾಡುವ ಕೆಲಸಗಳಲ್ಲಿ ಏಕಾಗ್ರತೆಯ ಜೊತೆ ಆತ್ಮವಿಶ್ವಾಸ ವಿದ್ದರೆ ಯಶಸ್ವಿಯಾಗುವಿರಿ. ಆಟಿಕೆ ಮತ್ತು ಉಡುಗೊರೆ ವಸ್ತುಗಳ ಮಾರಾಟಗಾರರಿಗೆ ಉತ್ತಮ ಲಾಭವಿರುವುದು.
ಸಿಂಹ
ಇನ್ನೊಬ್ಬರಿಗೆ ಸಹಾಯ ಮಾಡುವ ನಡುವಳಿಕೆಯು ಅಭಿವೃದ್ಧಿಗೆ ರಕ್ಷೆಯಾಗಿ ಇರುತ್ತದೆ. ಭೂ ಖರೀದಿ ಅಥವಾ ಗೃಹ ನಿರ್ಮಾಣ ಕಾರ್ಯದಂತಹ ನಿಮ್ಮ ಕನಸಿನ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ.
ಕನ್ಯಾ
ಕೃಷಿಗೆ ಸಂಬಂಧಿಸಿದ ಯಂತ್ರಗಳ ಖರೀದಿಯಿಂದ ಅನುಕೂಲಕರ ವಾತಾವರಣ ಪ್ರಾಪ್ತಿ. ಇಂದಿನ ದಿನಚರಿಯು ನಿಮ್ಮವರಲ್ಲಿ ಸಂತೋಷ ಮೂಡಿಸುತ್ತದೆ. ಇಂದು ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು.
ತುಲಾ
ಫ್ಯಾಷನ್ ಡಿಸೈನರ್‌ಗಳು ಹೆಚ್ಚಿನ ಅವಕಾಶ ಹಾಗೂ ಉತ್ತಮ ಧನಲಾಭವನ್ನೂ ಪಡೆಯುವರು. ಸ್ನೇಹಿತರೊಂದಿಗೆ ಸಂತೋಷ ಕೂಟದಲ್ಲಿ ಭಾಗಿಯಾಗುವ ಅವಕಾಶ ಸಿಗಲಿದೆ. ವ್ಯವಹಾರಗಳಲ್ಲಿ ಹಿಡಿತ ಸಾಧಿಸುವಿರಿ.
ವೃಶ್ಚಿಕ
ನಿಯೋಜಿತ ಕೆಲಸಗಳನ್ನು ಉತ್ಸಾಹದಿಂದ ಮಾಡಿ ಮುಗಿಸುವಿರಿ ಮತ್ತು ಇನ್ನೊಂದು ಹೊಸ ಕೆಲಸ ಕಾದಿರಲಿದೆ. ಅನಿವಾರ್ಯ ಕಾರಣಗಳಿಂದಾಗಿ ಸಂಸಾರದ ಜವಾಬ್ದಾರಿ ಜಾಸ್ತಿಯಾಗುವುದು.
ಧನು
ಆತ್ಮೀಯರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಲಾಗದೇ ಬಿಡಲೂ ಆಗದೇ ಚಡಪಡಿಸುವ ಪರಿಸ್ಥಿತಿ ನಿಮ್ಮದಾಗುತ್ತದೆ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದ್ದರೂ ಸೋಮಾರಿತನ ಕಾಡಬಹುದು.
ಮಕರ
ಸಾಹಸಿ ಮನೋಭಾವವು ಇಂದು ನಿಮ್ಮನ್ನು ಆವರಿಸಲಿದ್ದು, ಚಾರಣ ಅಥವಾ ಸವಾಲಿನ ಕೆಲಸಗಳನ್ನು ಮಾಡುವಿರಿ. ಸಹವರ್ತಿಗಳ ಸಹಾಯದಿಂದ ಬಾಕಿ ಇದ್ದ ಕೆಲಸಗಳನ್ನು ಪೂರ್ತಿಗೊಳಿಸುವಿರಿ.
ಕುಂಭ
ಒಂದು ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಡಿ. ಹೊಸ ಉದ್ಯೋಗ ಅಥವಾ ಕರಾರಿಗೆ ಆತುರದಲ್ಲಿ ಸಹಿ ಹಾಕಬೇಡಿ.
ಮೀನ
ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಒಂದು ಅವಕಾಶ ಸಿಗುವುದು. ರಾಜಕೀಯ ರಂಗದಲ್ಲಿ ಬಹಳ ದಿನಗಳ ನಂತರ ಯಶಸ್ಸು ದೊರೆಯಲಿದೆ. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುವುದು.
ADVERTISEMENT
ADVERTISEMENT