ದಿನ ಭವಿಷ್ಯ: ಈ ರಾಶಿಯವರಿಗೆ ಮನೆ ದೇವರ ದರ್ಶನ, ಸ್ಮರಣೆ ಶುಭವನ್ನು ತರುತ್ತದೆ
Published 1 ನವೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಿರುಸಿನ ಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಮನರಂಜನಾಯುಕ್ತವಾಗಿ ಕಾಲ ಕಳೆಯುವಂತಾಗಲಿದೆ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚು ಉಂಟಾಗುತ್ತದೆ.
ವೃಷಭ
ಮನೋರೋಗದಿಂದ ಬಳಲುತ್ತಿರುವವರು ಚಿಕಿತ್ಸೆಯನ್ನು ಪಡೆದುಕೊಳ್ಳಿರಿ. ಸಾಂಸಾರಿಕವಾಗಿ ಅಭಿವೃದ್ಧಿಯ ವಿಷಯದಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ಮುತ್ತು–ರತ್ನಗಳ ವ್ಯಾಪಾರಿಗಳಿಗೆ ಲಾಭವಾಗಲಿದೆ.
ಮಿಥುನ
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ನೇಹಿತರನ್ನು ಭೇಟಿಯಾದ ಕಾರಣ ಸಂತೋಷ ಇಮ್ಮಡಿಗೊಳ್ಳಲಿದೆ. ಕಾರ್ಯ ಕ್ಷೇತ್ರದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಚಟುವಟಿಕೆಗಳಿಂದ ಬಹುಮಟ್ಟಿಗೆ ಮನಸ್ಸು ಸಂತೃಪ್ತಗೊಳ್ಳಲಿದೆ.
ಕರ್ಕಾಟಕ
ವೃತ್ತಿ ಜೀವನದಲ್ಲಿ ಧೈರ್ಯದಿಂದ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಣ್ಣೆದುರೇ ದುಷ್ಕರ್ಮಗಳು ನಡೆಯುತ್ತಿದ್ದರೂ ಎನೂ ಮಾಡಲಾಗದ ದುಃಸ್ಥಿತಿ ನಿಮ್ಮದಾಗಬಹುದು.
ಸಿಂಹ
ಮನೆಯಲ್ಲಿ ಮಾತಿನಿಂದ ಉಂಟಾದ ಬಿಗು ವಾತಾವರಣ ದಿನದ ಅಂತ್ಯದ ಸಮಯದಲ್ಲಿ ತಿಳಿಯಾಗಿ ಮನಸ್ಸಿಗೆ ಸಮಾಧಾನ ಉಂಟಾಗುವುದು. ಕೌಟುಂಬಿಕ ಕಲಹಗಳು ಗೋಚರಕ್ಕೆ ಬಂದಾವು.
ಕನ್ಯಾ
ಕೆಲವು ವಿಷಯಗಳು ಬೇಸರ ಹುಟ್ಟಿಸಿದರೂ, ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುವ ಸಮಯ ಹಿಂದಿನ ಲವಲವಿಕೆಯನ್ನು ಮೂಡಿಸುತ್ತದೆ. ಕಿರಿಯರ ಮಾತನ್ನು ಕಡೆಗಣಿಸದೆ ಪರಾಮರ್ಶಿಸಿ.
ತುಲಾ
ಸಂದರ್ಭವನ್ನು ನೋಡಿಕೊಂಡು ಮನೋಭಿಲಾಷೆ ಬೇಡಿಕೆಯನ್ನು ಅಧಿಕಾರಿಗಳ ಮುಂದಿಡುವುದರಿಂದ ಈಡೇರುತ್ತದೆ. ಈ ದಿನ ವಿವಿಧ ರೀತಿಯಲ್ಲಿ ಆಗುವ ಧನಾಗಮನ ಉತ್ತಮವಾಗಿರಲಿದೆ.
ವೃಶ್ಚಿಕ
ಮುಂದಾಲೋಚನೆ ಇಲ್ಲದೆ ಶುರುಮಾಡಿದ ಕಾರ್ಯವು ಅನಿರೀಕ್ಷಿತ ಉತ್ತಮ ಫಲ ಕೊಡುವುದರಿಂದ ಸಂತೋಷ ಹೊಂದುವಿರಿ. ಮನೆ ದೇವರ ದರ್ಶನ ಅಥವಾ ಸ್ಮರಣೆ ಶುಭವನ್ನು ತರುತ್ತದೆ.
ಧನು
ಹಿರಿಯ ನಾಗರಿಕರನ್ನು ಮನೆಯಲ್ಲಿಯೇ ಶುಶ್ರೂಷೆ ಮಾಡುವ ಆಯಾಗಳಿಗೆ ನಿರೀಕ್ಷೆಯ ಹಣ ಸಿಗಲಾಗದು. ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ. ಹರಿತ ವಸ್ತುಗಳಿಂದ ಸಣ್ಣ-ಪುಟ್ಟ ಗಾಯ ಆಗುವ ಸಾಧ್ಯತೆ ಇದೆ.
ಮಕರ
ಮನೆಯ ಜನರ ಜಗಳದಲ್ಲಿ ಮಾತಿನ ಅವಶ್ಯಕತೆ ಬಂದಾಗಲೂ ಮನಸ್ಸಿನಲ್ಲಿರುವ ಮಾತುಗಳನ್ನೆ ಹೇಳಲು ಸಾಧ್ಯವಾಗುವುದಿಲ್ಲ. ನ್ಯಾಯಾಲಯದದ ಮೊರೆ ಹೋಗುವಂಥ ಕೃತ್ಯಗಳು ನಡೆಯಲಿದೆ.
ಕುಂಭ
ವಿವಿಧ ಕಾರಣಗಳಿಂದಾಗಿ ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸಲಾಗದೆ ದಿನದ ಕಡೆಯಲ್ಲಿ ಬೇಸರ ಪಡುವಿರಿ. ರುದ್ರಾರಾಧನೆಯನ್ನು ಮಾಡುವುದರಿಂದ ಬಯಸಿದ ದ್ರವ್ಯವು ಶೀಘ್ರದಲ್ಲಿ ಪ್ರಾಪ್ತಿ.
ಮೀನ
ಮಹತ್ವಾಕಾಂಕ್ಷೆಯಿಂದ ಗುರಿಯನ್ನು ತಲುಪುವುದು ಕಷ್ಟವೇನಲ್ಲವಾದರು ಪ್ರಯತ್ನ ಮುಖ್ಯ. ಕುದುರೆ ಸಾಕುವುದರ ಜತೆಗೆ ಸವಾರಿಯನ್ನು ಮಾಡುವವರಿಗೆ ಉತ್ತಮ ಅವಕಾಶ ದೊರೆಯಲಿದೆ.