ದಿನ ಭವಿಷ್ಯ: ಈ ರಾಶಿಯವರು ಷೇರು ಖರೀದಿಸುವಾಗ ಎಚ್ಚರವಹಿಸಿ
Published 23 ಜುಲೈ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯ ಹಿರಿಯರ ಮಧ್ಯಸ್ಥಿಕೆಯಿಂದ ಅಣ್ಣ-ತಮ್ಮಂದಿರ ವಿವಾದಗಳು ಬಗೆಹರಿಯುವುದು. ಪುನಃ ಮೊದಲಿನಂತೆ ಸಂಬಂಧ ಗಟ್ಟಿಯಾಗಲಿದೆ. ಸರ್ಕಾರಿ ಗುತ್ತಿಗೆ ಕೆಲಸದ ಬಾಕಿ ಹಣ ಸಂದಾಯವಾಗುವುದು ನೆಮ್ಮದಿ ತರಲಿದೆ.
ವೃಷಭ
ಹಿಂದೆ ಕೊಟ್ಟಿರುವ ಸಾಲದ ಹಣ ಕೈಸೇರುವುದರಿಂದ ಲೇವಾದೇವಿ ವ್ಯವಹಾರ ಮುಂದುವರಿಸಲು ಮನಸ್ಸಾಗುವುದು. ತಿಳಿವಳಿಕೆ ಇಲ್ಲದ್ದವರಂತೆ ವರ್ತಿಸಿ ಮೂರ್ಖರೆನ್ನಿಸಬೇಡಿ. ಆದಾಯ ಇರುತ್ತದೆ.
ಮಿಥುನ
ಮುಖ್ಯ ಕೆಲಸಗಳತ್ತ ಮಾತ್ರ ಗಮನಹರಿಸಿ. ವೃತ್ತಿರಂಗದಲ್ಲಿ ತಿಳಿವಳಿಕೆಯಂತೆನೇ ನಡೆಯಿರಿ, ಅನ್ಯರ ಮಾತಿಗೆ ಕಿವಿ ಒಡ್ಡಬೇಡಿ. ಸಿನೆಮಾ ನಟ ನಟಿಯರಿಗೆ ಅವಕಾಶಗಳು ದೊರೆಯಲಿವೆ.
ಕರ್ಕಾಟಕ
ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು ಹಾಗೂ ಅದರಿಂದ ನೆಮ್ಮದಿ ಸಿಗಲಿದೆ. ಆಹಾರದ ಪದ್ದತಿ ನಿಯಂತ್ರಿಸಿಕೊಂಡು ರಕ್ತದೊತ್ತಡ ಸ್ಥಿತಿ ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿರಿ.
ಸಿಂಹ
ಕೆಲಸಗಳನ್ನು ತುರಾತುರಿಯಿಂದ ಮುಗಿಸಿದಲ್ಲಿ ಬೇಕಾದ ಫಲಿತಾಂಶ ಸಿಗದಿರಬಹುದು, ಸಾವಕಾಶವಾಗಿ ವ್ಯವಹರಿಸಿ. ಎಣ್ಣೆ–ತಿಂಡಿಗಳು ಹಾಗೂ ನಂಜಿನ ಪದಾರ್ಥಗಳಿಂದ ದೂರವಿರಿ.
ಕನ್ಯಾ
ಪ್ರಭಾವಿ ವ್ಯಕ್ತಿಗಳ ಜತೆಯಲ್ಲಿನ ಓಡಾಟ ಸ್ಥಾನಮಾನವನ್ನು ಜತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಷೇರು ಖರೀದಿಸುವಾಗ ಎಚ್ಚರವಹಿಸಿ. ತೈಲ ಉತ್ಪನ್ನಗಳ ಮಾರಾಟದಿಂದ ಲಾಭವಿದೆ.
ತುಲಾ
ಸಮಯವನ್ನು ಅರಿತು ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ. ಹಾಲು ಉತ್ಪಾದಕರಿಗೆ ಲಾಭ ಇರುವುದು. ಶ್ರೀವಿನಾಯಕನ ಸ್ತುತಿ ಮಾಡಿ ವಿಘ್ನಗಳನ್ನು ದೂರಮಾಡಿಕೊಳ್ಳಿರಿ.
ವೃಶ್ಚಿಕ
ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಮಾತಿನಿಂದ ದೊಡ್ಡ ಪ್ರಮಾಣದ ಜಗಳ ನಿಂತು ಹೋಗುತ್ತದೆ. ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಆತ್ಮತೃಪ್ತಿ ದೊರೆಯುತ್ತದೆ. ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ.
ಧನು
ಔದ್ಯೋಗಿಕ ವ್ಯವಹಾರದವರಿಗೆ ನಿರೀಕ್ಷೆಗೆ ತಕ್ಕ ಫಲಗಳು ದೊರೆತು ನೆಮ್ಮದಿಯನ್ನು ಕಾಣುವರು. ನಿರ್ಣಯಗಳಿಗೆ ಸಕಾರಾತ್ಮಕ ಬೆಂಬಲ ದೊರೆಯಲಿದೆ. ಸಲಹೆಗಳಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ.
ಮಕರ
ಕಮಿಷನ್ ಏಜೆಂಟರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅಧಿಕ ಲಾಭ ಇರಲಿದೆ. ಪತ್ನಿಯ ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ಚಿಂತೆ ದೂರವಾಗಿ ವೃದ್ಧಿ ಕಾಣಲಿದ್ದೀರಿ. ಕಪ್ಪು ಬಣ್ಣವು ಅದೃಷ್ಟ ಬದಲಾಯಿಸಲಿದೆ.
ಕುಂಭ
ಸಂಬಂಧ ಪಡದ ವಿಚಾರದಲ್ಲಿ ಅಕ್ಕ ಪಕ್ಕದವರಿಗೆ ಅನವಶ್ಯಕವಾಗಿ ತೀರ್ಮಾನ ಹೇಳಿದರೆ ನಿಷ್ಠುರವಾಗುವುದು ಖಚಿತ. ತಂದೆ ತಾಯಿಯನ್ನು ನೋಡಿಕೊಳ್ಳುವ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಬೇಡಿ.
ಮೀನ
ಚಾಣಾಕ್ಷತನದಿಂದ ಪ್ರತಿಸ್ಪರ್ಧಿಗಳು ದೂರಾಗುವರು. ಕೆಲಸಗಳ ಬಗೆಗೆ ಮುತುವರ್ಜಿವಹಿಸುವುದರಿಂದ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಪೂರ್ಣಗೊಳ್ಳುವುದು. ವಾತ-ಪಿತ್ತಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.