ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು
Published 23 ಮೇ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊರಗುತ್ತಿಗೆ ವ್ಯವಹಾರಗಳಲ್ಲಿ ಶ್ರಮ, ಒತ್ತಡ ಹೆಚ್ಚಲಿದೆ ಹಾಗೂ ಅವುಗಳಿಂದ ವರಮಾನ ಹೆಚ್ಚಲಿದೆ. ನಿಮ್ಮ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು. ಇಂದು ನಿಮಗೆ ಕಠಿಣ ದಿನವಾಗಿರುತ್ತದೆ.
ವೃಷಭ
ಯಾರಾದರೂ ಆತ್ಮಹತ್ಯೆಯ ಪ್ರಯತ್ನದಲ್ಲಿದ್ದರೆ  ನಿಮ್ಮಿಂದ ತಡೆಯಲು ಸಾಧ್ಯ. ನಿಮ್ಮ ದೌರ್ಬಲ್ಯವನ್ನು ನೀವಾಗಿಯೇ ಇತರರ ಮುಂದೆ ಪ್ರದರ್ಶಿಸಿಕಷ್ಟಕ್ಕೊಳಗಾಗಬೇಡಿ. ಕೃಷ್ಣನನ್ನು ಸ್ಮರಿಸುವುದರಿಂದ ಸತ್ಫಲ ಸಿಗಲಿದೆ.
ಮಿಥುನ
ಬರವಣಿಗೆಯಿಂದಾಗಿ ಜೀವನವನ್ನು ನಡೆಸುತ್ತಿರುವವರು ವಿವಾದಾತ್ಮಕ ಬರಹಗಳನ್ನು ಕೈಗೆತ್ತಿಕೊಳ್ಳದಿರಿ. ಇಂಧನ ವ್ಯಾಪಾರಸ್ಥರಿಗೆ ಬಹಳಷ್ಟು ಬೇಡಿಕೆ ಹೆಚ್ಚಲಿದೆ. ಸಂಗಾತಿಯೊಂದಿಗೆ ವಿರುದ್ಧ ಅಭಿಪ್ರಾಯ ಬೇಡ.
ಕರ್ಕಾಟಕ
ನಿಮ್ಮ ಮುಂದಿನ ಪೀಳಿಗೆಯವರಿಗೆ ನಿಮ್ಮ ಪೀಳಿಗೆಯ ವಿಷಯವನ್ನು ಸರಿಯಾಗಿ ತಿಳಿಸದೆ ಇದ್ದಲ್ಲಿ ಅವರು ಪದ್ಧತಿಗಳನ್ನು ಮುಂದುವರೆಸಲು ಕಷ್ಟಸಾಧ್ಯ ವಾಗುತ್ತದೆ. ರೈತಾಪಿ ವರ್ಗದವರ ಕೆಲಸಗಳು ಸರಾಗವಾಗಿ ನೆರವೇರುವುದು.
ಸಿಂಹ
ಪುರುಷ ಪ್ರಧಾನ ಕುಟುಂಬದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ನಿಮ್ಮ ಗೌರವವು ತೀರ ಕಡಿಮೆಯಾದಂತೆ ಅನ್ನಿಸಬಹುದು. ಕೃತಕವಾದ ನಗುವಿನ ಮುಖವಾಡವು ಇಂದು ಕಳಚುವ ಸಾಧ್ಯತೆ ಇದೆ.
ಕನ್ಯಾ
ಉಪಯುಕ್ತ ಮಾಹಿತಿಗಳನ್ನು ಬಂಧು ಮಿತ್ರರೊಂದಿಗೆ ಹಂಚಿಕೊಳ್ಳುವುದರಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಸಾಮರಸ್ಯದ ಬದುಕನ್ನು ಮಕ್ಕಳಿಗೆ ಮನವರಿಕೆ ಮಾಡದ ಹೊರತು ಕುಟುಂಬದ ಕಲಹಗಳಿಗೆ ಇತ್ಯರ್ಥವಿಲ್ಲ.
ತುಲಾ
ಕರಗತವಾಗಿರುವ ಕೆಲಸವನ್ನೇ ಇಂದು ನಿಮಗೆ ಮಾಡಲು ಹೇಳಿದಾಗ ಗಡಿಬಿಡಿಯ ಕಾರಣವಾಗಿ ವ್ಯತ್ಯಾಸಗಳಾಗಬಹುದು. ಮನೆ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಹಳೆ ನೆನಪನ್ನು ಮರುಕಳಿಸುವಂತಹ ವಸ್ತುಗಳು ಲಭ್ಯವಾಗುತ್ತವೆ.
ವೃಶ್ಚಿಕ
ಸುಖಕರವಾದ ಜೀವನವನ್ನು ನಡೆಸುತ್ತಿರುವಾಗ ಸಣ್ಣ ಪುಟ್ಟ ಕಷ್ಟಗಳು ಬಂದದ್ದೇ ಹೆಚ್ಚಾಗಿ ಕಾಣಬಹುದು. ಮನೋನಿಯಂತ್ರಣದಿಂದಾಗಿ ಮನಸ್ಸಿನ ಅಸಮಾಧಾನಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
ಧನು
ಅಪರಾತ್ರಿಯ ವೇಳೆ ಸಂಚರಿಸುವಾಗ ನಿಶಾಚರಿಗಳಿಂದ ತೊಂದರೆ ಆಗುವ ಸಾಧ್ಯತೆಗಳು ಇವೆ. ನಿಮ್ಮ ಕುಟುಂಬದ ಭಿನ್ನಾಭಿಪ್ರಾಯಗಳನ್ನು ಬೇರೆಯವರಲ್ಲಿ ಹೇಳಿಕೊಳ್ಳಬೇಡಿ. ದುರುಪಯೋಗಗೊಳ್ಳಬಹುದು.
ಮಕರ
ಉನ್ನತ ವ್ಯಾಸಂಗದ ವಿಚಾರದಲ್ಲಿ ನಿಮ್ಮ ನಿಲುವನ್ನು ನಿಮ್ಮ ನಿಕಟವರ್ತಿ ಉಪಾಧ್ಯಾಯರಲ್ಲಿ ತಿಳಿಸಿ ಅವರ ಅಭಿಪ್ರಾಯವನ್ನು ಪಡೆದುಕೊಳ್ಳಿ. ಸ್ವತ್ತು ಕೊಳ್ಳುವ ವಿಚಾರದಲ್ಲಿ ಕಾನೂನಿನ ಸಲಹೆ ಅವಶ್ಯವಾಗಿ ಪಡೆಯಿರಿ.
ಕುಂಭ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಬೇರೊಬ್ಬರ ನಿತ್ಯ ಚಟುವಟಿಕೆಗಳು ನಿಮ್ಮ ಕಲ್ಪನೆಯ ವಿರುದ್ಧ ರೀತಿಯಲ್ಲಿರುವುದನ್ನು ಕಂಡು ಆಶ್ಚರ್ಯ ಪಡುವಿರಿ. ಭಗವಂತನ ಕೆಲವು ಮುನ್ಸೂಚನೆಗಳನ್ನು ಪರಾಮರ್ಶಿಸಿ.
ಮೀನ
ನೀವು ಶಿಕ್ಷಕರಾಗಿದ್ದರೆ ಗಿಳಿ ಪಾಠದಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಅನ್ನ ಸಂತರ್ಪಣೆಯನ್ನು ಮಾಡುವುದರಿಂದ ಸಂತೃಪ್ತಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ.