ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಮನಸ್ಥಿತಿಯ ಮೇಲೆ ಕೆಟ್ಟ ಆಲೋಚನೆಗಳು ಪರಿಣಾಮ ಬೀರಬಹುದು
Published 24 ಮೇ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೃಪಣತೆಯನ್ನು ಹೆಚ್ಚು ಪ್ರದರ್ಶಿಸಿ ಮನೆಯ ಸಾಮಗ್ರಿಗಳನ್ನು ತಂದು ಹಾಕುವಲ್ಲಿ ಕಡಿಮೆ ಮಾಡಿ ಅಸಮಾಧಾನಕ್ಕೆ ಕಾರಣವಾಗಬೇಡಿ. ಬಾಲ್ಯದ ಕೆಲವು ಅಪಘಾತಗಳ ನೋವು ಮರುಕಳಿಸುವ ಸಾಧ್ಯತೆ ಇದೆ.
ವೃಷಭ
ಶೀಘ್ರ  ಕಲಿಕಾ ಸಾಮರ್ಥ್ಯವು ಇತರರ ಹುಬ್ಬನ್ನು ಮೇಲೆ ಮಾಡುವಂತೆ ಮಾಡುತ್ತದೆ. ಬೇಳೆ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದರ ಮೂಲಕ  ಉಂಟಾಗಿರುವ ನಿಶ್ಶಕ್ತಿಯನ್ನು ನಿವಾರಿಸಿಕೊಳ್ಳಬಹುದು.
ಮಿಥುನ
ಉಳಿತಾಯದ ಹೆಸರಿನಲ್ಲಿ ದೊಡ್ಡ ದೊಡ್ಡ ಮೇಳಗಳಲ್ಲಿ ಖರೀದಿ ಮಾಡಲು ಹೋಗಿ ಮೋಸ ಹೋಗದಿರಿ. ಸರಿ ತಪ್ಪು ಹೇಳುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ. ತೈಲ ವ್ಯಾಪಾರಗಳಿಂದ ಲಾಭ.
ಕರ್ಕಾಟಕ
ಕಂಕಣ ಭಾಗ್ಯ ನಿಮ್ಮನ್ನರಸಿ ಬಂದಾಗ ನಿರಾಕರಿಸುವಂಥ ಮೂರ್ಖತನದ ಕೆಲಸಗಳನ್ನು ಮಾಡಬೇಡಿ. ಪರಿಶುದ್ಧತೆ ಅರಸಿ ಮಾಡಿದ ಸಂಶೋಧನೆ ಪ್ರಸಿದ್ಧಿ ಪಡೆಯುತ್ತದೆ. 
ಸಿಂಹ
ಭವಿಷ್ಯವನ್ನು ಗ್ರಹಿಸುವ ವಿಶೇಷ ಗುಣವನ್ನು ಮಿತ್ರರೆದುರು ಪ್ರದರ್ಶಿಸಿದಾಗ ಅವರು ಅವಕ್ಕಾಗುವ ಸಂಭವವಿದೆ. ಸಹೋದರನ ಕೆಲವು ಅಹಿತಕರ ನಡವಳಿಕೆಗಳು ಅಪಮಾನ ಆದಂತೆ ಆಗಬಹುದು.
ಕನ್ಯಾ
ಪ್ರಾಚೀನ ಕಾಲದಿಂದ  ಪೂರ್ವಿಕರು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಕೈಬಿಡುವ ಯೋಚನೆ ಮಾಡಬೇಡಿ. ಸಂಗೀತ ಹಾಗೂ ಭರತನಾಟ್ಯದಲ್ಲಿ ಆಸಕ್ತಿ ಹೆಚ್ಚಾಗಬಹುದು.
ತುಲಾ
ಸ್ಟಾರ್ಟ್‌ ಅಪ್‌ಗಳನ್ನು ಪ್ರಾರಂಭ ಮಾಡಬೇಕು ಎಂದು ಯೋಜನೆ ಹೊಂದಿರುವವರು ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ. ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿ ಚಾಣಾಕ್ಷತೆ  ಮೆರೆಯುವಿರಿ.
ವೃಶ್ಚಿಕ
ಹಠಮಾರಿತನದಿಂದ ಮಕ್ಕಳ ಪ್ರತಿ ಹೆಜ್ಜೆಗೂ ವಿವಿಧ ಕಾರಣಗಳನ್ನು ನೀಡಿ ಅವರನ್ನು ಅಸಮಧಾನಪಡಿಸಲು ಹೋಗಬೇಡಿ. ನಿಮ್ಮ ಇಷ್ಟದ ದೇವಾಲಯ ಅಥವಾ ಮನೆದೇವರ ಸ್ಥಾನಗಳಿಗೆ ಭೇಟಿ ಕೊಡುವ ಯೋಗವಿದೆ.
ಧನು
ಕಾರ್ಯವನ್ನು ಶುರು ಮಾಡಿದ ನಂತರ ಪದೇ ಪದೇ ನಿಲ್ಲಿಸುವಂತಹ ಸನ್ನಿವೇಶಗಳು ಎದುರಾಗುತ್ತವೆ. ಉಪನ್ಯಾಸಕಲೆಯನ್ನು ಹೊಂದಿದವರಿಗೆ ಉತ್ತಮ ವೇದಿಕೆ ಪ್ರಾಪ್ತಿಯಾಗುವುದು.
ಮಕರ
ವೈವಾಹಿಕ ಜೀವನದ ಆರಂಭದಲ್ಲಿರುವವರು ಧೈರ್ಯದಿಂದ ಎಲ್ಲವನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ.  ನಿಲುವಿನಲ್ಲಿ ಆದಷ್ಟು ಸ್ಥಿರವಾಗಿರುವಂಥ ಯೋಚನೆ  ಮಾಡಿ. ಶುಭ ಸುದ್ದಿ ಕೇಳುವಿರಿ.
ಕುಂಭ
ಬಂಗಾರದ ಬೆಲೆಯ ಹಾವು –ಏಣಿ ಆಟವು  ಒಂದು ರೀತಿಯ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಮನಸ್ಸು ಕೆಟ್ಟ ಆಲೋಚನೆ ಹಾಗೂ ವಂಚನೆ ಮಾಡದಂತೆ ತಡೆಯೊಡ್ಡಿ.
ಮೀನ
ಸಂಗಾತಿಯೊಂದಿಗಿನ ಮುನಿಸು ತಾಳ್ಮೆಯಿಂದ ಕಾದರೆ ಸರಿಹೋಗುತ್ತದೆ. ಉತ್ತಮ ಮಾತಿನ ಕಲೆಯು ನಿಮ್ಮ ಬೆಂಬಲಕ್ಕೆ ಸದಾ ಇದ್ದೇ ಇರುತ್ತದೆ.