ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆತ್ಮೀಯರೊಂದಿಗೆ ಮನಸ್ತಾಪ ಉಂಟಾಗಬಹುದು
Published 25 ಆಗಸ್ಟ್ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮಲ್ಲಿ  ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು, ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ. ಕೆಲಸದಲ್ಲಿ ಈ ದಿನ ವಿಘ್ನಗಳು ಎದುರಾದರೂ,  ಅಪೇಕ್ಷಿತ ಫಲ ದೊರಕುವುದು. ಸಂಬಂಧಿಗಳಿಂದ ಸಂತಸದ ಸುದ್ದಿ ಕೇಳುವಿರಿ.
ವೃಷಭ
ವ್ಯಾಪಾರದಲ್ಲಿ ಸಹಚರರಿಂದಲೇ ಮೋಸವಾಗುತ್ತಿರುವ ವಿಚಾರವು ಅನುಭವಕ್ಕೆ ಬಂದು ದುಃಖವಾಗಬಹುದು. ಇಂದಿನ ಆಫೀಸಿನ ಕೆಲಸಗಳೂ ಮುಗಿಯುವುದು. ಜಾಹೀರಾತು ಏಜೆನ್ಸಿಯವರಿಗೆ ಆದಾಯವಿರುವುದು.
ಮಿಥುನ
ಯಾವುದೇ ನಿಯಮ ಉಲ್ಲಂಘನೆಯಾಗದೇ ಇರುವ ರೀತಿಯಲ್ಲಿ ಇರುವುದು ಉತ್ತಮ. ಅಧಿಕಾರ, ಅನುಭವದಿಂದ ಆತ್ಮಾಭಿಮಾನ ವೃದ್ಧಿಯಾಗಲಿದೆ. ಹೊಸ ಏಜೆನ್ಸಿಯೊಂದನ್ನು ಪ್ರಾರಂಭಿಸುವವರಿಗೆ ಸಕಾಲ.
ಕರ್ಕಾಟಕ
ಶೀತ ಬಾಧೆ ಹೋಗಲಾಡಿಸಿಕೊಳ್ಳುವ ವಿಚಾರವಾಗಿ ಮನೆಮದ್ದಿನ ಮೊರೆ ಹೋಗುವುದು ಉತ್ತಮ. ಮನೆಗಾಗಿ ದುಬಾರಿ ಸಾಮಗ್ರಿ ಖರೀದಿಸುವುದು ಖರ್ಚಿಗೆ ದಾರಿಯಾಗಲಿದೆ.
ಸಿಂಹ
ಅರ್ಧಕ್ಕೆ ನಿಂತ ಎಲ್ಲಾ ಕಾರ್ಯಗಳು ಪುನಃ ಚಾಲನೆ ಪಡೆಯಲಿವೆ. ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು  ಸೂಕ್ತ ಸಮಯ. ಉತ್ತಮ ಕಾರ್ಯಗಳಿಗೆ ಎಂದಿನಂತೆಯೇ ಶ್ಲಾಘನೆ ಸಿಗುತ್ತದೆ.
ಕನ್ಯಾ
ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯುವುದು. ಗುರು ವಾಕ್ಯ ಪಾಲಿಸುವುದರಿಂದ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಸಂಜೆಯ ಸಮಯದಲ್ಲಿ ಸಣ್ಣ ವಿಹಾರಕ್ಕೆ ತೆರಳುವಂತೆ ಆಗುವುದು.
ತುಲಾ
ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿದರೆ, ಬಯಕೆ ಈಡೇರುವುದು. ವರಿಷ್ಠರೊಡನೆ ಗಣಿಗಾರಿಕೆ ವಿಷಯಗಳ ಬಗ್ಗೆ ಚರ್ಚೆ ಸಂಭವಿ ಸಬಹುದು. ಇನ್ನೊಬ್ಬರಿಗೆ ಸಾಲದ ರೂಪದಲ್ಲಿ ಹಣ ಕೊಡುವುದು ಸರಿಯಲ್ಲ.
ವೃಶ್ಚಿಕ
ಬಹು ದೊಡ್ಡ ಪ್ರಮಾಣದ ಸಿಹಿ ತಿಂಡಿಯ ತಯಾರಕರಿಗೆ ಕಾರ್ಮಿಕರ ಕೊರತೆ ಎದುರಾಗುವ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣದಿಂದ ಹಿರಿಯರಿಗೆ ನೆಮ್ಮದಿ. ನಿಮ್ಮ ಹಿತಾಸಕ್ತಿಗಳಿಗೆ ಹೆಚ್ಚು ಗಮನ ಕೊಡಿ.
ಧನು
ವಕೀಲಿ ವೃತ್ತಿಯವರಿಗೆ ನಿಗೂಢ ವಿಷಯ ಸಂಗ್ರಹಣೆಗೆ ಅತ್ಯಂತ ಸೂಕ್ತವಾಗಿರುತ್ತದೆ. ದೇಹದಲ್ಲಿ ವಾಯು ಬಾಧೆ ಕಂಡುಬಂದು ಸಣ್ಣ-ಪುಟ್ಟ ಅನಾರೋಗ್ಯ ಎದುರಾಗುವುದು.
ಮಕರ
ಉದ್ಯೋಗಕ್ಕಾಗಿ ವಿದೇಶಪ್ರಯಾಣದ ಅವಕಾಶ ಸಿಗಬಹುದು. ಸಂಘ-ಸಂಸ್ಥೆಯಲ್ಲಿ ಅಥವಾ ಗ್ರಾಮೀಣ ಬದುಕಿನಲ್ಲಿ ಅಧಿಕಾರ ಸಿಗಲಿದೆ. ಆರ್ಥಿಕ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಗಳು ಬರಬಹುದು
ಕುಂಭ
ದುಡುಕಿನ ಕೆಲವು ನಿರ್ಧಾರಗಳಿಂದಾಗಿ ಆತ್ಮೀಯರಲ್ಲಿ ಮನಸ್ತಾಪವಾಗಲಿದೆ. ಹೊರ ದೇಶದ ಪ್ರಯಾಣದ ಅವಕಾಶಗಳು ಸಿಗಬಹುದು. ನೃತ್ಯಾಭ್ಯಾಸ ಮುಂದುವರಿಸುವಂತೆ ಅಧ್ಯಾಪಕರಿಂದ ಒತ್ತಾಯ ಹೆಚ್ಚುವುದು.
ಮೀನ
ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತ ಸಮಯವಾಗಿದೆ. ಆಫೀಸಿನ ಸಿಬ್ಬಂದಿಯೊಂದಿಗೆ ಮಾತುಗಳನ್ನು ಕಡಿಮೆ ಮಾಡುವುದು ಉತ್ತಮ. ರಾಜಕೀಯ ಸೇರುವ ಯೋಚನೆ ಬರುವುದು.