ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹಿಂದೆ ಆರಂಭ ಮಾಡಿದ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ
Published 25 ಜನವರಿ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿಂದೆ ಆರಂಭ ಮಾಡಿದ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆ ಸನ್ನಿವೇಶ ಎದುರಾಗುವುದು.
ವೃಷಭ
ಉದ್ಯೋಗದ ಸಂದರ್ಶನದಲ್ಲಿ ಧೈರ್ಯದಿಂದ ಮುನ್ನುಗಿ, ಶುಭಫಲವನ್ನು ಹೊಂದುವಿರಿ. ಗುಣಾತ್ಮಕ ಕಾರ್ಯಗಳಿಗೆ ಮಹತ್ವ ನೀಡುವುದು ಉತ್ತಮ ಈ ದಿನ ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ.
ಮಿಥುನ
ರಕ್ತದ ಒತ್ತಡ, ಮೂತ್ರ ಸಂಬಂಧದ ದೋಷಗಳ ಬಗ್ಗೆ ಜಾಗ್ರತೆ ವಹಿಸಿ. ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಸಂಜೆ ಅಚ್ಚರಿಯ ಸುದ್ದಿಯೊಂದನ್ನು ಕೇಳಲಿರುವಿರಿ.
ಕರ್ಕಾಟಕ
ಕೋರ್ಟಿನ ಕೆಲಸಗಳನ್ನು ತ್ವರಿತಗತಿಯಲ್ಲಿ ನಡೆಸಿಕೊಡುವಂತೆ ವಕೀಲರಲ್ಲಿ ಕೇಳಿಕೊಳ್ಳುವುದು ಉತ್ತಮ. ಸಾಫ್ಟ್‌ವೇರ್‌ ಕ್ಷೇತ್ರದ ಉದ್ಯೋಗಿಗಳಿಗೆ ಉನ್ನತಸ್ಥಾನ ಸಿಗಲಿದೆ. ಬಿಳಿ, ಕೆಂಪು ಬಣ್ಣ ಶುಭ ತರಲಿದೆ.
ಸಿಂಹ
ದೇಹಕ್ಕೆ ಅವಶ್ಯಕತೆ ಇರುವಷ್ಟು ನಿದ್ದೆಯನ್ನು, ವಿಶ್ರಾಂತಿಯನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸ್ನೇಹ ಸಂಬಂಧಗಳು ಗಟ್ಟಿಯಾಗಿ ಸಹಕಾರಗಳು ನಿರೀಕ್ಷೆಗೆ ಮೀರಿ ಬರಲಿದೆ.
ಕನ್ಯಾ
ಅಭಿವೃದ್ಧಿಗೆ ಪೂರಕವಾದ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ, ಈ ದಿನ ನಿಯೋಜಿತ ಕೆಲಸಗಳನ್ನು ಅಕ್ಕರೆಯಿಂದ ಒಪ್ಪಿಕೊಳ್ಳಿ, ಮತ್ತೊಂದು ಹೊಸ ಕೆಲಸ ನಿಮಗಾಗಿ ಕಾದಿರುವುದು. ಹಣದ ಚಿಂತೆ ಇರುವುದಿಲ್ಲ.
ತುಲಾ
ಹೊಲದ ಅಥವಾ ಜಮೀನಿನ ಕೆಲಸಕ್ಕೆ ಆಳನ್ನು ಗೊತ್ತು ಮಾಡಿಕೊಳ್ಳುವುದು ಉತ್ತಮ. ಪೊಲೀಸ್‌ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಇರಲಿದೆ. ಕಾರ್ಯಸಾಧನೆಗಾಗಿ ವಾಮಮಾರ್ಗವನ್ನು ಬಳಸಬೇಡಿ.
ವೃಶ್ಚಿಕ
ವಾದ ಮಾಡುವ ಅಭ್ಯಾಸದಿಂದ ಸಂಬಂಧಗಳನ್ನು ಹಾಳುಮಾಡಿಕೊಳ್ಳುವ ಲಕ್ಷಣಗಳು ಕಂಡುಬರಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಅನಿವಾರ್ಯ. ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಸ್ಥರಿಗೆ ಲಾಭ.
ಧನು
ಅಮೂಲ್ಯ ವಸ್ತುವಿನ ಅಗಲಿಕೆಯು ಅಥವಾ ಕಾಣೆಯಾಗುವಿಕೆಯು ನಿಮ್ಮ ಮನಸ್ಸಿಗೆ ದೊಡ್ಡ ಗಾಯವನ್ನು ಮಾಡುತ್ತದೆ. ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು.
ಮಕರ
ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಷೇರು ಕೊಳ್ಳವ ಯೋಜನೆಗೆ ಮುಂದಾಗಿ. ಜಮೀನಿನ ಕೆಲಸಗಳು ಯಾವುದೇ ತೊಂದರೆ ಇಲ್ಲದೆ ನೆರವೇರಲಿವೆ. ಮಾನಸಿಕವಾಗಿ ಗೊಂದಲಗಳಿರುವುದು.
ಕುಂಭ
ರಾಜಕಾರಣಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಈ ದಿನ ಸುಯೋಗವೆಂದು ಹೇಳಬಹುದು. ಆಹಾರ ಪದಾರ್ಥದ ಬೆಳೆಯನ್ನು ಬೆಳೆದ ಕೃಷಿಕರಿಗೆ ಉತ್ತಮ ಲಾಭ ಸಿಗುವುದು. ಮಕ್ಕಳು ನಿಮಗೆ ಸಂತಸ ತರಲಿದ್ದಾರೆ.
ಮೀನ
ಪ್ರೀತಿಯ ವಿಷಯವನ್ನು ಸಂಬಂಧಪಟ್ಟವರ ಮುಂದಿಡುವುದು ಲೇಸು, ನಾಳೆ ಎನ್ನುವುದು ಈ ವಿಷಯದಲ್ಲಿ ಸೂಕ್ತವಲ್ಲ. ಮೀನ-ಮೇಷ ಎಣಿಸದೆ ನಿಮ್ಮ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳಬಹುದು.