ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಧನಲಾಭವಾಗುವ ಸಾಧ್ಯತೆಗಳಿವೆ
Published 8 ಸೆಪ್ಟೆಂಬರ್ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದಾದರು ವಿಷಯದ ಬಗ್ಗೆ ಸಲಹೆಯನ್ನು ಎಷ್ಟು ಜನರಲ್ಲಿ ಕೇಳಿದರೂ ತೀರ್ಮಾನ ನಿಮ್ಮ ಸ್ವಂತದ್ದಾಗಿರಲಿ. ದಿನದ ಅಂತ್ಯದಲ್ಲಿ ಶುಭಸುದ್ದಿ ಕೇಳುವಿರಿ. ತೃಪ್ತಿಯ ಜೀವನ ನಡೆಸುವಿರಿ.
ವೃಷಭ
ಕಷ್ಟ ನಷ್ಟಗಳನ್ನೇ ಯೋಚಿಸುತ್ತ ಕೂರಬೇಡಿ. ಅವೆಲ್ಲವೂ ಸದ್ಯದ ಮಟ್ಟಿಗೆ ಕ್ಷಣಿಕವೇ ಆಗಿರುತ್ತದೆ. ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ. ಧನಲಾಭವಾಗುವ ಸಾಧ್ಯತೆಗಳಿವೆ.
ಮಿಥುನ
ಕೋಪವನ್ನು ಹೊಂದಿದ ಸಮಯದಲ್ಲಿ ಇತರರೊಂದಿಗೆ ಮಾತನಾಡುವುದಾಗಲಿ ಅಥವಾ ಏನಾದರು ಕೆಲಸ ಮಾಡುವುದನ್ನು ಮಾಡಬೇಡಿ. ವಂಶಕ್ಕೆ ಸಂಬಂಧಿಸಿದ ಆಸ್ತಿಯು ನಿಮಗೆ ಸಿಗಲಿದೆ.
ಕರ್ಕಾಟಕ
ಲಾಭ ಬರುವುದಿಲ್ಲ ಎಂದು ಅನಿಸಿದರೆ ಒಳ್ಳೆಯ ಕೆಲಸವಾದರೂ ನೀವು ಮಾಡುವುದಿಲ್ಲ. ಇಂದಿನ ಎಲ್ಲಾ ಕೆಲಸಗಳಲ್ಲಿಯೂ ವಿಶೇಷ ಆಸಕ್ತಿಯನ್ನು ತೋರುವಿರಿ.
ಸಿಂಹ
ಪ್ರೀತಿ ಹಾಗೂ ನಂಬಿಕೆಯ ಪದಗಳಿಗೆ ಅರ್ಥವಿಲ್ಲ ಎಂದು ಒಂದು ಕ್ಷಣ ಎನಿಸಿದರೂ ತಕ್ಷಣ ಆ ನಿರ್ಧಾರಕ್ಕೆ ಬರಬೇಡಿ. ಆರೋಗ್ಯದಲ್ಲಾಗುವ ಸಣ್ಣ ಪುಟ್ಟ ಏರುಪೇರಿನ ಬಗ್ಗೆ ಎಚ್ಚರಿಕೆ ವಹಿಸಿ.
ಕನ್ಯಾ
ಹೆಂಡತಿಯ ತವರು ಮನೆಯ ಕಡೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡುವಿರಿ. ಪತ್ನಿಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಜಿಪುಣತನ ತೋರದಿರಿ.
ತುಲಾ
ಹಣಕಾಸಿನ ಅವಶ್ಯಕತೆಯನ್ನು ಪೂರೈಸುವ ಕಾರಣದಿಂದಾಗಿ ಅಧಿಕ ಸಮಯ ಕೆಲಸ ಮಾಡುವಿರಿ. ತಂದೆಯ ವಿಪರೀತ ಸ್ಥಿತಿಗಳಿಂದ ಅವರ ಕೆಲಸ ಗಳೆಲ್ಲವೂ ಹೆಗಲ ಮೇಲೆ ಬೀಳುವವು. ಭರವಸೆಯ ಮಾತುಗಳು ಸಿಗಬಹುದು.
ವೃಶ್ಚಿಕ
ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪದೇ ಇರುವುದರಿಂದ ಕಾರ್ಯದಲ್ಲಿ ಜಯವನ್ನು ಸಾಧಿಸುವಿರಿ. ಏನೇ ಸಮಸ್ಯೆಗಳಿದ್ದರೂ ಅದನ್ನು ಮಾತಿನ ಮುಖಾಂತರ ಬಗೆಹರಿಸಿಕೊಳ್ಳುವಿರಿ.
ಧನು
ವೈಯಕ್ತಿಕ ಸಮಸ್ಯೆಗಳನ್ನು ಸಹೋದರನಲ್ಲಿ ಹೇಳಿಕೊಂಡಾಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಹಾಯ ದೊರೆಯಲಿದೆ. ಕೋಪವನ್ನು ಸಂಬಂಧಪಡದ ವ್ಯಕ್ತಿಯ ಮೇಲೆ ತೋರಿಸುವುದು ಬೇಡ.
ಮಕರ
ಮನೆಯಲ್ಲಿನ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ನೀವು ಪ್ರತಿಯೊಂದು ರುಪಾಯಿಯನ್ನು ಖರ್ಚು ಮಾಡುವಾಗಲೂ ಹಲವು ಬಾರಿ ಯೋಚಿಸುವಿರಿ. ಮಗನ ಪ್ರಬುದ್ಧತೆಯಿಂದ ಹೆಗಲ ಭಾರ ಕಡಿಮೆಯಾಗುತ್ತದೆ.
ಕುಂಭ
ನಿರ್ಧಾರಗಳನ್ನು ಎಲ್ಲರ ಮುಂದೆ ತಿಳಿಸುವ ಮುನ್ನ ಸಂಪೂರ್ಣವಾಗಿ ಯೋಚನೆ ಮಾಡಿ. ಮಾನಸಿಕ ಒತ್ತಡ ಕಡಿಮೆಯಾಗಬೇಕೆಂದರೆ ಜನರ ಜತೆಗೆ ಬೆರೆಯಬೇಕಾಗುತ್ತದೆ. ಅಣ್ಣ ತಮ್ಮಂದಿರ ಸಮಾಗಮವಾಗುವುದು.
ಮೀನ
ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವ ಘಟನೆಗಳು ನಡೆ ಯುವವು. ಸ್ವಂತ ವ್ಯವಹಾರಗಳು ಇದ್ದಲ್ಲಿ ಅವು ಲಾಭವನ್ನು ತಂದುಕೊಡುತ್ತವೆ. ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗಿ, ಲಾಭ ತರಲಿದೆ.
ADVERTISEMENT
ADVERTISEMENT