ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಶುಕ್ರವಾರ, 02 ಜೂನ್ 2023
Published 1 ಜೂನ್ 2023, 20:26 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ಕೆಲವರ ದುಷ್ಟಬುದ್ಧಿಯ ಅನಾವರಣ ಆಗಲಿದೆ. ಹೆಚ್ಚಿನ ಗಮನ ನಿಮ್ಮ ಸಹೋದ್ಯೋಗಿಗಳಲ್ಲಿ ಇಡುವುದರಿಂದ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಮಾರ್ಗ ದೊರೆಯುತ್ತದೆ. ಸಾಂಕ್ರಾಮಿಕ ರೋಗ ಬರಬಹುದು.
ವೃಷಭ
ಮೃಗದ ಚರ್ಮದಿಂದ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಮನೆಯ ಕೆಲಸಗಳನ್ನು ನಿಭಾಯಿಸುವುದರಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಸಂಬಂಧಿಗಳ ಆಗಮನವಾಗಬಹುದು.
ಮಿಥುನ
ಮಕ್ಕಳ ಭವಿಷ್ಯದ ಮೇಲಿನ ಚಿಂತೆ ಅವರ ಕೆಲವು ನಡವಳಿಕೆಯಿಂದಹೆಚ್ಚಾಗುವುದು. ಸಮಸ್ಯೆಗಳ ಸರಮಾಲೆಗಳು ಒಂದೊಂದಾಗಿ ನಿವಾರಣೆಯಾಗುತ್ತದೆ. ಅಧಿಕಾರವನ್ನು ಎಲ್ಲೆಂದರೆ ಅಲ್ಲಿ ಚಲಾಯಿಸಬೇಡಿ.
ಕರ್ಕಾಟಕ
ಸಮಾಜದಲ್ಲಿ ಬದಲಾವಣೆ ತರುವ ವಿಚಾರವಾಗಿ ಕ್ರಾಂತಿಕಾರಿ ನಡೆಯೊಂದನ್ನು ಕೈಗೊಳ್ಳುವಿರಿ. ಭೋಜನ ಸಮಯವು ಹೆಚ್ಚು ಕಡಿಮೆ ಆಗುತ್ತದೆ. ಸಣ್ಣ ಮಕ್ಕಳಿಂದ ಮರ್ಯಾದೆಯು ಹೋಗಬಹುದು.
ಸಿಂಹ
ಆಯಾ ಋತುವಿನಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರಾಟ ಮಾಡುವವರು ಉದ್ಯೋಗ ಶುರು ಮಾಡುವಿರಿ. ಹೊಸ ವಿನ್ಯಾಸದ ಉಡುಪುಗಳುವ ಸ್ಥಳಕ್ಕೆ ಸರಿಯಾಗದಿರಬಹುದು.
ಕನ್ಯಾ
ಮಿತ್ರನ ಮನೆಯ ಸಮಾರಂಭದಲ್ಲಿ ಭಾಗವಹಿಸುವುದರಿಂದ ಹಳೆಯ ಮಿತ್ರರನ್ನು ಭೇಟಿಯಾದ ಸಂಭ್ರಮ ನಿಮ್ಮದಾಗುತ್ತದೆ. ಯಾವ ಜಾಗದಲ್ಲಿ ವೃತ್ತಿಯನ್ನು ಮಾಡುವುದೆಂದು ಚಿಂತಿಸುವಿರಿ.
ತುಲಾ
ಹಲವು ಪ್ರಯತ್ನದ ನಂತರ ನಿಮ್ಮ ಪ್ರವಾಸದ ಯೋಜನೆಯು ಕಾರ್ಯ ರೂಪಕ್ಕೆ ಬರಲಿದೆ. ಸವಾಲು ನಿಮ್ಮ ಸಾಮರ್ಥ್ಯದ ಬಗ್ಗೆ ಬಂದಾಗ ಎಂಥ ಕೆಲಸವನ್ನಾದರೂ ಮಾಡಲು ಮುಂದಾಗುತ್ತೀರಿ. ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಬನ್ನಿ.
ವೃಶ್ಚಿಕ
ಉಪಕಾರವನ್ನು ಮಾಡುವವರೆಲ್ಲರೂ ಹಿತಚಿಂತಕರೆಂದು ತಿಳಿಯಬೇಡಿ ಏಕೆಂದರೆ ನಯವಂಚಕರು ಸಹ ಆಗಬಹುದು. ಅಕ್ಕ ಪಕ್ಕದ ಮನೆಯವರ ಉಪಟಳ ತಡೆಯಲಾಗದೆ ಏರುಧ್ವನಿಯಲ್ಲಿ ಮಾತನಾಡುವಿರಿ.
ಧನು
ಮಾಂಗಲ್ಯ ಯೋಗ ತೋರಿ ಬಂದರೂ ನಿಮ್ಮ ನಿಶ್ಚಿತ ನಿರ್ಧಾರ ಮುಖ್ಯವೆನಿಸಲಿದೆ. ಗೆಳೆತನಕ್ಕೆ ಸಂಬಂಧಿಸಿದ ಒಂದು ಗುಪ್ತ ವಿಚಾರ ಸೋರಿಕೆಯಾಗಬಹುದು. ವಾಸ್ತು ಶಿಲ್ಪದ ವಿದ್ಯಾರ್ಥಿಗಳಿಗೆ ಉತ್ತಮ ಬೇಡಿಕೆ ಬರಲಿದೆ.
ಮಕರ
ಸಣ್ಣ ಕೈಗಾರಿಕೋದ್ಯಮದವರಿಗೆ ಸರ್ಕಾರದಿಂದ ಸಹಾಯ ಸಹಕಾರ ದೊರೆಯಲಿದೆ. ನಿಮ್ಮ ಮೇಲಧಿಕಾರಿಗಳು ನಿಮ್ಮ ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಲು ಅಶಕ್ತರಾಗುವ ಸಂಭವವಿದೆ.
ಕುಂಭ
ಏಕಾಗ್ರತೆ ಕೊರತೆಯಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ಉಂಟಾಗುತ್ತದೆ. ಕೆಲಸಗಳನ್ನು ಇತರರು ಅತ್ಯಂತ ಅಚ್ಚುಕಟ್ಟಾಗಿ ಮಾಡು ವುದರಿಂದಾಗಿ ನಿಮ್ಮ ಮೇಲಿನ ಇತರರ ಅವಲಂಬನೆ ಕಡಿಮೆಯಾಗುವುದು.
ಮೀನ
ನಿಮ್ಮೊಳಗಿರುವ ಮಾತನ್ನು ಭಯವಿಲ್ಲದೇ ತಿಳಿಸಿರುವುದರಿಂದ ಹೆಚ್ಚಿನ ವ್ಯಾಪಾರ ವ್ಯವಹಾರ ಗಿಟ್ಟಿಸಿಕೊಳ್ಳುವಿರಿ. ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡಿ.