ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಪ್ರೀತಿಯಿಂದ ಕುಟುಂಬದವರ ಮನಸ್ಸನ್ನು ಗೆಲ್ಲುವಿರಿ
Published 22 ಜೂನ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ನಿಧಾನವಾಗಿ ಯಶಸ್ಸು ಪ್ರಾಪ್ತಿ. ಊರಿನಲ್ಲಿ ನಡೆಯುವ ಸುಗಮ ಸಂಗೀತದಲ್ಲಿ ಭಾಗವಹಿಸುವಿರಿ.
ವೃಷಭ
ಬಹುಜನರ ಅಭಿಪ್ರಾಯವನ್ನು ಕೇಳಿ ಆರಂಭಿಸಲು ಹೊರಟ ಕೆಲಸದಲ್ಲಿ ವಿಭಿನ್ನ ಅಭಿಪ್ರಾಯದಿಂದಾಗಿ ಗೊಂದಲಕ್ಕೆ ಒಳಗಾಗುವಿರಿ. ಮತ್ತೊಬ್ಬರನ್ನು ಗೌರವಿಸುವುದರಿಂದ ನಿಮ್ಮ ಗೌರವವೂ ಹೆಚ್ಚುವುದು.
ಮಿಥುನ
ಜೀವನದ ಹಳೆಯ ನೆನಪುಗಳನ್ನು ಮರೆತು ಭವಿಷ್ಯದತ್ತ ಗಮನಹರಿಸಿ. ಕಾರ್ಮಿಕರ ಅಸಹಕಾರದಿಂದ ಗೃಹ ನಿರ್ಮಾಣ ಕಾರ್ಯ ವಿಳಂಬವಾಗುತ್ತದೆ. ಉತ್ತಮ ಆಹಾರವನ್ನು ಸವಿಯುವಿರಿ.
ಕರ್ಕಾಟಕ
ಮುಖ್ಯವಿಷಯವನ್ನು ಮಾತನಾಡಲು ಮರೆತುದರಿಂದ ದಿನಚರಿಯಲ್ಲಿ ವಿಳಂಬ ಅನುಭವಿಸುವಂತೆ ಆಗುವುದು. ದೂಳಿನಿಂದಾಗಿ ಕಣ್ಣಿನ ಸಮಸ್ಯೆ ಉಂಟಾಗಬಹುದು.
ಸಿಂಹ
ಗುರುವಿನ ಸಾನ್ನಿಧ್ಯ ಹಾಗೂ ನಿಶ್ಚಲವಾದ ಭಕ್ತಿಯು ಮನಶ್ಶಾಂತಿ ತಂದುಕೊಡುವುದು. ವಾತ್ಸಲ್ಯ ಹಾಗೂ ಪ್ರೀತಿಯಿಂದ ಕುಟುಂಬದವರ ಮನಸ್ಸನ್ನು ಗೆಲ್ಲುವಿರಿ. ನಟನಾ ವೃತ್ತಿಯವರಿಗೆ ಸಂಪತ್ತು ಹರಿದು ಬರಲಿದೆ.
ಕನ್ಯಾ
ಕೈಯಲ್ಲಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡಿ ಕೊಳ್ಳುವುದು ಸರಿಯಲ್ಲ. ಮಾತು ಅತಿರೇಕ ತಲುಪದಂತೆ ಎಚ್ಚರ ವಹಿಸುವಿರಿ. ಸದ್ಗುರು ದತ್ತಾತ್ರೇಯರ ಆರಾಧನೆಯಿಂದ ಜ್ಞಾನ ಸಂಪಾದಿಸಿಕೊಳ್ಳಿರಿ.
ತುಲಾ
ಮನೆಯ ಹತ್ತಿರದಲ್ಲಿ ಅತಿ ಜನಸಂಖ್ಯೆ ಸೇರುವ ಕಾರ್ಯಕ್ರಮವು ಶಾಂತ ಚಿತ್ತಕ್ಕೆ ಭಂಗ ತರುವುದು. ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಕಾಣಲಿದೆ. ಕಂಕಣ ಭಾಗ್ಯ ಕೂಡಿಬಂದಾಗ ವಿನಾಕಾರಣ ತಳ್ಳಿಹಾಕುವುದು ತರವಲ್ಲ.
ವೃಶ್ಚಿಕ
ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಹೆಚ್ಚಿನ ಪರಿಶ್ರಮ ಮತ್ತು ದೇವರ ಕೃಪೆ ಬೇಕಾಗುವುದು. ದೈನಂದಿನ ಆಗುಹೋಗಿನ ಬಗ್ಗೆ ಹೆಚ್ಚಿನ ಗಮನಹರಿಸಿ. ಪ್ರಾಪಂಚಿಕ ಬದುಕಿನ ಬಗ್ಗೆ ತಿಳಿದುಕೊಳ್ಳಿ.
ಧನು
ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯ ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡಬೇಕಾದ ಸಂದರ್ಭ ಬರುವುದು.
ಮಕರ
ಯಾವ ವಿಷಯದ ಬಗ್ಗೆಯೇ ಆದರೂ ಆಳವಾದ ಯೋಚನೆ ಬೇಡ. ಉದ್ಯಮದ ವಿಚಾರದಲ್ಲಿ ಹಿತಶತ್ರುಗಳ ಭಯ ಕಾಡುತ್ತದೆ. ಐಷಾರಾಮಿ ಜೀವನದ ಬಗ್ಗೆ ಹೇವರಿಕೆ ಹುಟ್ಟುವುದು.
ಕುಂಭ
ಬಹುವಾಗಿ ಬೇಕಾದ ವ್ಯಕ್ತಿಗಳ ಅನುಪಸ್ಥಿತಿಯಿಂದಾಗಿ ಮಾಡುವ ಎಲ್ಲಾ ಕೆಲಸಗಳಲ್ಲೂ ಸಣ್ಣಪುಟ್ಟ ಗಡಿಬಿಡಿಗಳುಂಟಾಗುವುದು. ಸ್ಥಿರವಾಗಿ ನಡೆಯುತ್ತಿದ್ದ ಉದ್ಯೋಗದಲ್ಲಿ ಅಭದ್ರತೆ ಕಾಡಬಹುದು.
ಮೀನ
ಗಣಪತಿಗೆ ಸಂಬಂಧಿಸಿದಂತೆ ಹರಕೆಯ ರೂಪದಲ್ಲಿರುವ ಅಥವಾ ಬಹಳ ದಿನಗಳಿಂದ ಅಂದುಕೊಂಡಿದ್ದ ದೇವರ ಕೆಲಸಗಳನ್ನು ಮುಗಿಸುವ ಪ್ರಯತ್ನಮಾಡಿ. ಅಧಿಕಾರದ ಜಂಜಾಟದಿಂದ ಪಾರಾಗುವ ಸಾಧ್ಯತೆ ಇದೆ.