ತುಲಾ
ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಪ್ರಯತ್ನವನ್ನು ವೇಗಗೊಳಿಸಿ. ನೀವು ಯಶಸ್ವಿಯಾಗುವಿರಿ. ನೀವು ವ್ಯಾಪಾರಸ್ಥರಾಗಿದ್ದರೆ, ಸ್ವಲ್ಪ ಜಾಗರೂಕರಾಗಿರಬೇಕು. ಯಾವುದೇ ರೀತಿಯ ವಹಿವಾಟುಗಳನ್ನು ಮಾಡುವ ವೊದಲು ಚೆನ್ನಾಗಿ ಯೋಚಿಸಬೇಕು. ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಣ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ನಿಮ್ಮ ಕೆಲವು ಖರ್ಚುಗಳು ಕುಟುಂಬಸ್ಥರ ಮೇಲೂ ಇರಬಹುದು. ಅವರು ಏನನ್ನಾದರೂ ಬೇಡಿಕೆಯಿಡುವ ಸಾಧ್ಯತೆ ಇದೆ. ಇದನ್ನು ಪೂರ್ಣಗೊಳಿಸುವಲ್ಲಿ ನೀವು ಆರ್ಥಿಕ ದುರ್ಬಲತೆಯನ್ನು ಅನುಭವಿಸಬಹುದು. ಅಂತಹ ಸಂದರ್ಭದಲ್ಲಿ ಅವರ ಆಸೆಯನ್ನು ಈಡೇರಿಸುವ ಮೊದಲು ನಿಮ್ಮ ಆರ್ಥಿಕತೆಯತ್ತ ಗಮನ ಹರಿಸಿ. ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ಸರ್ಕಾರದ ಕಡೆಯಿಂದ ನೀವು ಯಾವುದೇ ಮನೆ ಮತ್ತು ವಾಹನವನ್ನು ಪಡೆಯಬಹುದು. ಆರೋಗ್ಯ ಸ್ಡಿರವಾಗಿರುತ್ತದೆ ಅವಿವಾಹಿತರಿಗೆ ವಿವಾಹ ಯೋಗ.
ಶುಭ.13,19,27,
ಅಶುಭ. 05,12,29,