ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ಮೇ 1ರಿಂದ 31ರವರೆಗೆ
Published 2 ಮೇ 2023, 5:09 IST
ಪ್ರಜಾವಾಣಿ ವಿಶೇಷ
author
ಮೇಷ
ಮನೆಯ ದುರಸ್ತಿ, ನವೀಕರಣಕ್ಕೆ ಹಣ ಖರ್ಚು ಮಾಡುವಿರಿ. ದಾನ–ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ವ್ಯಾಪಾರ, ಉದ್ಯೋಗ ವಿಚಾರದಲ್ಲಿ ದೊಡ್ಡ ಅಧಿಕಾರಿಗಳು, ವ್ಯವಹಾರಸ್ಥರ ಜೊತೆ ಮಾತುಕತೆ ನಡೆಸುವಿರಿ. ಸೋದರ ಸೋದರಿಯರ ಜೊತೆ ಬಾಂಧವ್ಯ ಗಟ್ಟಿಯಾಗುತ್ತದೆ. ಇಡೀ ತಿಂಗಳು ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಶುಭ: 12, 21, 26, ಅಶುಭ 18, 20, 24
ವೃಷಭ
ತಿಂಗಳ ಶುರುವಿನಿಂದಲೇ ಉತ್ಸಾಹ ಇರಲಿದೆ. ನಿಮ್ಮ ಶ್ರಮದಿಂದ ಹೆಚ್ಚಿನ ಯಶಸ್ಸು ಪಡೆಯುವಿರಿ. ಇದರಿಂದ ಸಂತುಷ್ಟರಾಗುವಿರಿ. ನಿಮ್ಮ ಸಹೋದ್ಯೋಗಿಗಳ ಜೊತೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆಯಲು ಪ್ರಯತ್ನಿಸಿ. ಮುಖ್ಯ ಕೆಲಸಗಳ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಮುಖವಾದ ತೀರ್ಮಾನವೊಂದನ್ನು ಕೈಗೊಳ್ಳಲಿದ್ದೀರಿ. ತಿಂಗಳ ಕೊನೆಯಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಶುಭ: 11, 18, 29, ಅಶುಭ: 15, 23, 28
ಮಿಥುನ
ವ್ಯಾಪಾರ, ವ್ಯವಹಾರ, ಉದ್ಯಮದಲ್ಲಿ ಇರುವವರಿಗೆ ಅತ್ಯುತ್ತಮವಾದ ಮಾಸ. ಆರೋಗ್ಯ ಉತ್ತಮವಾಗಿರುತ್ತದೆ. ನೀವು ಅಂದುಕೊಂಡ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಸ್ಥರಿಗೆ ಮಾಡುವ ಕೆಲಸದಲ್ಲಿ ಗುಣಮಟ್ಟದ ವೇಗ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ, ಇದರಿಂದ ನಿಮ್ಮ ಉತ್ಸಾಹವೂ ಹೆಚ್ಚಲಿದೆ. ಶುಭ: 12, 16, 22, ಅಶುಭ: 21, 26, 29
ಕರ್ಕಾಟಕ
ಶೈಕ್ಷಣಿಕ ವಲಯದಲ್ಲಿ ಇರುವವರಿಗೆ, ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ. ಮುಂಬರುವ ದಿನಗಳಲ್ಲಿ ಹಲವು ಸಕಾರಾತ್ಮಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಯಾವುದಾದರೂ ಮೂಲದಿಂದ ತಿಂಗಳ ಅಂತ್ಯದ ವೇಳೆ ಒಳ್ಳೆಯ ಮೊತ್ತ ಕೈಸೇರಲಿದೆ. ಶುಭ: 21, 26, 29, ಅಶುಭ: 24, 28, 30
ಸಿಂಹ
ಕೆಲಸದ ಸ್ಥಳದಲ್ಲಿ ಪ್ರಶಸ್ತಿ, ಗೌರವ ಲಭಿಸುವ ಸಾಧ್ಯತೆ ಇದೆ. ಕಿರು ಪ್ರಯಾಣ ಮಾಡಬೇಕಾಗಿ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ. ವೃತ್ತಿಪರ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವಿರಿ. ವ್ಯಾಪಾರಸ್ಥರು, ವ್ಯವಹಾರಸ್ಥರಿಗೆ ವ್ಯಾವಹಾರಿಕ ಸಂಪರ್ಕ ದೊರೆಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆದಾಯದಲ್ಲಿ ಹೆಚ್ಚಳ, ಹಿರಿಯ ಸಹೋದ್ಯೋಗಿಗಳ ಬೆಂಬಲ. ಶುಭ: 10, 15, 22, ಅಶುಭ: 18, 20, 24
ಕನ್ಯಾ
ಕುಟುಂಬ ಸದಸ್ಯರು–ಬಂಧುಗಳೊಂದಿಗೆ ಉತ್ತಮವಾದ ಕ್ಷಣಗಳನ್ನು ಕಳೆಯಲಿದ್ದೀರಿ. ಸರಿಯಾದ ಸಮಯಕ್ಕೆ ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಮನ್ನಣೆ ಸಿಗಲಿದೆ. ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಮಾರ್ಗದರ್ಶನ ದೊರೆಯಲಿದೆ. ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ಆಪ್ತರ ಜೊತೆ ಸುಮಧುರ ಕ್ಷಣಗಳನ್ನು ಕಳೆಯುವ ಯೋಗ. ಶುಭ: 16, 18, 22, ಅಶುಭ: 17, 19, 20
ತುಲಾ
ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಮಹತ್ತರವಾದ ಪ್ರಗತಿ ಕಾಣಲಿದೆ. ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮಾಡಲಿದ್ದೀರಿ. ಸಿನಿಮಾ, ವೈದ್ಯಕೀಯ, ಕಲೆ ಈ ರೀತಿಯ ವೃತ್ತಿಯಲಿ ಇರುವವರಿಗೆ ಅತ್ಯುತ್ತಮವಾದ ಲಾಭವಿದೆ. ಶೈಕ್ಷಣಿಕ ಅರ್ಹತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಆರೋಗ್ಯವು ಚೆನ್ನಾಗಿರುತ್ತದೆ. ಶುಭ: 12, 18, 20, ಅಶುಭ: 14, 16, 22
ವೃಶ್ಚಿಕ
ಈ ತಿಂಗಳ ಅವಧಿಯಲ್ಲಿ ತಾಳ್ಮೆ ಮತ್ತು ಧೈರ್ಯ ಬಹಳ ಮುಖ್ಯವಾಗುತ್ತದೆ. ತಿಂಗಳ ಮಧ್ಯ ಭಾಗದಲ್ಲಿ ವ್ಯಾಪಾರ ವ್ಯವಹಾರಗಳ ವಿಸ್ತರಣೆಗೆ ಶ್ರಮ ಹಾಕುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಳ್ಳುತ್ತೀರಿ. ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ವೈಯಕ್ತಿಕ ಸಂಬಂಧಗಳು ಉತ್ತಮವಾಗಿರುತ್ತವೆ. ಶುಭ: 14, 16, 18, ಅಶುಭ: 12, 18, 22
ಧನು
ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಕಾಗದಪತ್ರಗಳನ್ನು ಪರಿಶೀಲನೆ ಮಾಡುವಿರಿ. ದೊಡ್ಡ ಪ್ರಮಾದಗಳನ್ನು ತಡೆಯಲು ಈ ಕ್ರಮ ಅತ್ಯಗತ್ಯ. ಭುಜ ನೋವು, ತಲೆ ನೋವು ಹಾಗೂ ಕಣ್ಣಿನ ಬೇನೆ ಕಾಡಲಿದೆ. ವೈಯಕ್ತಿಕ ಸಂಬಂಧದಲ್ಲಿ ಕೆಲವು ಕಹಿ ಬೆಳವಣಿಗೆಗಳು ಕಂಡುಬರಬಹುದು. ಸೋದರ- ಸೋದರಿಯರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಉನ್ನತ ಶಿಕ್ಷಣಕ್ಕೆ ಸುಸಮಯ. ಶುಭ: 14, 25, 28, ಅಶುಭ: 12, 16, 22
ಮಕರ
ಪ್ರತಿಷ್ಠಿತ ಸಂಸ್ಥೆಯೊಂದರ ಜೊತೆಗೆ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ವ್ಯಾಪಾರ ಉದ್ಯಮ ವಿಸ್ತರಣೆಗೆ ಮುಖ್ಯ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಮನೆಗೆ ಅಗತ್ಯ ವಸ್ತುಗಳ ಖರೀದಿ ಮಾಡುವಿರಿ. ವೈವಾಹಿಕ ಜೀವನ ಸಂತೋಷದಾಯಕವಾಗಿರುತ್ತದೆ. ತಿಂಗಳ ಮಧ್ಯಭಾಗದಲ್ಲಿ ಉದ್ಯೋಗ ನಿಮಿತ್ತವಾಗಿ ಪ್ರಯಾಣ ಮಾಡಬೇಕಾಗುತ್ತದೆ. ಶುಭ: 11, 16, 24 ಅಶುಭ: 12, 17, 19
ಕುಂಭ
ಹಣದ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಮಾರಾಟ ಕ್ಷೇತ್ರದಲ್ಲಿ ಇರುವವರಿಗೆ ಲಾಭ, ಅತ್ಯುತ್ತಮ ಅವಕಾಶಗಳಿವೆ. ನೀವು ಹಾಕಿಕೊಂಡ ಗುರಿಯನ್ನು ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿಯೇ ತಲುಪುವ ಸಾಧ್ಯತೆಗಳಿವೆ. ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ಅಹಂಕಾರದಿಂದ ಮನಸಿನ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಶುಭ: 14, 18, 21, ಅಶುಭ: 12, 19, 22
ಮೀನ
ಉನ್ನತ ಶಿಕ್ಷಣದಲ್ಲಿ ಯಶಸ್ಸು. ಉದ್ಯೋಗ ಸ್ಥಳದಲ್ಲಿ ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಉಸಿರಾಟದ ಸಮಸ್ಯೆ ಹಾಗೂ ಕೆಮ್ಮು ನೆಗಡಿ ಕಾಡಬಹುದು. ತಿಂಗಳ ಮಧ್ಯ ಭಾಗದಲ್ಲಿ ವೃತ್ತಿಪರ ಜೀವನದಲ್ಲಿ ಅತ್ಯುತ್ತಮವಾದ ಬೆಳವಣಿಗೆ ಕಾಣಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮನಸಿಗೆ ನೆಮ್ಮದಿ ಉಂಟಾಗಲಿದೆ. ಆದಾಯ ಅನುಕೂಲಕರವಾಗಿರಲಿದೆ. ಶುಭ: 14, 18, 24, ಅಶುಭ: 16, 25, 27