ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ - ಸಪ್ಟೆಂಬರ್ 2023: ಕೆಲವರನ್ನು ನಂಬಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ!
Published 1 ಸೆಪ್ಟೆಂಬರ್ 2023, 6:04 IST
ಅರುಣ ಪಿ.ಭಟ್ಟ
ಮೇಷ
ಕೆಲವರ ಮಾತನ್ನು ನಂಬಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ ಎಚ್ಚರವಿರಲಿ. ಸಹೋದರರ ವಿಶ್ವಾಸ ಪಡೆಯಿರಿ. ನಿಮ್ಮ ಬಹುಕಾಲದ ವ್ಯಾಜ್ಯಗಳಿಗೆ ಸೂಕ್ತ ಪರಿಹಾರ ದೊರಕಲಿದೆ. ನಿಮಗೆ ವಿಶೇಷವೆನಿಸುವ ವಿಚಾರಗಳಿಗೆ ಆಮಂತ್ರಣ ಹೆಚ್ಚಾಗಲಿವೆ. ಸಂಗಾತಿ ಜತೆಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ದಾಖಲೆ ಪತ್ರಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ವೃಷಭ
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಕಂಡುಬರಲಿವೆ. ಬ್ಯಾಂಕ್‌ ವ್ಯವಹಾರಗಳು ಯೋಜನೆಯಂತೆ ನಡೆಯಲಿವೆ. ಕಷ್ಟದ ಕಾರ್ಯಗಳನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸಲಿದ್ದೀರಿ. ಕುಟುಂಬದಲ್ಲಿ ಶುಭಸುದ್ದಿ ಬರಲಿದೆ. ಅವಿವಾಹಿತರಿಗೆ ವಿವಾಹ ಯೋಗ. ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವಿರಿ. ವೈಯಕ್ತಿಕ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಭಿನ್ನಾಭಿಪ್ರಾಯ ತಲೆದೋರಲಿದೆ. ಶುಭ: 14,19,26
ಮಿಥುನ
ಆತ್ಮೀಯ ವ್ಯಕ್ತಿಗಳೊಡನೆ ವಿವಾದಗಳು ಹೆಚ್ಚಾಗಬಹುದು. ಭೂಮಿಗೆ ಸಂಬಂಧಪಟ್ಟಂತಹ ವ್ಯಾಜ್ಯಗಳಿಂದ ಕಿರಿಕಿರಿ. ಅನಗತ್ಯವಾಗಿ ಮಾತಿನಲ್ಲಿ ಏನಾದರೂ ಹೇಳಿ ಸಿಲುಕಬೇಡಿ. ಕೆಲಸದ ವಿಷಯದಲ್ಲಿ ಸಮಸ್ಯೆಗಳು ಎದುರಾದಾಗ ಆದಷ್ಟು ಆ ಕ್ಷಣದಲ್ಲೇ ಬಗೆಹರಿಸಲು ಪ್ರಯತ್ನಿಸಿ. ದೈಹಿಕ ಮತ್ತು ಮಾನಸಿಕ ಚೈತನ್ಯ ಕಾಪಾಡಿಕೊಳ್ಳಿ. 
ಕರ್ಕಾಟಕ
ಯೋಜಿತ ಕಾರ್ಯಗಳಲ್ಲಿ ವ್ಯವಸ್ಥಿತವಾದ ಕಾರ್ಯಶೈಲಿ ಕಂಡುಬರುತ್ತದೆ. ಧನಾಗಮನ ಸರಾಗವಾಗಿ ನಡೆಯಲಿದೆ. ಲೇವಾದೇವಿ ವ್ಯವಹಾರಗಳಿಂದ ದೂರವಿರುವುದು ಲೇಸು. ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಕುಟುಂಬದ ಜೊತೆಗೆ ಹೆಚ್ಚಿನ ಕಾಲ ಕಳೆಯಲಿದ್ದೀರಿ. ಮುಂಬರುವ ದಿನಗಳಲ್ಲಿ ಸಕಾರಾತ್ಮಕ ಅವಕಾಶಗಳು ಬರಲಿವೆ.  
ಸಿಂಹ
ಜನಪ್ರಿಯತೆ ಹೆಚ್ಚಾದಂತೆ ವಿರೋಧಿಗಳು ಹೆಚ್ಚಾಗಲಿದ್ದಾರೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೂ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಆದಷ್ಟು ದೂರವಿಡುವುದು ಒಳ್ಳೆಯದು. ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ಹಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. 
ಕನ್ಯಾ
ಹೊಸ ಆದಾಯ ಮಾರ್ಗ ಕಂಡುಬರಲಿದೆ. ನವೀನವಾಗಿ ಪ್ರಾರಂಭ ಮಾಡಿರುವ ಉದ್ಯೋಗ ಭರವಸೆಯ ಮಹಾಪೂರವನ್ನೇ ತರಲಿದೆ. ಅನಪೇಕ್ಷಿತ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ನಿಮ್ಮ ವರ್ಚಸ್ಸು ಹಾಳು ಮಾಡಲು ವಿರೋಧಿಗಳು ಪ್ರಯತ್ನ ಪಡುತ್ತಾರೆ. ಎಚ್ಚರಿಕೆಯಿಂದ ಇರಿ. ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲ. ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಹುದ್ದೆ ಹಾಗೂ ಘನತೆ ಹೆಚ್ಚಾಗಲಿದೆ. 
ತುಲಾ
ವ್ಯವಹಾರದ ನಿಮಿತ್ತ ತಿರುಗಾಟ ಹೆಚ್ಚಾಗಬಹುದು. ಸಾಲದ ಬಾಧೆಯಿಂದ ಸಂಕಷ್ಟ. ಕಟ್ಟಡ ಕಾಮಗಾರಿಗಳಲ್ಲಿ ಹಣಕಾಸಿನ ಕುಂದುಕೊರತೆ ಕಾಡಲಿದೆ. ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಏರಿಳಿತಗಳಾಗುತ್ತವೆ. ನೀವು ಹಾಕಿದ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗಲು ಶುರುವಾಗುತ್ತದೆ. ತಿಂಗಳ ಅಂತ್ಯಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಮಿಶ್ರ ಫಲಿತಾಂಶವನ್ನು ಕಾಣಲಿದ್ದೀರಿ.
ವೃಶ್ಚಿಕ
ಆರ್ಥಿಕವಾಗಿ ಪ್ರಬಲರಾಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ನಿಮಗೆ ವಹಿಸಿದ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಒತ್ತಡ ಹೆಚ್ಚಾಗುತ್ತದೆ. ನಿಮ್ಮ ಖರ್ಚುನ್ನು ನಿಯಂತ್ರಿಸಿ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಹಲವು ಅವಕಾಶಗಳು ಏಕಕಾಲಕ್ಕೆ ದೊರೆಯುತ್ತವೆ. ಉದ್ಯೋಗಸ್ಥರು ಹಾಗೂ ವ್ಯಾಪಾರಸ್ಥರ ಬೆಳವಣಿಗೆಗೆ ಅವಕಾಶ ದೊರೆಯುತ್ತದೆ.
ಧನು
ಮಾನಸಿಕ ಕ್ಲೇಶಗಳು ಕಾಡಬಹುದು. ಕುಟುಂಬದಲ್ಲಿ ಅಶಾಂತಿಯ ವಾತಾವರಣ. ಕೆಲವು ವ್ಯಕ್ತಿಗಳಿಂದ ನಿಮ್ಮ ಕಾರ್ಯಗಳಲ್ಲಿ ಹಸ್ತಕ್ಷೇಪ ಕಂಡುಬರುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ತಿಂಗಳ ಮಧ್ಯ ಭಾಗದಲ್ಲಿ ನಿಮಗೆ ಅನುಕೂಲಕರವಾದ ಕೆಲ ಬೆಳವಣಿಗೆಗಳು ಆಗಲಿವೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ನಿಮ್ಮ ಹಳೇ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಇದೆ.‌
ಮಕರ
ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಸಹವರ್ತಿಗಳು ನಿಮ್ಮ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ. ಸಾಹಿತ್ಯ ಕ್ಷೇತ್ರಗಳಲ್ಲಿ ಉತ್ತಮ ಮನ್ನಣೆ ಗಳಿಸಲಿದ್ದೀರಿ. ಅದೃಷ್ಟದ ಭಾಗ್ಯ ಒದಗಿಬರಲಿದೆ. ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಅವಕಾಶಗಳಿವೆ. ನೀವು ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯಲ್ಲಿ ಜವಾಬ್ದಾರಿ ಹಾಗೂ ಹಕ್ಕು ವಿಸ್ತರಣೆಗೆ ಅವಕಾಶ ಇದೆ. ನಿಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಲು ಶ್ರಮ ಹಾಕಿ. ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ವರ್ಚಸ್ಸು ಉಳಿಸಿಕೊಳ್ಳುತ್ತೀರಿ.
ಕುಂಭ
ಅಪರಿಚಿತ ವ್ಯಕ್ತಿಗಳಿಂದ ನಷ್ಟ. ನಂಬಿಕೆದ್ರೋಹದಿಂದ ಎಚ್ಚರವಿರಿ. ನಿಮ್ಮೆಲ್ಲಾ ಕೆಲಸಗಳಿಗೆ ತಾಳ್ಮೆ ಬೇಕು. ಹಣಕಾಸಿನ ವಿಷಯದಲ್ಲಿ ಉತ್ತಮ ಬೆಳವಣಿಗೆ. ಈ ಮಧ್ಯೆ ಕುಟುಂಬದವರ ಜತೆಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆದರೆ ತಾಯಿಯ ಆರೋಗ್ಯ ಸಮಸ್ಯೆಯಾಗಿ ಬೇಸರಕ್ಕೆ ಕಾರಣವಾಗಬಹುದು. ತಿಂಗಳ ಅಂತ್ಯದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳು ನಿವಾರಣೆ ಯಾಗಲಿವೆ.
ಮೀನ
ಸ್ನೇಹಿತರ ಜೊತೆಗೆ ಉತ್ತಮ ಬಾಂಧವ್ಯ. ಆರ್ಥಿಕ ಸ್ಥಿತಿ ಸಾಮಾನ್ಯ. ನೀವು ಕಾರ್ಯ ನಿರ್ವಹಿಸುವ ಸಂಸ್ಥೆಯ ದೀರ್ಘಾವಧಿ ಜವಾಬ್ದಾರಿಯೊಂದನ್ನು ನೀವೇ ಪೂರ್ಣಗೊಳಿಸಲು ಒಪ್ಪಿಕೊಳ್ಳುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಕೌಟುಂಬಿಕ ವಿಚಾರವಾಗಿ ಪ್ರಯಾಣ ಮಾಡಬೇಕಾಗುತ್ತದೆ. ಸುತ್ತಾಟದಿಂದಾಗಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ. ತಾಂತ್ರಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಸಮಯ.