ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆಗಸ್ಟ್ 24 ಗುರುವಾರ 2023– ಈ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು
Published 23 ಆಗಸ್ಟ್ 2023, 18:59 IST
ಪ್ರಜಾವಾಣಿ ವಿಶೇಷ
author
ಮೇಷ
ವೈದ್ಯಕೀಯ ವಲಯದ ಉನ್ನತ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕಕ್ಕೆ ಕಾರಣವಾಗಬೇಕಿಲ್ಲ. ವ್ಯವಹಾರಗಳಲ್ಲಿ ಹಿಡಿತವನ್ನು ಸಾಧಿಸುವಿರಿ.
ವೃಷಭ
ಪ್ರತಿ ವರ್ಷ ಮಾಡಿಕೊಂಡು ಬಂದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ. ಚಿತ್ರಕಲೆ ಮತ್ತು ಸಾಹಿತ್ಯಕಾರರಿಗೆ ಶುಭವಾರ್ತೆ ಬರಲಿದೆ. ಈ ದಿನದ ಪರಿಶ್ರಮವು ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ.
ಮಿಥುನ
ಮಸಾಲೆ ಪದಾರ್ಥ ಅಥವಾ ಖಾದ್ಯಗಳ ಮಾರಾಟಗಾರರಿಗೆ ಅಧಿಕ ಮಟ್ಟದ ಬೇಡಿಕೆ ಉಂಟಾಗುವುದು. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುವುದು. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ.
ಕರ್ಕಾಟಕ
ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸುವುದು ಉತ್ತಮ . ಈ ದಿನವನ್ನು ಸಂತೋಷವಾಗಿ ಕಳೆಯುವ ಹಾಗೆ ಆಗುವುದು. ಸಮೀಪ ವರ್ತಿಗಳ ಸಹಾಯದಿಂದ ಬಾಕಿ ಇದ್ದ ಕೆಲಸ ಪೂರ್ತಿಗೊಳಿಸುವಿರಿ.
ಸಿಂಹ
ಗೃಹ ನಿರ್ಮಾಣ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಮಾಧಾನ ತರಲಿದೆ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆಯಾಗುತ್ತದೆ.
ಕನ್ಯಾ
ಕೌಟುಂಬಿಕವಾಗಿ ಪ್ರಮುಖ ವಿಷಯವೊಂದು ತಿಳಿದು ಬರಲಿದೆ. ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವಿರಿ. ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು.
ತುಲಾ
ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಕಾರ್ಯಗಳು ಸರಾಗವಾಗಿ ನಡೆಯುವುದು. ನೃತ್ಯಾಭ್ಯಾಸ ಮುಂದುವರಿಸುವಂತೆ ಅಧ್ಯಾಪಕರಿಂದ ಒತ್ತಾಯ ಹೆಚ್ಚುವುದು. ಕಾರ್ಖಾನೆ ಕೆಲಸಗಾರರಿಗೆ ಹೆಚ್ಚಿನ ಕೆಲಸ ಇರುವುದು.
ವೃಶ್ಚಿಕ
ವೃತ್ತಿಯಲ್ಲಿ ಅವಸರದ ನಿರ್ಧಾರದಿಂದ ಕೆಲಸಗಳನ್ನು ಒಪ್ಪಿಕೊಳ್ಳಬೇಡಿ. ಉನ್ನತ ವರ್ಗದ ಅಧಿಕಾರಿಯೊಬ್ಬರಿಂದ ನಿಮ್ಮ ವರ್ಗಾವಣೆ ಕೆಲಸ ಸಲೀಸಾಗಿ ನಡೆಯುವುದು. ಸಹವರ್ತಿಗಳೊಡನೆ ಸಂಯಮದಿಂದ ವರ್ತಿಸಿ.
ಧನು
ಸೇವಾ ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಆಫೀಸಿನಲ್ಲಿಂದು ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ಕೆಲಸಗಳೆಲ್ಲವೂ ನಿರಾತಂಕವಾಗಿ ಸಾಗಲಿದೆ.
ಮಕರ
ಷೇರು ಪೇಟೆಯಿಂದ ಲಾಭ ಗಳಿಸುವಿರಿ. ಹೆಚ್ಚಿನ ನಿರಾಶೆ ತರದು. ಆಪ್ತರೊಬ್ಬರ ನೆರವು ದೊರೆತು ಮಗನ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ. ಅಧಿಕ ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ.
ಕುಂಭ
ಉದ್ಯೋಗ ಕ್ಷೇತ್ರದಲ್ಲಿ ಬಂದಿರುವ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಲಿದೆ. ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ವಿದ್ಯಾರ್ಜನೆ ಮಾಡುವುದರ ಬಗ್ಗೆ ಗಮನಹರಿಸಿ. ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭವಿರುವುದು.
ಮೀನ
ಈ ಸಮಯ ಬಿಟ್ಟು ಸ್ವಲ್ಪ ಕಾಲದ ನಂತರ ಮಾಡುತ್ತೇನೆ ಎಂದು ನೀವು ಅಂದುಕೊಳ್ಳುವ ವಿಷಯಗಳು ಬಿಟ್ಟ ಹಂತದಲ್ಲೇ ನಿಂತು ಹೋಗುವ ಸಾಧ್ಯತೆ ಇರುವುದರಿಂದ ಅದನ್ನು ಈ ಕೂಡಲೇ ಪೂರೈಸುವ ಯೋಚನೆ ಮಾಡಿ.