ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 18 ಸೋಮವಾರ 2023– ಈ ರಾಶಿಯವರಿಗೆ ತೃಪ್ತಿಕರ ಲಾಭ
Published 17 ಸೆಪ್ಟೆಂಬರ್ 2023, 18:56 IST
ಪ್ರಜಾವಾಣಿ ವಿಶೇಷ
author
ಮೇಷ
ನಿಮ್ಮ ಯೋಜನೆಗಳಿಗೆ ಸ್ತ್ರೀ ವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ. ಒಂದು ವಿಚಾರದ ಬಗೆಗಿನ ಯೋಚನೆಯಿಂದಾಗಿ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು. ರಾಜಕೀಯ ರಂಗದಲ್ಲಿ ಜನಪ್ರಿಯತೆ ಬರುವುದು.
ವೃಷಭ
ಗ್ರಹಗಳ ಚಲನೆಯು ತಿರುಗಾಟವನ್ನು ಮಾಡಿಸುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸುವುದು ಅನಿವಾರ್ಯ. ಸಹೋದರ ಸಮಾನ, ತಂದೆ-ತಾಯಿಯಿಂದ ಹಿತವಚನ ಕೇಳ ಬೇಕಾಗುವುದು.
ಮಿಥುನ
ನಿಮ್ಮ ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿದೆ. ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಿ ಹೆಚ್ಚಿನ ಅಭಿವೃದ್ಧಿ ಹೊಂದಬಹುದು. ರಾಜಕೀಯ ನಡೆಯಲ್ಲಿ ಉತ್ತಮ ಭವಿಷ್ಯವಿದೆ.
ಕರ್ಕಾಟಕ
ಕೆಲಸ ಹುಡುಕುತ್ತಿರುವವರಿಗೆ ಈ ದಿನ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚಾಗಿರುವುದು. ದೇಹದಲ್ಲಿ ಉಷ್ಣಾಧಿಕ್ಯವಾಗಿ ಆರೋಗ್ಯದಲ್ಲಿ ಏರುಪೇರಾಗಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ ಸಿಗಲಿದೆ.
ಸಿಂಹ
ಆರ್ಥಿಕ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ಅಪೇಕ್ಷಿಸಬಹುದು. ಗುಡಿ ಕೈಗಾರಿಕೆ ವೃತ್ತಿಯವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಚಿನ್ನ ಖರೀದಿ ಯೋಗ ಇರುವುದು.
ಕನ್ಯಾ
ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನವು ಫಲಕಾರಿ ಆಗಲಿದೆ, ಆದರೆ ಉದ್ಯೋಗಕ್ಕಾಗಿ ಖಾಸಗೀ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ಅವಿವಾಹಿತರಿಗೆ ಶುಭ ಲಭಿಸುವುದು.
ತುಲಾ
ಮೇಲಧಿಕಾರಿಗಳೊಂದಿಗೆ ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ಅಡಿಕೆ ಮಾರಾಟ ಪ್ರತಿನಿಧಿಗಳಿಗೆ ಹೆಚ್ಚಿನ ಕಮಿಷನ್ ಸಿಗಲಿದೆ. ರೈತಾಪಿ ವರ್ಗದವರಿಗೆ ಶುಭ.
ವೃಶ್ಚಿಕ
ಹಿರಿಯರ ಸಲಹೆಗಳನ್ನು ಪಡೆದುಕೊಂಡು ಕಾರ್ಯಪ್ರವೃತ್ತರಾಗುವುದು ಉತ್ತಮವಾದದ್ದು. ಕೌಟುಂಬಿಕವಾಗಿ ಸರ್ವ ಸದಸ್ಯರ ಜೊತೆಯಲ್ಲಿ ಪೂಜಾ ಸಮಾರಂಭದಲ್ಲಿ ಸಂಭ್ರಮಿಸುವ ಸಮಯವಿದು.
ಧನು
ಕೃಷಿಕರು, ವ್ಯಾಪಾರಸ್ಥರು ದಲ್ಲಾಳಿಗಳಿಂದ ಮೋಸ ಹೋಗಬಹುದು, ಎಚ್ಚರವಹಿಸಿ. ಚರ್ಮ ವ್ಯಾಧಿಯಂತಹ ಅನಾರೋಗ್ಯವು ಎದುರಾಗಬಹುದು. ಹಾಡುಗಾರರಿಗೆ ನಿಮ್ಮ ಸಾಧನೆಯಿಂದ ಜನಪ್ರಿಯತೆ ಹೆಚ್ಚುತ್ತದೆ.
ಮಕರ
ಹಾಲು, ಮೊಸರು, ಬೆಣ್ಣೆಯ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆಯಿಂದ ಲಾಭ ಆಗುವುದು. ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಸಂತಸಕರ ಬೆಳವಣಿಗೆ ಕಂಡು ಬರಲಿವೆ. ಕೀರ್ತಿ ನಿಮ್ಮನ್ನು ಅರಸಿ ಬರುವುದು.
ಕುಂಭ
ತಿಳಿಯಾದ ಮನಸ್ಸಿನಿಂದ ಅಲೋಚಿಸಿ ಅಥವಾ ಅನುಭವಸ್ಥರ ಅಭಿಪ್ರಾಯ ತಿಳಿದು ಸೂಕ್ತ ನಿರ್ಧಾರ ಕೈಗೊಳ್ಳಿರಿ. ಪಾಕ ಪ್ರವೀಣರಿಗೆ ಬಿಗುವಿನ ವೇಳಾಪಟ್ಟಿಯೊಂದಿಗೆ ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯುವ ಕಾಲ.
ಮೀನ
ಕಾರ್ಯಕ್ಷೇತ್ರದಲ್ಲಿ ನೀತಿ-ನಿಯಮಗಳಿಗೆ ಬದ್ಧರಾಗಿರುವ ತೀರ್ಮಾನ ಮಾಡುವುದು ಒಳ್ಳೆಯದು. ಉನ್ನತ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಗೆ ಕುಟುಂಬಸ್ಥರ ಜೊತೆ ಸಮಯ ಕಳೆಯುವುರಿಂದ ವಂಚಿತರಾಗುವ ಸಾಧ್ಯತೆ.
ADVERTISEMENT
ADVERTISEMENT