ದಿನ ಭವಿಷ್ಯ: ಅಕ್ಟೋಬರ್ 20 ಶುಕ್ರವಾರ 2023- ಈ ರಾಶಿಯವರಿಗೆ ನೆಮ್ಮದಿಯ ಸುದ್ದಿ
Published 19 ಅಕ್ಟೋಬರ್ 2023, 18:31 IST
ಪ್ರಜಾವಾಣಿ ವಿಶೇಷ
ಮೇಷ
ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಾರಂಭ ಮಾಡಿದಲ್ಲಿ ನಿಧಾನವಾಗಿ ಅಭಿವೃದ್ಧಿಯ ಹಾದಿ ಹಿಡಿಯುವಿರಿ.
ವೃಷಭ
ಆಪ್ತರು ಎಂದು ನೀವು ತಿಳಿದ ವ್ಯಕ್ತಿಗಳು ನಿಮ್ಮ ಆಪತ್ತಿನ ಕಾಲಕ್ಕೆ ಸಹಾಯವನ್ನು ಮಾಡದೇ ಇರಬಹುದು. ನಿಮ್ಮ ಊರಿನ ಪ್ರಮುಖರಿಂದ ನಿಮ್ಮ ಅಪೇಕ್ಷೆ ಇಲ್ಲದಿದ್ದರೂ ಕೂಡ ನಿಮಗೆ ಬೇಕಾದ ಕೆಲಸಗಳು ನಡೆಯಬಹುದು.
ಮಿಥುನ
ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳು ಅರಸಿ ಬರಲಿದೆ. ಸಮಸ್ಯೆಗಳನ್ನು ಯಾವುದೇ ಗಲಾಟೆಗಳಿಲ್ಲದೆ ನಾಜೂಕಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ನೆಡೆಸಿ. ಕ್ರೀಡಾ ಚಟುವಟಿಕೆಗಳು ಹೆಚ್ಚುವುದು.
ಕರ್ಕಾಟಕ
ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ ಕಳೆದುಕೊಳ್ಳಬೇಡಿ, ಸಮಾಧಾನ ಇರಲಿ. ಅನೇಕ ದಿನಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಉಪಶಮನವಾಗಲಿದೆ. ಮನಸ್ಸಿಗೆ ನೆಮ್ಮದಿ ನೀಡುವ ಸುದ್ದಿ ಕೇಳುವಿರಿ.
ಸಿಂಹ
ಮಗಳ ಜೀವನದ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಮಗನ ಉದ್ಯೋಗದಲ್ಲಿನ ಪ್ರಗತಿಯಿಂದ ಸಂತೋಷವಾಗುತ್ತದೆ. ಧಾರ್ಮಿಕ ಶ್ರದ್ಧೆ ಬೆಳೆಸಿಕೊಳ್ಳುವ ಪ್ರಯತ್ನ ಮಾಡಿರಿ.
ಕನ್ಯಾ
ನಿಮ್ಮ ಅಧಿಕ ಶ್ರಮದಿಂದ ನಿಮ್ಮ ಕನಸಿನ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗುವುದು. ಬುದ್ಧಿಕೌಶಲ್ಯದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿ. ಬಟ್ಟೆ ಉದ್ಯಮದವರಿಗೆ ಇಂದು ಲಾಭ ಬರುವುದು.
ತುಲಾ
ನೆರೆಯವರ ಸಹಾಯ ಸಹಕಾರ ಕೇಳುವ ಸಂದರ್ಭ ಬರಲಿದೆ. ಆದರೇ, ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ.
ವೃಶ್ಚಿಕ
ಸಾರ್ವಜನಿಕರಲ್ಲಿ ಹೆಚ್ಚಾಗಿ ಬೆರೆಯುವ ಸಂದರ್ಭ ಬರುವುದರಿಂದ ಆರೋಗ್ಯದಲ್ಲಿ ವಿಶೇಷ ಗಮನ ವಹಿಸಿ. ಮನೆಯಲ್ಲಿ ಆನಂದದ ವಾತಾವರಣ ಉದಯವಾಗುತ್ತದೆ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
ಧನು
ನಿಧಾನ ಗತಿಯಲ್ಲಿ ನಡೆಯುತ್ತಿದ್ದ ಕಾರ್ಯಗಳು ಮಹಾಗಣಪತಿಯ ಆಶೀರ್ವಾದದಿಂದ ಶೀಘ್ರಗತಿಯನ್ನು ಹೊಂದಿ ಪ್ರಗತಿಯನ್ನು ಹೊಂದುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವುದು.
ಮಕರ
ಕೋರ್ಟು ಕಛೇರಿ ವ್ಯವಹಾರದಲ್ಲಿ ಜಯ ಪಡೆಯುವ ಬಗ್ಗೆ ಅಧಿಕಪ್ರಯತ್ನವಿರಲಿ. ಹಳೆಯ ವಾಹನ ಕೊಡು ಕೊಳ್ಳುವಿಕೆಯಲ್ಲಿ ಲೆಕ್ಕ ಪತ್ರಗಳಲ್ಲಿ ಗಮನವಿರಲಿ. ಮದುವೆಯ ಸಲುವಾಗಿ ವಸ್ತ್ರಾಭರಣದ ಖರೀದಿಸಬಹುದು.
ಕುಂಭ
ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಕುಟುಂಬದಲ್ಲಿ ಚರ್ಚೆ ನೆಡೆಯುವುದು ಹಾಗೂ ಅದಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸುವಿರಿ. ಉದ್ಯೋಗ ವ್ಯವಹಾರಗಳಲ್ಲಿ ತೊಂದರೆಗಳಿರುವುದಿಲ್ಲ.
ಮೀನ
ಆಡಳಿತಾರೂಢ ಜನರ ಸಂಪರ್ಕದಿಂದ ಕೆಲಸಗಳನ್ನು ಸಾಧಿಸಿಕೊಳ್ಳಲು ಕಷ್ಟವೆನಿಸುವುದು. ನಿಮ್ಮ ದುಡುಕು ನಿರ್ಧಾರಗಳಿಂದ ಮುಖಭಂಗವಾಗುವ ಲಕ್ಷಣಗಳಿವೆ. ಷೇರು ವ್ಯವಹಾರ, ಸಿನೆಮಾ ತಯಾರಿಕೆಯು ಲಾಭ ತರಲಿದೆ.