ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿಸೆಂಬರ್ 13 ಬುಧವಾರ 2023- ಅನಿರೀಕ್ಷಿತ ಪ್ರಯಾಣದ ಸಂಭವ
Published 12 ಡಿಸೆಂಬರ್ 2023, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ರಕ್ತದೊತ್ತಡ ಇರುವವರು ಆಹಾರ ಪದ್ಧತಿಯಿಂದಲೇ ಅದನ್ನು ನಿಯಂತ್ರಿಸಿಕೊಳ್ಳಲು ಯತ್ನಿಸಿ. ಇತರರು ಅವಿರೋಧ ಆಯ್ಕೆಗೆ ಒಲವು ತೋರುವುದರಿಂದ ನೀವು ಸುಲಭವಾಗಿ ಸ್ಥಾನಗಳಿಸುವಲ್ಲಿ ಯಶಸ್ವಿಯಾಗುವಿರಿ
ವೃಷಭ
ಮಗಳ ಮದುವೆ ವಿಚಾರದಲ್ಲಿ ಇಂದು ನೀವು ಇಡುವ ಹೆಜ್ಜೆ ಬಹಳ ಪ್ರಮುಖವಾದದ್ದು. ಸಾಂಸಾರಿಕವಾಗಿ ನಿಮ್ಮ ನಿರ್ಣಯಗಳನ್ನು ಎಲ್ಲರೂ ಬೆಂಬಲಿಸಲಿದ್ದಾರೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಮಿಥುನ
ಪಾಲುದಾರಿಕೆಯಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗಲಿದೆ. ಆದರೆ, ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಕೆಲಸದಲ್ಲಿ ವಿಘ್ನಗಳು ಎದುರಾಗಲಿದೆ. ಧಾರ್ಮಿಕತೆ ಅನುಸರಿಸುವುದರಿಂದ ಶುಭವಾಗಲಿದೆ.
ಕರ್ಕಾಟಕ
ವ್ಯವಹಾರದ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳುವಿರಿ. ಮಗಳ ವಿದೇಶ ಪ್ರಯಾಣದ ತಯಾರಿಯಲ್ಲಿ ನೀವು ಭಾಗಿಯಾಗುವಿರಿ. ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅನಿವಾರ್ಯವಾಗಲಿದೆ.
ಸಿಂಹ
ಆಹಾರದ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತರಾಗಿ ಸಿಕ್ಕಿಕೊಳ್ಳಬೇಡಿ. ಗುತ್ತಿಗೆ ವೃತ್ತಿಯವರಿಗೆ ತಮ್ಮ ಮನೋಬಯಕೆ ಈಡೇರಲಿದೆ. ಅನಾರೋಗ್ಯದಿಂದ ಇರುವ ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಕನ್ಯಾ
ನಿಮ್ಮ ದೊಡ್ಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲು ಈ ದಿನ ಸೂಕ್ತ. ತಂದೆ-ತಾಯಿಯ ಆರೈಕೆಯಿಂದ ಪುಣ್ಯ ಸಂಪಾದನೆಯಾಗಲಿದೆ. ಹಳದಿ ವಸ್ತ್ರವು ಇಂದು ಶುಭ ತರಲಿದೆ.
ತುಲಾ
ವೈವಾಹಿಕ ವಿಚಾರದಲ್ಲಿ ನಿಮ್ಮ ಮನದ ಅಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಹೈನುಗಾರಿಕೆಯಲ್ಲಿ ಆದಾಯ ವೃದ್ಧಿಯಾಗಲಿದೆ. ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು.
ವೃಶ್ಚಿಕ
ನಿಮ್ಮ ಅನ್ವೇಷಣೆಯ ಸ್ವಭಾವವು ನಿಮ್ಮ ವೃತ್ತಿ ಬದುಕಿನಲ್ಲಿ ಹೊಸ ತಿರುವು ತರಲಿದೆ. ಮಕ್ಕಳಿಗೆ ವ್ಯವಹಾರ ಒಪ್ಪಿಸಿ ನೆಮ್ಮದಿಯಿಂದ ವಿಶ್ರಾಂತಿ ಜೀವನದಲ್ಲಿ ಇರಲು ಇಚ್ಛಿಸುವಿರಿ. ಶೀತ ಬಾಧೆಯ ಸಾಧ್ಯತೆ ಇದೆ.
ಧನು
ಹಿಂದೆ ನಡೆದ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸುವುದು ಉತ್ತಮ. ಈ ದಿನವನ್ನು ಪರೋಪಕಾರಕ್ಕಾಗಿ ಮೀಸಲಿಡಬೇಕಾಗಲಿದೆ. ವೃತ್ತಿಯ ಪರವಾಗಿ ಶತ್ರುಗಳ ವಿರುದ್ಧ ಹೋರಾಟ ನಡೆಸಬೇಕಾಗಲಿದೆ.
ಮಕರ
ನಿಮ್ಮ ಭಾವನೆಗಳ ಜೊತೆಗೆ ನಿಮ್ಮ ಅಭಿಪ್ರಾಯವು ಬದಲಾಗುವ ಕಾಲವಿದು. ಹಾಗಾಗಿ ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಜನರೊಂದಿಗೆ ಬೆರೆತು ಬಾಳುವ ಅಭ್ಯಾಸ ಮಾಡಿಕೊಳ್ಳಿರಿ.
ಕುಂಭ
ಬಹುದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿಸುವ ಮನಸ್ಸಾಗಲಿದೆ. ಇದರಿಂದ ಲಾಭವೇ ಆಗಲಿದೆ. ವೈವಾಹಿಕ ಮಾತುಕತೆಗಳು ಪ್ರಗತಿ ಪಥದತ್ತ ಸಾಗುವುದಕ್ಕೆ ರಾಮನನ್ನು ಪ್ರಾರ್ಥಿಸಿ.
ಮೀನ
ತಂದೆ ತಾಯಿಯ ಆರೋಗ್ಯವು ಉತ್ತಮವಾಗಿ ಸುಧಾರಿಸುವುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸುದಿನ. ಅನಿರೀಕ್ಷಿತ ಪ್ರಯಾಣದ ಸಂಭವವಿದೆ.