ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 21 ಬುಧವಾರ 2024– ಇಂದು ಅನುಕೂಲವಾಗುವ ಮಾರ್ಗ ಗೋಚರ
Published 20 ಫೆಬ್ರುವರಿ 2024, 18:35 IST
ಪ್ರಜಾವಾಣಿ ವಿಶೇಷ
author
ಮೇಷ
ವಾಹನ ವಹಿವಾಟುಗಳಲ್ಲಿ ಅನಿರೀಕ್ಷಿತ ನಷ್ಟವಾದರೂ ಅಸಲಿಗೆ ಯಾವ ರೀತಿಯ ತೊಂದರೆ ಉಂಟಾಗುವುದಿಲ್ಲ. ಮಕ್ಕಳ ಜೀವನದ ಕೆಲವು ವಿಚಾರದ ನಿರ್ಧಾರ ಮಾಡುವ ದಿನ ಇದಾಗಲಿದೆ. ಹೊರಗುತ್ತಿಗೆ ಕೆಲಸ ಲಾಭ ತರಲಿದೆ.
ವೃಷಭ
ಸಮಯೋಚಿತವಾದ ಬುದ್ಧಿಶಕ್ತಿಯು ಸಂಕಟಗಳನ್ನು ದೂರ ಮಾಡಲಿದೆ. ಸೇವಾ ಮನೋಭಾವವಿರುವ ವ್ಯಕ್ತಿಗಳು ಹೆಚ್ಚು ಪ್ರಶಂಸೆ ಪಡೆಯುವರು. ನೀಲಿ ಬಣ್ಣ ಶುಭದಾಯಕ.
ಮಿಥುನ
ಯಾವುದೇ ರೀತಿಯ ಬದಲಾವಣೆ ಮಾಡಲು ಈ ದಿನ ಸೂಕ್ತ ಕಾಲವಾಗಿರುತ್ತದೆ. ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾಗಿಯೇ ಇರುವುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನವಿರಲಿ.
ಕರ್ಕಾಟಕ
ಹೋಟೆಲ್ ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭ ಮತ್ತು ಸ್ನೇಹಪರ ಸ್ವಭಾವದಿಂದ ಸುತ್ತಮುತ್ತಲಿನ ಸಮಾಜದಲ್ಲಿ ಗೌರವವು ಹೆಚ್ಚಲಿದೆ. ವಿದ್ಯಾರ್ಥಿವರ್ಗಕ್ಕೆ ತಮ್ಮ ಅಭ್ಯಾಸದಲ್ಲಿ ಸಾಧಿಸಲು ಹೆಚ್ಚಿನ ಅವಕಾಶ ಸಿಗಲಿದೆ.
ಸಿಂಹ
ಎಲ್ಲಾ ವಿಚಾರದಲ್ಲೂ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ವಿದ್ಯಾರ್ಥಿ ವಲಯಕ್ಕೆ ಶೈಕ್ಷಣಿಕ ವಿಷಯಗಳಲ್ಲಿ ಅಪಾರ ಆಸಕ್ತಿ ಮೂಡಲಿದೆ. ವ್ಯಾಪಾರದಲ್ಲಿ ಬಹಳ ಪ್ರಗತಿ ಸಾಧಿಸುವಿರಿ.
ಕನ್ಯಾ
ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ . ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ಕೆಲಸ ಬದಲಿಸುವ ಯೋಚನೆಯನ್ನು ಮಾಡುವವರಿಗೆ ಸಕಾಲ. ವ್ಯವಹಾರದಲ್ಲಿ ಸ್ವಲ್ಪ ನಿಗೂಢತೆ ಕಾಪಾಡಿಕೊಳ್ಳುವುದು ಒಳ್ಳೆಯದು.
ತುಲಾ
ಮನೆಯವರಲ್ಲಿ ತೋರಿದ ಹೆಚ್ಚಿನ ಪ್ರೀತಿ ಹಾಗೂ ಕಾಳಜಿಯಿಂದ ಮನೆಯ ವಾತಾವರಣ ಬಹಳ ಸಂತೋಷವಾಗಿರುವುದು. ಆಫೀಸಿನ ಕೆಲಸಗಳನ್ನು ಕೇಳಿ ತಿಳಿದುಕೊಳ್ಳುವುದು ಉತ್ತಮ.
ವೃಶ್ಚಿಕ
ಗೊಂದಲದಲ್ಲಿ ಸಿಕ್ಕಿರುವ ನಿಮಗೆ ದೃಢ ನಿರ್ಧಾರವನ್ನು ಕೈಗೊಂಡ ಫಲದಿಂದಾಗಿ ಒಳ್ಳೆಯ ಫಲಿತಾಂಶ ಪಡೆಯುವಿರಿ. ಹುಡುಕಾಟದಿಂದ ಜೀವನೋಪಾಯಕ್ಕೆ ಅನುಕೂಲವಾಗುವ ಮಾರ್ಗ ಗೋಚರವಾಗಲಿದೆ.
ಧನು
ಹರಿತ ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು. ಗಮನವಿಟ್ಟು ಕೆಲಸವನ್ನು ಮಾಡಿ. ಆಪ್ತರ ಹಾಗೂ ಪ್ರೀತಿಪಾತ್ರರಿಗಾಗಿ ಮೀಸಲಿಡಿ.
ಮಕರ
ತಾಯಿಯ ಆಯಸ್ಸಿನ ವೃದ್ಧಿಗೋಸ್ಕರ ಧಾರ್ಮಿಕ ಕಾರ್ಯವನ್ನು ಮಾಡಿ. ಅಧಿಕ ಒತ್ತಡದಿಂದ ದೇಹದಲ್ಲಿ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶ ಸಿಗುವುದು.
ಕುಂಭ
ಕೃಷಿಕರು ಮತ್ತು ಉದ್ಯಮಿಗಳು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ ಅವರಲ್ಲಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ವೈಜ್ಞಾನಿಕ ಸಂಶೋಧನೆಯಲ್ಲಿರುವವರಿಗೆ ಸಾಧಿಸಿದ ಸಂತೋಷ ಸಿಗಲಿದೆ.
ಮೀನ
ಕ್ಷುಲ್ಲಕ ಕಾರಣದಿಂದ ಉಂಟಾಗಿದ್ದ ಕುಟುಂಬದ ಕಲಹಗಳು ನಿವಾರಣೆಯಾಗಿ ಶಾಂತಿ ನೆಮ್ಮದಿ ಕಾಣಬಹುದು. ಪ್ರಾಪಂಚಿಕ ವಿಚಾರವನ್ನು ಬಿಟ್ಟು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಮನ ಹರಿಯಲಿದೆ.