ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 16 ಮಂಗಳವಾರ 2024– ಈ ರಾಶಿಯವರ ಹೊಸ ಕಾರ್ಯಕ್ಕೆ ಸಕಾಲ
Published 15 ಏಪ್ರಿಲ್ 2024, 18:35 IST
ಪ್ರಜಾವಾಣಿ ವಿಶೇಷ
author
ಮೇಷ
ಕೀಲು ನೋವು, ವಾತದಂಥ ಕಾಯಿಲೆಯಿಂದ ಬಳಲುತ್ತಿರುವವರು ಆರೋಗ್ಯದ ಮೇಲೆ ವಿಶೇಷ ಕಾಳಜಿ ಇಡಿ. ಚಿತ್ರಕಲೆಯಲ್ಲಿ ಅಥವಾ ಪಠ್ಯೇತರ ವಿಷಯದಲ್ಲಿ ಮಗ್ನರಾಗುವಂತೆ ಪ್ರೇರೇಪಣೆ ದೊರೆಯಲಿದೆ.
ವೃಷಭ
ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ವ್ಯಾಪ್ತಿಯನ್ನು ವಿದೇಶಕ್ಕೆ ಪಸರಿಸುವ ಯೋಚನೆ ಮಾಡಬಹುದು. ಹಣ್ಣು , ತರಕಾರಿ ಮಾರಾಟಗಾರರಿಗೆ ಲಾಭ ನಷ್ಟಗಳ ಮಿಶ್ರ ಫಲ ಅನುಭವವಾಗಬಹುದು.
ಮಿಥುನ
ಹೆಚ್ಚಿನ ಕಡೆ ಜಗಳವನ್ನು ತಣಿಸಲು ಪ್ರಯೋಜನವಾಗುವ ಹಾಸ್ಯ ಪ್ರವೃತ್ತಿಯು ಇಂದು ನಿಮ್ಮ ಕೈ ಬಿಡುವ ಸಾಧ್ಯತೆ ಇದೆ. ಸಹೋದರ ಸಹೋದರಿಯರ ಬೇಜವಾಬ್ದಾರಿಯಿಂದ ಬೇಸರ ಪಟ್ಟುಕೊಳ್ಳುವಿರಿ.
ಕರ್ಕಾಟಕ
ಸಹೋದ್ಯೋಗಿಗಳೊಂದಿಗೆ ಆತ್ಮೀಯ ನಡೆ ಮತ್ತು ನುಡಿ ಮನಸ್ತಾಪಗಳನ್ನು ದೂರಮಾಡಲಿದೆ. ವಿವಾದಾತ್ಮಕ ವಿಷಯಗಳ ಕುರಿತು ಚರ್ಚಿಸುವುದು ಉಚಿತವಲ್ಲ. ಹೊಸ ಕಾರ್ಯ ಕೈಗೊಳ್ಳಲು ಸಕಾಲ.
ಸಿಂಹ
ಪರಿಶ್ರಮದ ಜೊತೆ ಅಧಿಕ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ. ಪ್ರೇಮವಿವಾಹಕ್ಕಾಗಿ ಕಾಯುತ್ತಿರುವವರು ಸ್ವಲ್ಪ ದಿನ ಕಾಯಬೇಕಾಗಬಹುದು. ಮನೆಯ ಸಮೀಪದ ಶಿವಾಲಯಕ್ಕೆ ಭೇಟಿ ನೀಡಿ.
ಕನ್ಯಾ
ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣದಂಥ ಕೆಲಸಗಳಿಗೆ ಪೂರಕ ವಾತಾವರಣ ದೊರೆಯಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅತ್ಯಗತ್ಯ. ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿಯಾಗುವುದು.
ತುಲಾ
ನಿಲುವು ನಿಮಗೆ ಸರಿಯಾಗಿದೆ ಎಂದು ಅನಿಸಿದಲ್ಲಿ ನಿಮ್ಮ ಮೇಲೆ ನಿಮಗೆ ಅಚಲ ನಂಬಿಕೆ ಇರಲಿ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳಾಗುವ ಸಾಧ್ಯತೆ ಇದೆ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ.
ವೃಶ್ಚಿಕ
ಈ ದಿನ ನಿಮ್ಮ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕಿ ರುವುದರಿಂದ ಮಾರ್ಗ ಮಧ್ಯ ಇರುವ ಅಡೆತಡೆಗಳು ನಿವಾರಣೆಯಾಗಲಿವೆ. ಸಕಾರಾ ತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ.
ಧನು
ತೀರ್ಥಯಾತ್ರೆಗಳನ್ನು ಮಾಡಬೇಕೆಂದುಕೊಂಡವರು ಆ ಬಗ್ಗೆ ಯೋಚಿಸಲು ಇದು ಪ್ರಶಸ್ತ ಸಮಯ. ಚಿತ್ರಕಾರರು, ಬರಹಗಾರರಂಥ ಕ್ರಿಯಾತ್ಮಕ ಕೆಲಸಗಳಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ.
ಮಕರ
ವಿದೇಶಿ ವ್ಯವಹಾರಗಳನ್ನು ಹೊಂದಿರುವಂಥವರು ಲಾಭವನ್ನು ಅಪೇಕ್ಷಿಸಬಹುದು. ದಾಂಪತ್ಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಸರಿಯಾದ ಮಾತುಕತೆಯಿಂದ ದೂರವಾಗಿ ಸಂಬಂಧ ಉತ್ತಮಗೊಳ್ಳಲಿದೆ.
ಕುಂಭ
ಮಗಳು ಹಾಗು ತತ್ಸಬಂಧಿ ಕುಟುಂಬ ವರ್ಗದವರಿಗೆ ಉತ್ತಮ ಹಾರೈಕೆಗಳ ಅಗತ್ಯವಿರುವುದರಿಂದ ಅದನ್ನು ನಡೆಸಿಕೊಡಿ. ನಿಮ್ಮ ಮೇಲಿದ್ದ ಸಂಶಯದ ಮನೋಭಾವ ನಿವಾರಣೆಯಾಗುವುದು.
ಮೀನ
ಯಾವ ವಿಷಯದಲ್ಲಿ ಹಿಂದುಳಿದಿರುವಿರಿ ಎಂದು ಕಂಡುಕೊಂಡು ತಜ್ಞರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ. ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಅರಿತು ಅವರನ್ನು ಕ್ಷಮಿಸಿ .