ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 29 ಶನಿವಾರ 2024– ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ
Published 28 ಜೂನ್ 2024, 18:36 IST
ಪ್ರಜಾವಾಣಿ ವಿಶೇಷ
author
ಮೇಷ
ಒಂದು ಸುಳ್ಳನ್ನು ಹೇಳಿ ಅದನ್ನು ಸಮರ್ಥಿಸಿಕೊಳ್ಳಲು ಸುಳ್ಳಿನ ಸರಮಾಲೆಗಳನ್ನೆ ಹೇಳಬೇಕಾಗುತ್ತದೆ. ಯಾವುದೇ ಕಾರ್ಯ ಆರಂಭಿಸುವ ಮುನ್ನ ಪರಂಪರೆಯಲ್ಲಿ ನಡೆದು ಬಂದ ವಿಧಿಯನ್ನು ಆಚರಿಸಿ.
ವೃಷಭ
ವ್ಯಾವಹಾರಿಕ ಪಾಲುದಾರರ ಜತೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ಹರಿತವಾದ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ. ನಿವೇಶನ ಕೊಳ್ಳಲು ಸೂಕ್ತಸ್ಥಳದ ಹುಡುಕಾಟ ನಡೆಸುವಿರಿ.
ಮಿಥುನ
ಹಿಂದಿನ ದಿನದ ನಿದ್ರಾಹೀನತೆಯಿಂದಾಗಿ ಕೆಲಸ ಮಾಡುವಾಗ ತಪ್ಪುಗಳಾಗುವ ಸಾಧ್ಯತೆ ಇದೆ. ಇತರರನ್ನು ಸಂತೋಷ ಪಡಿಸುವ ಭರದಲ್ಲಿ ನಿಮ್ಮ ಜವಾಬ್ದಾರಿ ಮರೆಯದಿರಿ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ.
ಕರ್ಕಾಟಕ
ವಿದ್ಯಾರ್ಜನೆ ಹೆಸರಿನಲ್ಲಿ ಕುಟುಂಬಕ್ಕೆ ಹೊರೆಯಾಗುವ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವಲೋಕಿಸಿ. ನಿಮ್ಮ ವಿದೇಶ ಪ್ರವಾಸದ ಕನಸಿಗೆ ಶುಭ ಮುಹೂರ್ತ ಕೂಡಿ ಬರುವುದು.
ಸಿಂಹ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಹಾಗೂ ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ನಿಮ್ಮದಾಗಲಿದೆ.
ಕನ್ಯಾ
ಬಹುಜನರೊಂದಿಗೆ ವಿಶ್ವಾಸ ಕಳೆದುಕೊಂಡಿರುವ ನೀವು ಪುನಃ ಎಲ್ಲರ ವಿಶ್ವಾಸ ಗಳಿಸಬೇಕಾಗುವುದು. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ.
ತುಲಾ
ದಿನದ ಉತ್ತರಾರ್ಧದಲ್ಲಿ ಸುಖ ಜೀವನ ನಡೆಸಲು ಪೂರ್ವಾರ್ಧದಲ್ಲಿ ಶ್ರಮಿಸಬೇಕು. ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದರಿಂದ ಒತ್ತಡ ತರುವಂತಹ ಯಾವುದೇ ಕೆಲಸಗಳಿದ್ದರೂ ನಿರರ್ಗಳವಾಗಿ ಬಗೆಹರಿಯುವುದು.
ವೃಶ್ಚಿಕ
ಜ್ವರ ಶೀತದಂತಹ ಅನಾರೋಗ್ಯ ನಿಮ್ಮನ್ನು ಕಾಡಲಿದೆ. ಬಹಳ ದಿನಗಳಿಂದ ಬಾಕಿ ಇರುವ ಕಾರ್ಯವನ್ನು ಆರಂಭಿಸುವ ಬಗ್ಗೆ ಯೋಚಿಸಿ. ತಂತಿವಾದಕರ ನೂತನ ಪ್ರಯೋಗವು ಸಂಗೀತ ರಸಿಕರ ಮನಗೆಲ್ಲಲಿದೆ.
ಧನು
ದೇವತಾರಾಧನೆಯಿಂದ ವ್ಯವಹಾರದಲ್ಲಿನ ಕಠಿಣ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ಹೊಂದುವಿರಿ. ದಕ್ಷಿಣಾಮೂರ್ತಿ ಪೂಜೆಯಿಂದ ವಿದ್ಯಾಭ್ಯಾಸದ ವಿಷಯಗಳಲ್ಲಿ ನೆಮ್ಮದಿ ದೊರೆಯುವುದು.
ಮಕರ
ವಿದ್ಯಾಭ್ಯಾದಲ್ಲಿ ಉತ್ತಮ ಫಲಿತಾಂಶ ಪಡೆದು ಹೆಚ್ಚಿನ ವ್ಯಾಸಾಂಗಕ್ಕೆ ವಿದೇಶಕ್ಕೆ ತೆರಳುವ ಅವಕಾಶವಿದೆ. ತಾಯಿಯ ಆರೋಗ್ಯದಲ್ಲಿ ಏರಿಳಿತಗಳಾಗಲಿವೆ. ವೈದ್ಯರನ್ನು ಭೇಟಿ ಮಾಡುವ ಸನ್ನಿವೇಶ ಎದುರಾಗುವುದು.
ಕುಂಭ
ಸಹೋದರರಿಂದ ಹಿತವಚನ ಕೇಳಬೇಕಾದೀತು. ಭಿನ್ನಾಭಿಪ್ರಾಯ ಮೂಡಿದಲ್ಲಿ ಶಾಂತ ಸ್ವಭಾವದಿಂದ ವರ್ತಿಸುವುದು ಉತ್ತಮ. ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ.
ಮೀನ
ಭೂ ಖರೀದಿ ಅಥವಾ ಗೃಹ ನಿರ್ಮಾಣದಂತಹ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಹಿತಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ ಅನುಭವಕ್ಕೆ ಬರುವುದಿಲ್ಲ. ದೈವಬಲದಿಂದ ಒಳಿತಾಗುವುದು.