ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವ್ಯಾಪಾರ–ವ್ಯವಹಾರದಲ್ಲಿ ಲಾಭ
Published 10 ಜುಲೈ 2023, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ಕುಟುಂಬದವರ ಮಾತುಗಳಿಗೆ ಬೆಲೆ ಕೊಡುವುದು ಮತ್ತು ಎಲ್ಲರಲ್ಲೂ ಸಹನೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಲಿದೆ. ನೀಲಿ ಬಣ್ಣ ಶುಭ ತರಲಿದೆ.
ವೃಷಭ
ಕೆಲಸ ಕಾರ್ಯಗಳು ಕೈಗೂಡಲೆಂದು ದೇವರಲ್ಲಿ ಹರಕೆ ಹೊತ್ತಿರುವ ವಿಚಾರವನ್ನು ತೀರಿಸುವ ಬಗ್ಗೆ ಹೆಚ್ಚಿನ ಪ್ರಯತ್ನ ಇರಲಿ. ಯುವ ಕೃಷಿಕರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ.
ಮಿಥುನ
ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಹೆಚ್ಚಲಿದೆ. ದೈವಾನುಗ್ರಹದಿಂದ ಸಾಂಸಾರಿಕವಾಗಿ ಮತ್ತು ಆರ್ಥಿಕವಾಗಿಯೂ ಇಷ್ಟಾರ್ಥ ಸಿದ್ಧಿಸುವುದು. ಬಯಸಿದ ಕೆಲಸಗಳನ್ನು ತ್ವರಿತವಾಗಿ ಮಾಡಿ ಮುಗಿಸುತ್ತೀರಿ.
ಕರ್ಕಾಟಕ
ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ತೋರಿಬಂದರೂ ಅಭಿವೃದ್ಧಿದಾಯಕವಾದ ಬೆಳವಣಿಗೆ ಹರ್ಷವನ್ನು ತರುವುದು. ಇಂದಿನಿಂದ ಮತ್ತೊಬ್ಬರ ಅವಲಂಬನೆ ಬೇಡವೆನಿಸುತ್ತದೆ. ದ್ವಿಚಕ್ರ ವಾಹನ ಕೊಳ್ಳುವ ಯೋಗವಿದೆ.
ಸಿಂಹ
ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಜಯ ದೊರೆತು ಮನಸ್ಸು ಉಲ್ಲಾಸದಿಂದ ಇರುವುದು. ದಾಖಲೆ ಅಥವಾ ಒಪ್ಪಂದಗಳಿಗೆ ಎಚ್ಚರ ವಹಿಸಿ ಸಹಿ ಮಾಡಿರಿ. ಈ ವಿಚಾರದಲ್ಲಿ ಕಳವಳ ಬೇಡ.
ಕನ್ಯಾ
ವ್ಯಾಪಾರ ವ್ಯವಹಾರದಲ್ಲಿ ಲಾಭ, ನಷ್ಟ ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ. ರಬ್ಬರ್ ಮತ್ತು ಪ್ಲಾಸ್ಟಿಕ್ ವ್ಯಾಪಾರಗಳಿಂದ ಲಾಭವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಾಣುವುದು.
ತುಲಾ
ತಾಂತ್ರಿಕ ಪರಿಣತರಿಗೆ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಉನ್ನತ ಯಶಸ್ಸು ದೊರೆತು ಆನಂದವಾಗುತ್ತದೆ. ವೈಯಕ್ತಿಕ ಜೀವನದ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿಮೂಡಲಿದೆ.
ವೃಶ್ಚಿಕ
ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿ ಉತ್ತಮ ಚಟುವಟಿಕೆಗಳು ಇರುವುದು. ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಇರುವುದು. ನೂತನ ವ್ಯಾಪಾರಿಗಳು ವ್ಯಾಪಾರದಲ್ಲಿ ಪ್ರಬುದ್ಧತೆಯಿಂದ ವ್ಯವಹರಿಸಿ.
ಧನು
ಮುಖಂಡತ್ವದ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ನಿರೀಕ್ಷೆಗೂ ಮೀರಿ ಸಹಾಯ ಸೌಹಾರ್ದಗಳು ದೊರೆಯುವುದು. ಷೇರು ವ್ಯವಹಾರಗಳಿಂದ ಹೆಚ್ಚಿನ ಲಾಭಾಂಶವನ್ನು ಪಡೆದುಕೊಳ್ಳುವಿರಿ.
ಮಕರ
ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ, ಕೂಡಲೇ ಬಗೆಹರಿಸಿಕೊಳ್ಳಿರಿ. ಮಹತ್ವದ್ದೆನಿಸಿದ ಕೆಲಸಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸ ಬೇಕಾಗುವುದು.
ಕುಂಭ
ಕಲಾ ಸೇವೆ ಗುರುತಿಸಿ ಪ್ರಶಂಸೆ ಹಾಗೂ ಸನ್ಮಾನ ದೊರೆಯಲಿದೆ. ಕೆಲವರ ಸಂಬಂಧವು ಕೊನೆಗೊಳ್ಳುವಂಥ ಪರಿಸ್ಥಿತಿ ಎದುರಾಗಬಹುದು. ವಾಹನ ಬಿಡಿಭಾಗಗಳ ಮಾರಾಟಗಾರರಿಗೆ ಆದಾಯದದಿನ.
ಮೀನ
ಆಡುವ ಸುಳ್ಳು ಮಾತಿನ ಫಲವನ್ನು ತಕ್ಷಣದಲ್ಲಿ ಅನುಭವಿಸುವಂತಾಗುವುದು. ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿ. ದವಸ ಧಾನ್ಯಗಳ ದಾಸ್ತಾನಿಗಾಗಿ ಬಂಡವಾಳ ಹೂಡುವುದು ಸರಿಯಲ್ಲ.
ADVERTISEMENT
ADVERTISEMENT