ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಅಚ್ಚಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ರಾಮಾಚಾರಿ. ಇದೇ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಮೌನ ಗುಡ್ಡೆಮನೆ ಈಗ ದುಬೈಗೆ ಹಾರಿದ್ದಾರೆ.
.ಕೊನೆಗೊಂಡ ‘ರಾಮಾಚಾರಿ’ ಧಾರಾವಾಹಿ: ನಟಿ ಮೌನ ಗುಡ್ಡೆಮನೆ ಭಾವುಕ ಪೋಸ್ಟ್.ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ ರಾಮಾಚಾರಿ ಖ್ಯಾತಿಯ ನಟಿ ಐಶ್ವರ್ಯ ಸಾಲಿಮಠ .
ಇತ್ತೀಚೆಗಷ್ಟೇ ರಾಮಾಚಾರಿ ಧಾರಾವಾಹಿ ಮುಕ್ತಾಯವಾಗಿತ್ತು. ಧಾರಾವಾಹಿ ಅಂತ್ಯವಾದ ಬಳಿಕ ನಟಿ ಮೌನ ಗುಡ್ಡೆಮನೆ, ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಂಡು ಫೋಟೊಗಳನ್ನು ಹಂಚಿಕೊಂಡಿದ್ದರು.

ರಾಮಾಚಾರಿಯ ಹೆಂಡತಿಯಾಗಿ ನಟಿಸಿದ್ದ ಚಾರು, ಈಗ ದೇಶ ವಿದೇಶ ಸುತ್ತುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ದುಬೈ ಸೌಂದರ್ಯ ಸವಿಯುತ್ತಿರುವ ನಟಿ ಮೌನ ಗುಡ್ಡೆಮನೆ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಂಚಿಕೊಂಡ ಪೋಸ್ಟ್ನಲ್ಲಿ ನಟಿ ಮೌನ, ಹಸಿರು ಮತ್ತು ಹಳದಿ ಮಿಶ್ರಿತ ಉದ್ದನೆಯ ಗೌನ್ ಧರಿಸಿ ಕಂಗೊಳಿಸಿದ್ದಾರೆ.

ಮೌನ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ‘ಚಾರು ಮೇಡಂ ಮತ್ತೆ ಯಾವಾಗ ತೆರೆ ಮೇಲೆ ಬರುತ್ತೀರಿ’, ‘ನಿಮ್ಮ ಸಹಜ ನಟನೆಯನ್ನು ನೋಡುವುದೇ ಚಂದ’ ಎಂದು ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.

ಇನ್ನು, ನಟಿ ಮೌನ ಗುಡ್ಡೆಮನೆ ಅವರು ರಾಮಾಚಾರಿ ಧಾರಾವಾಹಿಯಿಂದಲೇ ಚಂದನವನಕ್ಕೆ ಕಾಲಿಟ್ಟರು. ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿದ್ದ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದಲ್ಲಿ ಮೂಡಿಬಂದಿದ್ದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಮಡೆನೂರು ಮನು ಅವರಿಗೆ ನಾಯಕ ನಟಿಯಾಗಿ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.