ಸೋಮವಾರ, 17 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿಮ್ಮ ದಿನ ಸಂತೋಷವಾಗಿರಲಿದೆ
Published 17 ನವೆಂಬರ್ 2025, 0:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು ತೆಗೆದುಹಾಕಿ. ದೊಡ್ಡ ಸಮಸ್ಯೆಗಳನ್ನು ಯೋಚಿಸಿ ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಆರ್ಥಿಕ ಸಮಸ್ಯೆ ನಿದ್ದೆ ಕೆಡಿಸಲಿದೆ.
ವೃಷಭ
ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ. ಜೀವನಶೈಲಿಯೂ ಬದಲಾಗಲಿದೆ. ಗಣಿತಜ್ಞರಿಗೆ, ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರೆಯಲಿವೆ. ದಿನ ಸಂತೋಷವಾಗಿರಲಿದೆ.
ಮಿಥುನ
ಪೂರ್ವನಿಯೋಜಿತ ಕೆಲಸ ಕಾರ್ಯಗಳು ಹಂತ ಹಂತವಾಗಿ ಪೂರ್ಣಗೊಳ್ಳಲಿವೆ. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳು ದೊರೆಯಲಿವೆ.
ಕರ್ಕಾಟಕ
ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗಿ. ಸರಳ ಜೀವನವನ್ನು ನಡೆಸುವುದರಿಂದಾಗಿ ಶ್ರೀಮಂತಿಕೆ ಉಳಿಸಿಕೊಳ್ಳಬಹುದು. ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ.
ಸಿಂಹ
ಆತ್ಮೀಯರೊಂದಿಗಿಗೆ ವ್ಯವಹಾರಗಳ ಕುರಿತು ಅಥವಾ ವ್ಯವಹಾರದಲ್ಲಿನ ಪಾಲುದಾರಿಕೆಯ ಸಲುವಾಗಿ ಚರ್ಚಿಸಬಹುದು. ಮಾನಸಿಕ ಒತ್ತಡ ಹೆಚ್ಚಿರುವುದರಿಂದ ತಾಂತ್ರಿಕ ತಪ್ಪುಗಳಾಗದಂತೆ ಎಚ್ಚರವಹಿಸಿ.
ಕನ್ಯಾ
ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ. ಕುಟುಂಬದ ಸದಸ್ಯರ ಮಾತುಗಳನ್ನು ತಾಳ್ಮೆಯಿಂದ ಕೇಳಿರಿ. ನಿಷ್ಠೆ ಹಾಗೂ ಬುದ್ಧಿವಂತಿಕೆಗೆ ಪ್ರತಿಫಲ ಸಿಗಲಿದೆ.
ತುಲಾ
ಆತ್ಮ ವಿಶ್ವಾಸವನ್ನು ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಯತ್ತ ಗಮನಹರಿಸಿ. ಕಳೆದು ಹೋಗಿದ್ದ ವಸ್ತುಗಳು ಸತತ ಪ್ರಯತ್ನದಿಂದ ಸಿಕ್ಕಿ ಮನಸ್ಸಿಗೆ ಸಮಾಧಾನವಾಗುವುದು.
ವೃಶ್ಚಿಕ
ಸಣ್ಣ ಮಗುವಿನ ಜತೆಗೆ ದೂರದ ಪ್ರಯಾಣವನ್ನು ಯೋಚಿಸಿದ್ದರೆ ಆದಷ್ಟು ಅದನ್ನು ಬಿಡುವ ಪ್ರಯತ್ನ ಮಾಡಿ. ಕೃಷಿಯಲ್ಲಿ ಶ್ರೇಯಸ್ಸಿಗಾಗಿ ಶ್ರೀ ಕಾಶಿಪುರಾಧೀಶ್ವರಿ ಅನ್ನಪೂರ್ಣೇಶ್ವರಿಯನ್ನು ದರ್ಶಿಸಿ.
ಧನು
ಯುವಕರು ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ವಿದ್ಯಾಲಯದ ಕಾರ್ಯಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಡಬೇಕಾಗುತ್ತದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಚಂಚಲ ಮನಸ್ಸು ಅಡ್ಡಿಮಾಡುವುದು.
ಮಕರ
ಅಡುಗೆ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ, ಬೇಡಿಕೆ, ಲಾಭವಿರುವುದು. ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಆನಂದ ಸಿಗಬಹುದು. ವ್ಯಾಪಾರದಲ್ಲಿ ಮೋಸ ಹೋಗದೆ ಬುದ್ಧಿವಂತಿಕೆ ತೋರಿ.
ಕುಂಭ
ಸಾಮರ್ಥ್ಯವನ್ನಷ್ಟೂ ಬಳಸಿಕೊಂಡು ಕೆಲಸ ಮಾಡುತ್ತಿರುವ ನೀವು ದೇಹಕ್ಕೆ ಸ್ವಲ್ಪ ವಿಶ್ರಾಂತಿಯನ್ನು ಕೊಡುವುದರ ಬಗ್ಗೆ ಯೋಚಿಸಿ. ಪತಿ ಪತ್ನಿಯರಲ್ಲಿ ಅನ್ಯೋನ್ಯತೆ ಹೆಚ್ಚುವುದು.
ಮೀನ
ಮನೋಭಿಲಾಷೆಯನ್ನು ಸಿದ್ಧಿಸಿಕೊಳ್ಳಲಿಕ್ಕಾಗಿ ಇತರರಿಗೆ ಮಾರಕವಾಗುವ ಮಾರ್ಗವನ್ನು ಆರಿಸಿಕೊಳ್ಳಬೇಡಿ. ಚಿಂತಾಕ್ರಾಂತರಾದಾಗ ನಿಮ್ಮ ಸುಖ-ದುಃಖಗಳನ್ನು ಹಂಚಿಕೊಳ್ಳುವ ಮಿತ್ರರನ್ನು ಹೊಂದುವಿರಿ.
ADVERTISEMENT
ADVERTISEMENT