ಸೋಮವಾರ, 18 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆಗಸ್ಟ್ 18 ಸೋಮವಾರ 2025- ಇಂದು ವಾಹನ ಖರೀದಿಗೆ ಸೂಕ್ತ ಸಮಯ
Published 17 ಆಗಸ್ಟ್ 2025, 19:09 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜಟಿಲ ಸಮಸ್ಯೆಗೆ ಬೇರೆಯವರಿಗೆ ಸುಲಲಿತವಾಗಿ ಪರಿಹಾರ ಸೂಚಿಸುವ ನೀವು ನಿಮ್ಮದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಡವುತ್ತೀರಿ. ವಾಹನದ ಖರೀದಿಗೆ ಸೂಕ್ತ ಸಮಯ.
ವೃಷಭ
ಹೊಸ ಜೀವನ ಶೈಲಿಗೆ ಹೊಂದಿಕೊಳ್ಳುವುದು ಕಷ್ಟವೆನಿಸಲಿದೆ. ಅಕ್ಕಪಕ್ಕದವರು ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸಿ. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗುತ್ತದೆ.
ಮಿಥುನ
ಇಷ್ಟು ದಿನಗಳವರೆಗೂ ತಾಳ್ಮೆಯಿಂದಿದ್ದ ಮನಸ್ಸು ಅನಿವಾರ್ಯ ಕಾರಣದಿಂದಾಗಿ ಕಾರ್ಯಕ್ಷೇತ್ರದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಬೃಹತ್ ಯೋಜನೆಗಾಗಿ ಸಾಲ ಮಾಡುವ ಪರಿಸ್ಥಿತಿ ಬರಬಹುದು.
ಕರ್ಕಾಟಕ
ಕಾರ್ಮಿಕರ ಬೇಡಿಕೆಗಳನ್ನು ಸರಿಯಾಗಿ ಪರಿಶೀಲಿಸಿ ಪ್ರಶ್ನೆಗಳಿಗೆ ಉತ್ತರಿಸಿ. ಗೃಹೋಪಯೋಗದ ವಸ್ತುಗಳ ಸಣ್ಣ ಉದ್ಯಮಿಗಳಿಗೆ ವ್ಯಾಪಾರ ನಡೆಯುವುದು. ಗೃಹಿಣಿಯರಿಗೆ ಹೆಚ್ಚಿನ ಜವಾಬ್ದಾರಿ ಅಗತ್ಯ.
ಸಿಂಹ
ಸಹಾಯ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವಂತೆ ಆಗಲಿದೆ. ಶಿಕ್ಷಣ ಹಾಗೂ ಸೌಕರ್ಯ ಎಂಬ ಎರಡು ಆಯ್ಕೆಗಳು ನಿಮ್ಮ ಮುಂದೆ ಬಂದಾಗ ಅವೆರೆಡರಲ್ಲಿ ಆರಿಸಿಕೊಳ್ಳಬೇಕಾಗಿರುವುದು ಶಿಕ್ಷಣವನ್ನೇ.
ಕನ್ಯಾ
ತಿಳಿಯದೆ ನಿಮ್ಮ ಬಗ್ಗೆ ಉಂಟಾಗುತ್ತಿರುವ ಅಪಪ್ರಚಾರವು ಸದ್ಯದಲ್ಲಿ ನಿಮ್ಮ ಗಮನಕ್ಕೆ ಬಂದು ಪೇಚಾಡುವಂತಾಗುತ್ತದೆ. ಕಾರ್ಖಾನೆ ಕೆಲಸಗಾರರಿಗೆ ಹೆಚ್ಚಿನ ಕೆಲಸದ ಕಾರಣ ಸಾಂಸಾರಿಕ ಜವಾಬ್ದಾರಿ ನೋಡಲು ಕಷ್ಟವಾಗುತ್ತದೆ.
ತುಲಾ
ಅಧಿಕಾರದ ಚೌಕಟ್ಟಿನಿಂದ ಹೊರ ಹೋಗದಂತೆ ಗಮನವಿರಲಿ. ತಪ್ಪುಗಳು ಸಂಭವಿಸಬಹುದು. ನಿಮ್ಮಿಂದಾಗುವ ತಪ್ಪುಗಳಿಗೆ ದೂಷಿಸಲು ಜನ ಕಾಯುತ್ತಿರುತ್ತಾರೆ ಎಂಬುದು ಸತ್ಯ.
ವೃಶ್ಚಿಕ
ಕಾರಣವಿಲ್ಲದೆ ನಡೆಸಿಕೊಂಡು ಬರುತ್ತಿರುವ ಆಚರಣೆಗೆ ಕಾರಣಗಳು ದೊರೆಯುತ್ತವೆ. ಸಮಸ್ಯೆಗಳ ಸರಮಾಲೆಯಿಂದ ನಿದ್ರಾಹೀನತೆ ಕಾಡಬಹುದು. ಯೋಗಾಭ್ಯಾಸ ಆರೋಗ್ಯವನ್ನು ವೃದ್ಧಿಸುತ್ತದೆ.
ಧನು
ನಡವಳಿಕೆಯು ಇತರರಿಗೆ ಗೊಂದಲಮಯವಾಗಿ ಕಂಡರೂ ಅಸಹಾಯಕತೆಯಿಂದ ನಿಲ್ಲುವ ಕಾರ್ಯವನ್ನು ಬಿಡುವುದಕ್ಕಿಂತ ಉಳಿಸಿಕೊಳ್ಳಲು ಕೆಲ ಪ್ರಯತ್ನಗಳು ಬೇಕಾಗಬಹುದು.
ಮಕರ
ಒಂದು ಅಚ್ಚರಿಯ ಸುದ್ದಿಯನ್ನು ಕೇಳಬಹುದು. ಕೆಲಸದಲ್ಲಿ ಹೊಸ ಅನುಭವವನ್ನು ಎದುರು ನೋಡುವಿರಿ. ರೈತರಿಗೆ ಒಳ್ಳೆಯ ಸುದ್ದಿ ಬರಲಿದೆ. ಮನೆ ಕಟ್ಟುವ ವಿಚಾರದಲ್ಲಿ ಹಿರಿಯರೊಂದಿಗೆ ಗಂಭೀರ ಚರ್ಚೆ ಮಾಡುವಿರಿ.
ಕುಂಭ
ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವಂತಾಗಲಿದೆ. ಮಗನ ವಿಷಯ ಮನೆಯಲ್ಲಿ ಚರ್ಚೆಗೆ ಬರುವುದು. ಸಂಗಾತಿಯೊಂದಿಗೆ ಭಾವನಾತ್ಮಕ ಪ್ರಕ್ಷುಬ್ಧತೆಗೆ ಒಳಗಾಗುವಂತಹ ಸಾಧ್ಯತೆ ಇರುವುದು. ಸಂತೋಷದ ದಿನವಾಗಿದೆ.
ಮೀನ
ಸೃಜನಶೀಲ ಯೋಜನೆ ಮುಂದುವರಿಸಲು ಶುಭದಿನ. ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮ. ಷೇರು ವ್ಯವಹಾರಗಳು ಕೂಡಿ ಬರಲಿವೆ. ವ್ಯಾಪಾರದಲ್ಲಿ ಮಹತ್ತರ ಅಭಿವೃದ್ಧಿಯನ್ನು ಕಾಣುವಿರಿ.
ADVERTISEMENT
ADVERTISEMENT