ಭಾನುವಾರ, 11 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 11 ಭಾನುವಾರ 2026– ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ
Published 10 ಜನವರಿ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇತರರಿಗೆ ಸಹಾಯ ಮಾಡುವ ವಿಚಾರದಲ್ಲಿ ಮುಂದಾಲೋಚನೆಯಿಲ್ಲದೆ ಮುಂದುವರೆಯುವುದನ್ನು ಬದಲು ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಬಾಳಸಂಗಾತಿಯ ಮಾತುಗಳಿಗೆ ನಿಮ್ಮ ಸಹಮತವಿರಲಿ.
ವೃಷಭ
ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿರುವವರನ್ನು ನೋಡುವ ಅವರಲ್ಲಿ ಮಾತನಾಡುವ ಅವಕಾಶ ನಿಮಗೆ ಸಿಗುವುದು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ನಿಮ್ಮ ಭಾವನೆಗಳಿಗೆ ಉತ್ತಮ ಪ್ರಶಂಸೆ ಸಿಗುವ ದಿನ ಇದಾಗಿದೆ.
ಮಿಥುನ
ಶಸ್ತ್ರ ಚಿಕಿತ್ಸೆಯ ವಿಚಾರವಾಗಿ ವೈದ್ಯರ ಮಾತುಗಳನ್ನು ವಿಶೇಷವಾದ ಗಮನವನ್ನು ಇಟ್ಟು ಕೇಳುವುದು ಸೂಕ್ತ. ಬಹಳ ದಿನಗಳ ನಂತರ ಒಂದು ದೃಢವಾದ ನಿರ್ಣಯವನ್ನು ಕೈಗೊಂಡಿರುವ ನಿಮಗೆ ಶುಭವಾಗುವುದು.
ಕರ್ಕಾಟಕ
ಕಾರ್ಯಕ್ಷೇತ್ರದಲ್ಲಿನ ಹೆಚ್ಚುವರಿ ಕೆಲಸದಿಂದ ಆದ ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಅಗತ್ಯ ಇರುವುದು. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನಿಸಿ. ಸರಕು ಸಾಗಾಣಿಕೆದಾರರಿಗೆ ಹೆಚ್ಚಿನ ಕೆಲಸ ಇರಲಿದೆ.
ಸಿಂಹ
ನಾನಾ ರೀತಿಯಲ್ಲಿ ಉನ್ನತಿ ಗೋಚರಕ್ಕೆ ಬಂದರೂ ಹಣದ ಖರ್ಚುಗಳ ಲೆಕ್ಕಾಚಾರದ ಬಗ್ಗೆ ಗಮನವಿರಲಿ. ಧೈರ್ಯದಿಂದ ದೊಡ್ಡ ದೊಡ್ಡ ಯೋಜನೆ ಕೈಗೊಳ್ಳಬಹುದು, ಆದರೆ ಹಣದ ವಿಚಾರದಲ್ಲಿ ಎಚ್ಚರ ವಹಿಸಿ.
ಕನ್ಯಾ
ಅಣ್ಣ-ತಮ್ಮಂದಿರು ಒಂದೇ ವ್ಯವಹಾರದಲ್ಲಿ ಸಂಯಮದಿಂದ ನಡೆದುಕೊಂರೆ ವ್ಯವಹಾರಿಕ ಲಾಭವನ್ನು ಹೊಂದಬಹುದು. ಕೃಷಿಯಲ್ಲಿ ನೀವು ಪಾಲಿಸುತ್ತಿರುವ ತಂತ್ರಗಳು ಶೀಘ್ರದಲ್ಲೇ ಫಲ ನೀಡಲಿವೆ.
ತುಲಾ
ಮಕ್ಕಳ ಓದಿನ ವಿಚಾರವಾಗಿ ತೆಗೆದುಕೊಂಡ ನಿರ್ಧಾರ ಸರಿ ಎಂದು ನಿಮಗೆ ಮನವರಿಕೆಯಾಗುವುದು. ಜಲ ಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಂಭವವಿದೆ.
ವೃಶ್ಚಿಕ
ಆಹಾರ ಪದಾರ್ಥ, ಉಕ್ಕು (ಕಬ್ಬಿಣ) ಮುಂತಾದ ಗೃಹ ಬಳಕೆ ಸಾಮಾನುಗಳ ವರ್ತಕರಿಗೆ ದಿನದ ಪೂರ್ವದಲ್ಲಿ ಅಧಿಕ ಲಾಭ. ವೈಯಕ್ತಿಕ ವಿಚಾರಕ್ಕಾಗಿ ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ ಬರಬಹುದು.
ಧನು
ರಾಜಕೀಯ ವ್ಯಕ್ತಿಗಳಿಗೆ ಸ್ವಂತ ಕ್ಷೇತ್ರದಲ್ಲಿ ದುರಹಂಕಾರಿ ಎನ್ನುವ ಪಟ್ಟ ಸಿಗುವ ಲಕ್ಷಣಗಳಿವೆ. ಬಂಧುಗಳಲ್ಲಿ ಆರ್ಥಿಕ ಸಹಾಯ ಕೇಳಬೇಡಿ. ನೆರೆಯವರ ಸಹಾಯದಿಂದ ಮಗಳ ಮದುವೆ ನಿಶ್ಚಯವಾಗಲಿದೆ.
ಮಕರ
ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ ಹಾಗೂ ನಿಮ್ಮ ಜೀವನ ಶೈಲಿಯೂ ವಿಭಿನ್ನವಾಗಿ ಬದಲಾಗಲಿದೆ. ಮೀನುಗಾರರು ಅಥವಾ ಸಮುದ್ರ ಪ್ರಯಾಣ ಮಾಡುವವರು ಜಾಗೃತರಾಗಿರಿ. ದಿನಸಿ ವ್ಯಾಪಾರಿಗಳಿಗೆ ಅಲ್ಪ ಲಾಭ.
ಕುಂಭ
ಮೇಲಧಿಕಾರಿಗಳಿಂದ ಹೆಚ್ಚಿನ ಹೊಸ ಅವಕಾಶಗಳು ಹಾಗೂ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ ಮನೆಯ ವಿಚಾರಕ್ಕೆ ಸಮಯ ನೀಡಲು ಅವಕಾಶವಾಗುವುದು.
ಮೀನ
ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಬಿಟ್ಟು ಹೊಸ ತಲೆಮಾರಿನವರು ನೂತನವಾಗಿ ಸಂಬಂಧವನ್ನು ಬೆಳೆಸುವಂತಾಗಲಿದೆ. ಹಿಡಿದ ಕಾರ್ಯವು ಯಾವಾಗ ಮುಗಿಯುವುದೆಂದು ಕಾಣುವ ಮನಸ್ಥಿತಿ ಎದುರಾಗುತ್ತದೆ.
ADVERTISEMENT
ADVERTISEMENT