ದಿನ ಭವಿಷ್ಯ: 6 ಜನವರಿ 2026 ಮಂಗಳವಾರ– ಕೈ ತಪ್ಪಿದ ಅವಕಾಶಗಳು ದೊರೆಯಲಿವೆ
Published 5 ಜನವರಿ 2026, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇಹದಲ್ಲಾಗುವ ಚಿಕ್ಕ ಪುಟ್ಟ ಬದಲಾವಣೆಗಳು ತೊಂದರೆಯನ್ನು ಉಂಟು ಮಾಡಬಹುದು. ದೇಹಕ್ಕೆ ಬೇಕಾದ ವಿಶ್ರಾಂತಿಯನ್ನು ಕೊಡಲು ಯೋಚಿಸಿ. ಸಂತುಷ್ಟರಾಗುವಿರಿ.
ವೃಷಭ
ಅನಾರೋಗ್ಯಕ್ಕೆ ತುತ್ತಾದರೆ ಚೇತರಿಸಿಕೊಳ್ಳುವಿರಿ. ಯುವಕರು ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುವಿರಿ. ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಜೀವದಾನ ಮಾಡುವಿರಿ.
ಮಿಥುನ
ವಾತಾವರಣದ ಬದಲಾವಣೆಯಿಂದ ಉಂಟಾದ ವ್ಯಾಧಿಗಳಿಗೆ ಆದಷ್ಟು ಬೇಗ ಔಷಧಿಯನ್ನು ಮಾಡಿಕೊಳ್ಳಿ. ಮನೆಯ ವ್ಯಕ್ತಿಗಳೊಂದಿಗೆ ಮುನಿಸಿ ಕೊಳ್ಳಬೇಡಿ. ಕೈ ತಪ್ಪಿದ ಅವಕಾಶಗಳು ದೊರೆಯಲಿವೆ.
ಕರ್ಕಾಟಕ
ರಾಜಕೀಯ ವ್ಯಕ್ತಿಗಳಿಗೆ ಜನರ ಬೆಂಬಲದ ಮತ್ತು ಆರ್ಥಿಕತೆಯ ಕೊರತೆ ಕಾಡಲಿದೆ. ಅವಿವಾಹಿತರಿಗೆ ಕುಟುಂಬದವರು ನೋಡುವ ಯಾವ ಸಂಬಂಧಗಳು ಸಹ ಸರಿ ಹೋಗದೆ ಇರಬಹುದು.
ಸಿಂಹ
ಪ್ರಮುಖ ವಿಚಾರಗಳಲ್ಲಿ ಎಲ್ಲರ ಅಭಿಪ್ರಾಯವನ್ನೂ ಕೇಳಿ ತೀರ್ಮಾನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಕೆಲಸಮಾಡುವ ಸ್ಥಳದಲ್ಲಿ ಕೆಲವು ಬದಲಾವಣೆ ಮಾಡುವುದು ಉತ್ತಮ.
ಕನ್ಯಾ
ಅನಿರೀಕ್ಷಿತವಾಗಿ ಹಾಗೂ ಅನಿವಾರ್ಯವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು. ಘಟನಾವಳಿಗಳು ಶಕುನಗಳಂತೆ ಕಂಡು ದುರ್ಘಟನೆಗಳಿಂದ ಪಾರಾಗುವಿರಿ.
ತುಲಾ
ಮನೆಯಲ್ಲಿ ನೆಮ್ಮದಿಯನ್ನು ಕಾಪಾಡುವ ಕಾರಣಕ್ಕಾಗಿ ಹಿರಿಯರನ್ನು ಸುಮ್ಮನಿರಿಸುವಂಥ ಕೆಲಸವನ್ನು ಮಾಡುವಿರಿ. ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸುದಿನ. ಆತ್ಮವಿಶ್ವಾಸ ವೃದ್ಧಿಯಾಗುವುದು.
ವೃಶ್ಚಿಕ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಬಂದಿರುವ ಸಲಹೆ ಸರಿಯಾದದ್ದಾಗಿರುತ್ತದೆ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ.
ಧನು
ಕಷ್ಟವಾಗಿದ್ದರೂ ವೈಯಕ್ತಿಕ ಕಾರ್ಯಗಳನ್ನು ಸಾಧಿಸಿಕೊಳ್ಳುವ ಸಲುವಾಗಿ ಯಾವುದೇ ತರಹದ ವಾಮಮಾರ್ಗವನ್ನು ಹಿಡಿಯಬೇಡಿ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಕೇಳುವಂತಾಗಲಿದೆ.
ಮಕರ
ವ್ಯವಹಾರದಲ್ಲಿ ಸಂಭವಿಸುವ ಲಾಭನಷ್ಟಗಳನ್ನು ಸುಧಾರಿಸಿಕೊಂಡು ಹೋಗುವ ಮನಸ್ಸು ಬರಲಿದೆ. ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ತೊಡಕು ಇರಲಿದೆ. ಮನೆಯೇ ಸೌಖ್ಯವೆಂದು ಅನಿಸಲಿದೆ.
ಕುಂಭ
ಅಧಿಕವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥ ದೇಹಪ್ರಕೃತಿಗೆ ಸರಿ ಹೊಂದುವುದಿಲ್ಲ. ಹಾಗಾಗಿ ಸಮಾರಂಭದ ಊಟದಲ್ಲಿ ಜಾಗ್ರತೆ ವಹಿಸಿ. ಸಾಂಸಾರಿಕವಾಗಿ ಸುಖ ಹಾಗೂ ನೆಮ್ಮದಿ ಇರಲಿದೆ.
ಮೀನ
ಕಾರಣವು ನಿಮಗೆ ತಿಳಿಯದೇ ಹೋದರೂ ತಂದೆ ತಾಯಿಯರ ಮುನಿಸು ಸಮಂಜಸವಾಗಿಯೇ ಇರುತ್ತದೆ. ಹೂವು ಹಣ್ಣಿನ ವ್ಯಾಪಾರಿಗಳಿಗೆ ಲಾಭದ ದಿನ. ಯೋಗಾಭ್ಯಾಸ ಮನೋಲ್ಲಾಸ ಹೆಚ್ಚಿಸುತ್ತದೆ.