ವಾರ ಭವಿಷ್ಯ: ಈ ರಾಶಿಯವರ ಆರ್ಥಿಕ ಬೆಳವಣಿಗೆಗೆ ಸಂಗಾತಿಯಿಂದ ಸಹಕಾರ
Published 21 ಫೆಬ್ರುವರಿ 2026, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಕೆಲವೊಂದು ಕೆಲಸಗಳು ಆಗಿ ಮನಸ್ಸು ಸಂತೋಷವಾಗಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಹಿರಿಯರ ಮಾರ್ಗದರ್ಶನ ನಿಮಗೆ ಒಳಿತನ್ನು ಮಾಡುತ್ತದೆ. ಆಸ್ತಿ ಕೊಳ್ಳುವ ವಿಚಾರದಲ್ಲಿ ಆತುರಬೇಡ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವಿರುತ್ತದೆ. ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ.
21 ಫೆಬ್ರುವರಿ 2026, 18:35 IST
ವೃಷಭ
ವಾರದ ಆರಂಭದಲ್ಲಿ ಬಹಳ ಆನಂದವಿರುತ್ತದೆ. ಆದಾಯ ಉತ್ತಮವಾಗಿರುತ್ತದೆ. ಗುರುಹಿರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ಕೆಲವು ಬಂಧುಗಳಿಂದ ನಿಮಗೆ ಸಹಕಾರ ಸಿಗುವುದಿಲ್ಲ. ಆಸ್ತಿ ಮಾರಾಟ ಮಾಡುವವರಿಗೆ ನಿರೀಕ್ಷಿತ ಲಾಭವಿರುವುದಿಲ್ಲ. ವೃತ್ತಿಯಲ್ಲಿ ಪರೀಕ್ಷೆಗಳನ್ನು ತೆಗೆದುಕೊಂಡು ಮೇಲ್ದರ್ಜೆ ಗೆ ಏರುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಸಿಗುವ ಸಾಧ್ಯತೆ ಗಳಿವೆ.
21 ಫೆಬ್ರುವರಿ 2026, 18:35 IST
ಮಿಥುನ
ಬಹಳ ಗಂಭೀರ ನಡವಳಿಕೆಯನ್ನು ಪ್ರದರ್ಶನ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಒಳಿತಿನ ಕೆಲಸಗಳಿಗೆ ಮಾತ್ರ ಹಿರಿಯರು ಸಹಕಾರ ನೀಡುವರು. ಸ್ಥಿರಾಸ್ತಿ ಯನ್ನು ಮಾಡುವ ವಿಚಾರದಲ್ಲಿ ಮುಂದುವರಿಯಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ಈಗ ಕೃಷಿಯಿಂದ ನಿರೀಕ್ಷಿತ ಲಾಭವನ್ನು ಕಾಣಬಹುದು. ಹಿರಿಯರ ವ್ಯವಹಾರಗಳಲ್ಲಿ ಪಾಲು ದಾರಿಕೆ ಸಿಗುವ ಸಂದರ್ಭ ಇದೆ.
21 ಫೆಬ್ರುವರಿ 2026, 18:35 IST
ಕರ್ಕಾಟಕ
ವಾರದ ಆರಂಭದಲ್ಲಿ ಮಂದತನ ಇರುತ್ತದೆ. ಆದಾಯವು ಕಡಿಮೆ ಇದ್ದು , ಅದರಲ್ಲೇ ನಿಭಾಯಿಸಬೇಕಾದ ಪರಿಸ್ಥಿತಿ ಇರುತ್ತದೆ. ಧಾರ್ಮಿಕ ಪ್ರವಚನಕಾರರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಒಡಹುಟ್ಟಿದವರು ಮತ್ತು ಬಂಧುಗಳು ಅವರ ಅವಶ್ಯಕತೆಗಾಗಿ ಮಾತ್ರ ನಿಮ್ಮಲ್ಲಿಗೆ ಬರುವರು. ಆಸ್ತಿ ವ್ಯವಹಾರ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಕೃಷಿಯಿಂದ ಆದಾಯ ಹೆಚ್ಚಿಗೆ ಬರು ತ್ತದೆ. ಸಂಗಾತಿಗೆ ಈಗ ಆಸ್ತಿ ದೊರೆಯುವ ಸಂದ ರ್ಭವಿದೆ.
21 ಫೆಬ್ರುವರಿ 2026, 18:35 IST
ಸಿಂಹ
ಒಂದು ರೀತಿ ವೈರಾಗ್ಯ ನಿಮ್ಮನ್ನು ಆವರಿಸಬಹುದು. ಆದಾಯ ತಕ್ಕಮಟ್ಟಿಗೆ ಇದ್ದು ಸಂಗಾತಿಯ ಸಹಕಾರದಿಂದ ಅದನ್ನು ಹೆಚ್ಚು ಮಾಡಿಕೊಳ್ಳ ಬಹುದು. ಸಂಗಾತಿಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಕಾರ ಸಿಗುತ್ತದೆ. ಬಂಧುಗಳ ಜೊತೆ ವ್ಯವಹಾರಗಳು ಬೇಡ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ.
21 ಫೆಬ್ರುವರಿ 2026, 18:35 IST
ಕನ್ಯಾ
ಮನಸ್ಸಿನಲ್ಲಿ ಚುರುಕುತನ ಇದ್ದರೂ ಕೂಡ ಕೃತಿಯಲ್ಲಿ ಇರುವುದಿಲ್ಲ. ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಂಭವವಿದೆ. ಆಸ್ತಿ ಕೊಳ್ಳಲು ಇದು ಸಕಾಲ, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಈಗ ಮಾಡಿಕೊಳ್ಳಿರಿ. ಕೃಷಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳು ದೊರೆಯುತ್ತವೆ.
21 ಫೆಬ್ರುವರಿ 2026, 18:35 IST
ತುಲಾ
ವಾರದ ಆರಂಭದಲ್ಲಿ ಸಂಗಾತಿ ಕಡೆಯಿಂದ ಒಳ್ಳೆಯ ಸಮಾಚಾರ ಕೇಳಿಬರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಕೃಷಿ ಭೂಮಿಯನ್ನು ವ್ಯಾಪಾರ ಮಾಡುವವರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭವಿರುತ್ತದೆ. ಸಂಸಾರದಲ್ಲಿ ಸಂತಸ ಮತ್ತು ಕೋಪ ಎರಡು ಕೂಡ ಇರುತ್ತದೆ.ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ದೊರೆಯುವ ಸಂದರ್ಭವಿದೆ. ವಾಯುಯಾನ ಕ್ಷೇತ್ರದಲ್ಲಿ ಓದುತ್ತಿರುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ.
21 ಫೆಬ್ರುವರಿ 2026, 18:35 IST
ವೃಶ್ಚಿಕ
ಬಹಳ ಚುರುಕುತನದಿಂದ ಕೆಲಸ ಮಾಡುವಿರಿ. ಆದಾಯವು ಸಾಮಾನ್ಯಗತಿಯಲ್ಲಿ ರುತ್ತದೆ. ಬಂಧುಗಳ ಸಹಕಾರ ನಿಮಗೆ ದೊರೆಯುತ್ತದೆ. ಸ್ಥಿರಾಸ್ತಿಯ ವ್ಯವಹಾರವನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸಂಘಸಂಸ್ಥೆಗಳಿಂದ ಆಸ್ತಿ ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಇರುವುದಿಲ್ಲ. ಶೀತಬಾಧೆ ಕೆಲವರನ್ನು ಕಾಡಬಹುದು. ನಿಮ್ಮ ಆರ್ಥಿಕ ಬೆಳವಣಿಗೆಗೆ ಸಂಗಾತಿ ಸಹಕಾರ ನೀಡುತ್ತಾರೆ.
21 ಫೆಬ್ರುವರಿ 2026, 18:35 IST
ಧನು
ಕೃಷಿಯಿಂದ ಅತಿಹೆಚ್ಚು ಆದಾಯ ಪಡೆಯುವಿರಿ. ಬಂಧು– ಬಾಂಧವರ ನಡುವಿನ ವಿರೋಧಾಭಾಸಗಳನ್ನು ಕಡಿಮೆ ಮಾಡಲು ಪ್ರಯತ್ನಪಡುವಿರಿ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಫಲಿತಾಂಶ ಪಡೆಯುವ ಯೋಗವಿದೆ. ಹೈನುಗಾರಿಕೆ ಅಭ್ಯಾಸ ಮಾಡುತ್ತಿರುವವ ರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸಂಗಾತಿಯಿಂದ ಹೆಚ್ಚು ಆರ್ಥಿಕ ಸಹಕಾರ ಸಿಗುತ್ತದೆ.
21 ಫೆಬ್ರುವರಿ 2026, 18:35 IST
ಮಕರ
ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಈ ವಾರ ನಿಮ್ಮಲ್ಲಿ ಪರಾಕ್ರಮ ಹೆಚ್ಚಾಗಿ ಇರುತ್ತದೆ. ಹೈನುಗಾರಿಕೆ ಮಾಡುವವರಿಗೆ ಅತಿ ಹೆಚ್ಚು ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಸಂಸಾರದಲ್ಲಿ ಸಂತೋಷವನ್ನು ಕಾಣಬಹುದು. ವಾರದ ಅಂತ್ಯಕ್ಕೆ ದೈವ ದರ್ಶನಕ್ಕೆ ಹೋಗಿಬರುವ ಸಾಧ್ಯತೆಗಳಿವೆ.
21 ಫೆಬ್ರುವರಿ 2026, 18:35 IST
ಕುಂಭ
ನಿಮ್ಮ ವ್ಯಕ್ತಿತ್ವದಲ್ಲಿ ಛಾಪನ್ನು ಕಾಣಬಹುದು. ಆದಾಯವು ಕಡಿಮೆ ಇರುತ್ತದೆ. ಖರ್ಚನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಮಹಿಳೆಯರಿಂದ ಕೆಲಸ ಕಾರ್ಯಗಳಿಗೆ ಸ್ವಲ್ಪ ಸಹಕಾರ ದೊರೆಯಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸನ್ನು ಪಡೆಯುವ ಯೋಗವಿದೆ.ಹೊರಗಿನ ಆಹಾರಸೇವನೆಯಿಂದ ಆರೋಗ್ಯ ವ್ಯತ್ಯಾಸವಾಗಬಹುದು. ಸಂಗಾತಿಯು ಅಧ್ಯಾತ್ಮದ ಕಡೆಗೆ ಹೊರಳಬಹುದು.
21 ಫೆಬ್ರುವರಿ 2026, 18:35 IST
ಮೀನ
ಆದಾಯವು ಉತ್ತಮವಾಗಿರುತ್ತದೆ. ನಿಮ್ಮ ಮಾತಿನಿಂದ ನೀವು ಬಂಧುಗಳನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿ ಗಳಿಗೆ ಶ್ರಮಕ್ಕೆ ತಕ್ಕಫಲ ಮಾತ್ರ ಇರುತ್ತದೆ. ಉದರ ಸಂಬಂಧಿ ದೋಷಗಳುಕಾಣಿಸಬಹುದು. ಸಂಗಾತಿಯು ನಿಮ್ಮ ಸಲಹೆಗಳನ್ನು ಪರಿಗಣಿಸುವುದಿಲ್ಲ. ವೃತ್ತಿಯಲ್ಲಿರುವವರಿಗೆ ಅನುಕೂಲಗಳು ಹೆಚ್ಚುತ್ತವೆ.
21 ಫೆಬ್ರುವರಿ 2026, 18:35 IST