ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ಜನವರಿ 2024– ಈ ರಾಶಿಯವರಿಗೆ ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು
Published 31 ಡಿಸೆಂಬರ್ 2023, 18:35 IST
ಅರುಣ ಪಿ.ಭಟ್ಟ
ಮೇಷ
ತಿಂಗಳ ಆರಂಭದಲ್ಲಿ ಕಾರ್ಯಸಿದ್ದಿ, ಧನಲಾಭ. ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸಂತಸ. ಗ್ರಂಥರಚನೆಯಲ್ಲಿ ಆಸಕ್ತಿ. ವಾಹನ ಸೌಖ್ಯ.ಮಕ್ಕಳಿಂದ ಮಾನಸಿಕ ಕಿರಿಕಿರಿ. ಬರತಕ್ಕ ಬಾಕಿ ಬರುವುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ಯೋಗ. ಶುಭ: 06,18,22 ಅಶುಭ: 10,15,25.
ವೃಷಭ
ತಿಂಗಳ ಆರಂಭದಲ್ಲಿ ಪ್ರವಾಸ, ಸಹೋದರಿಯರಿಂದ ಶುಭವಾರ್ತೆ, ಗೃಹಾಲಂಕಾರ ವಸ್ತು ಖರಿದಿ. ತಿಂಗಳ ಮಧ್ಯದಲ್ಲಿ ಆರೋಗ್ಯ ಸಂಬಂಧಿ ಖರ್ಚು. ಅವಮಾನಕರ ಪ್ರಸಂಗ ಎದುರಾಗಬಹುದು, ತಾಳ್ಮೆ ಕಳೆದುಕೊಳ್ಳಬೇಡಿ. ಶುಭ: 12,20,29 ಅಶುಭ: 11,21,25.
ಮಿಥುನ
ದೈಹಿಕ ಜಾಡ್ಯ, ವಿನಾಕಾರಣ ಹೆದರಿಕೆ, ಅಸಮಾಧಾನ. ಇದರ ನಡುವೆಯೇ ಬಹುದಿನಗಳ ನಂತರ ಕುಟುಂಬದಲ್ಲಿ ಸಂತೋಷ ಕೂಟ ನಡೆಯುವುದು. ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು. ಮಾನ–ಸನ್ಮಾನ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಶುಭ:14,19,22 ಅಶುಭ: 12,17,23.
ಕರ್ಕಾಟಕ
ಮನೆಕಟ್ಟುವ ಸಮಸ್ಯೆ ಬಗೆಹರಿಯುವುದು. ಕ್ರಯ ವಿಕ್ರಯದಲ್ಲಿ ವಂಚನೆ ನಡೆಯುವ ಸಂಭವ, ವಿವಾದ ಸಾಧ್ಯತೆ, ಜಾಗ್ರತೆ ಇರಲಿ. ತಂದೆಯಿಂದ ಹಣಕಾಸಿನ ಸಹಾಯ ಸಿಗಬಹುದು. ಕಾಲಿಗೆ ನೋವು, ಆಸ್ಪತ್ರೆಗೆ ಖರ್ಚು. ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು. ಶುಭ: 08,16,24 ಅಶುಭ: 12,18,26.
ಸಿಂಹ
ಶಾರೀರಿಕ ಮಾನಸಿಕ ಉತ್ಸಾಹ ವೃದ್ಧಿಸುವುದು. ಸರಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವವು. ಪರಿಚಿತ ಸ್ತ್ರೀ ವಿರೋದ ಎದುರಿಸಬೇಕಾಗುವುದು. ಪಶುಗಳ ವಿಕ್ರಯದಾರರಿಗೆ ಲಾಭ. ಹೊಟ್ಟೆನೋವು ಕಾಡಬಹುದು. ಮಹತ್ವದ ಮಾತುಕತೆ ಫಲಪ್ರದವಾಗಲಿವೆ. ಶುಭ: 14,18,23 ಅಶುಭ: 12,16,23.
ಕನ್ಯಾ
ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು, ಹಿಡಿತವಿರಲಿ. ಸರಕಾರಿ ಕೆಲಸದಲ್ಲಿ ವ್ಯತ್ಯಯ ಕಾಣಿಸಿಕೊಳ್ಳಬಹುದು. ಕೆಲಸಗಾರರಿಂದ ತೊಂದರೆ. ಬಂಧುಗಳಿಗೆ ಆಪತ್ತು. ಅಧಿಕಾರಿಗಳಿಗೆ ಹಿನ್ನಡೆ. ಶುಭ. 16.22.26. ಅಶುಭ:11.21.27
ತುಲಾ
ಉತ್ತಮ ಫಲ ಪ್ರಾಪ್ತಿಯ ರಾಶಿ. ಆಕಸ್ಮಿಕ ಧನಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೆಕ್ಷಿಗಳಿಗೆ ಸಂಗಾತಿ ಲಭ್ಯ. ಮನೆಕೆಲಸದ ಹೊಸ ಸೇವಕರು ಸಿಗುವರು. ವ್ಯಾಪಾರದಲ್ಲಿ ಲಾಭ. ಕುಟುಂಬ ಸೌಖ್ಯ. ಶುಭ. 14.18.21. ಅಶುಭ. 15.19.27
ವೃಶ್ಚಿಕ
ಕಷ್ಟದಲ್ಲೂ ಇಷ್ಟ ಫಲ ಪ್ರಾಪ್ತಿಯಾಗುವುದು. ಪರದೇಶ ಪ್ರವಾಸಕ್ಕೆ ಸಿದ್ದತೆ ನಡೆಯುವದು. ಸರಕಾರಿ ಅಧಿಕಾರ ಪ್ರಾಪ್ತಿಯೋಗ. ಶಿಕ್ಷಕರಿಗೆ ಪದೋನ್ನತಿಯೊಡನೆ ವರ್ಗಾವಣೆ ಸಂಭವ. ಕುಟುಂಬ ವರ್ಗದಲ್ಲಿ ಅನಾರೋಗ್ಯ. ಪ್ರಾಣಾಪಾಯ ಭೀತಿ. ಶುಭ.16.18.20. ಅಶುಭ. 12.11.27.
ಧನು
ಆರೋಗ್ಯದಲ್ಲಿ ಏರುಪೇರು. ಹೆಂಡತಿಯೊಡನೆ ಜಗಳ. ಕಚೇರಿ ಕಾಗದ ಪತ್ರಗಳು ಹಟಾತ್ ಕಾಣೆಯಾಗುವಿಕೆ. ದೂರದಿಂದ ಶುಭವಾರ್ತೆ ಬರುವುದು. ದೈನಂದಿನ ಕೆಲಸಗಳು ಸರಾಗ. ದಿಢೀರ್ ಹಿರಿಯ ಅಧಿಕಾರಿಗಳ ಆಗಮನ. ಸ್ತ್ರೀ ಮೂಲಕ ದ್ರವ್ಯ ಲಾಭ. ಮನೆಯಲ್ಲಿ ದೇವತಾ ಪೂಜೆ ನಡೆಯುವುದು. ಶುಭ 12.16.28 ಅಶುಭ. 17.19.22.
ಮಕರ
ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಕಾಲು ನೋವಿನ ಸಮಸ್ಯೆ. ಕೌಟುಂಬಿಕ ಖರ್ಚು ಜಾಸ್ತಿಯಾಗುವುದು. ಶತ್ರುಗಳು ತಲೆ ತಗ್ಗಿಸುವರು. ಹಳೆಯ ಮಿತ್ರರ ಆಗಮನ. ಮಕ್ಕಳಿಂದ ಶುಭವಾರ್ತೆ. ದಾಂಪತ್ಯ ಸೌಖ್ಯ. ಹಣಕಾಸಿನ ಲಭ್ಯತೆ. ಶುಭ. 14.16.19. ಅಶುಭ.15.19.24.
ಕುಂಭ
ಶುಭಯೋಗ. ಯಾಂತ್ರಿಕ ವಸ್ತುಗಳ ಖರೀದಿ. ಶೈಕ್ಷಣಿಕ ಖಾತೆಯಲ್ಲಿ ಕೆಲಸದಲ್ಲಿರುವವರಿಗೆ ತಾತ್ಕಾಲಿಕ ಬಡ್ತಿ. ಬ್ಯಾಂಕ್ ನೌಕರರಿಗೆ ವರ್ಗಾವಣೆ ಸಂಭವ. ಕೈಗೊಂಡ ಕೆಲಸಗಳಲ್ಲಿ ನೀರಿಕ್ಷೆಗಿಂತ ಲಾಭ. ಕಂಟ್ರಾಕ್ಟರದಾರರು ಉತ್ತಮ ಧನ ಲಾಭ ಕಾಣುವಿರಿ. ಮಿತ್ರರಿಂದ ವಂಚನೆ ಸಂಭವ. ಮಕ್ಕಳ ಅನಾರೋಗ್ಯ. ಶುಭ 13.19.20. ಅಶುಭ. 14.16.25.
ಮೀನ
ವಿನಾಕಾರಣ ಮಿತ್ರರು ಶತ್ರುಗಳಾವರು. ಮೇಲಾಧಿಕಾರಿಗಳಿಂದ ಕಿರಿಕಿರಿ. ಕಲಾವಿದರಿಗೆ ಸಂಗೀತಗಾರರಿಗೆ ತಿಂಗಳ ಮೊದಲರ್ಧ ಉತ್ತಮ. ಸೊಂಟನೊವು ಕಾಣಿಸುವದು. ಮಕ್ಕಳ ಆರೋಗ್ಯದಲ್ಲಿ ಕೊಂಚ ಪ್ರಗತಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹಿನ್ನಡೆ. ವಾಹನ ಚಾಲಕರಿಗೆ ಎಚ್ಚರ ಅಗತ್ಯ. ಕೆಟ್ಟ ಜನರಿಂದ ಧನಪ್ರಾಪ್ತಿ. ಕುಟುಂಬ ಸೌಖ್ಯ. ಶುಭ 04.10.21. ಅಶುಭ. 12.22.27.