ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
08/09/2024 - 14/09/2024
ವಾರ ಭವಿಷ್ಯ: 15-9-2024 ರಿಂದ 21-9-2024 ರವರೆಗೆ– ಹೂಡಿಕೆಗಳಲ್ಲಿ ಹೆಚ್ಚಿನ ಆದಾಯ
Published 14 ಸೆಪ್ಟೆಂಬರ್ 2024, 18:31 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಬಹಳ ಚುರುಕಿನ ನಡವಳಿಕೆಯನ್ನು ಪ್ರದರ್ಶನ ಮಾಡುವಿರಿ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಇರುತ್ತದೆ. ಬಂಧುಗಳಿಂದ ಸಹಕಾರಗಳು ಸಿಗುತ್ತದೆ. ಸಂಸಾರದಲ್ಲಿ ಹೆಚ್ಚಿನ ಸಂತೋಷ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸುದೊರೆಯುತ್ತದೆ.ಸಂಗಾತಿಯಆರೋಗ್ಯ ದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು ಹಾಗೂ ಸಂಗಾತಿಯಾಗಿಯೇಹೆಚ್ಚುಹಣಖರ್ಚಾಗುತ್ತದೆ. ಅನಿರೀಕ್ಷಿತವಾಗಿ ಆದಾಯ ಹೆಚ್ಚಾಗಬಹುದು. ವಿದೇಶಿ ವಿನಿಮಯ ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಹಣಕಾಸಿನ ವ್ಯವಹಾರ ಗಳಲ್ಲಿಅನಿರೀಕ್ಷಿತ ಏರಿಳಿತಗಳನ್ನುಕಾಣಬಹುದು. ಅನಿರೀಕ್ಷಿತ ಖರ್ಚು ವೆಚ್ಚಗಳು ಬರಬಹುದು. ಹಿರಿಯರ ಆಸ್ತಿಯಿಂದ ಲಾಭ ಬರುತ್ತದೆ. ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ಅಧ್ಯಯನದಲ್ಲಿ ಬಹಳ ಆಸಕ್ತಿ ತೋರುವಿರಿ . ಆದಾಯವು ನಿಮ್ಮ ನಿರೀಕ್ಷೆಯ ಮಟ್ಟಕ್ಕಿಂತ ಕಡಿಮೆ ಇರುತ್ತದೆ. ಕೃಷಿಯಿಂದ ಆದಾಯ ಸ್ವಲ್ಪ ಹೆಚ್ಚಿಗೆ ಬರುತ್ತದೆ. ತಾಯಿಯ ಸಹಕಾರಗಳು ಸಾಕಷ್ಟು ದೊರೆಯುತ್ತದೆ. ಸರ್ಕಾರಿ ಸಂಸ್ಥೆ ಅಥವಾ ಸಂಘ-ಸಂಸ್ಥೆಗಳಿಂದ ಆಸ್ತಿ ಒದಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟ ಕ್ಕಿಂತ ಕಡಿಮೆ ಫಲಿತಾಂಶ ಇರುತ್ತದೆ. ಸಂಗಾತಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬ ಹುದು. ಸಂಗಾತಿ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಹಾಲಿನ ಉತ್ಪನ್ನಗಳನ್ನು ವಿದೇಶ ದಲ್ಲಿ ತಯಾರಿಸಿ ಮಾರುವವರಿಗೆ ಲಾಭವಿದೆ. ಹೈನುಗಾರಿಕೆಯ ಬಗ್ಗೆ ಸಲಹೆ ಕೊಡುವವರಿಗೆ ಲಾಭವಿರುತ್ತದೆ. (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಪೈಲ್ವಾನರುಗಳಿಗೆ ಸಾಕಷ್ಟು ಅನುಕೂಲ ವಿದೆ, ಅವರಿಗೆ ಬೇಕಾದ ಅಗತ್ಯಗಳು ಒದಗಿ ಬರುತ್ತವೆ. ಕೃಷಿಕರಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ. ನಿಮ್ಮ ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಬುದ್ಧಿವಂತಿಕೆಯನ್ನು ಬಳಸಿ ಜನ ಸಹಾಯ ಪಡೆದು ಮುಂದುವರೆಯುವಿರಿ. ಭೂಮಿಯ ಸತ್ವವನ್ನು ಪರೀಕ್ಷೆ ಮಾಡುವವರಿಗೆ ಬೇಡಿಕೆ ಬರುತ್ತದೆ. ಫ್ಯಾಶನ್ ಡಿಸೈನಿಂಗ್ ಕಲಿಯುವ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇದೆ. ಮೂಳೆಯ ತೊಂದರೆಗಳು ಬರಬಹುದು ಎಚ್ಚರವಿರಿ. ಸಂಗಾತಿಯೊಂದಿಗೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಲೋಹ ವ್ಯಾಪಾರ ಮಾಡುವವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ವಾರದ ಆರಂಭದಲ್ಲಿ ಆನಂದದಾಯಕ ವಾಗಿರುತ್ತದೆ. ಆದಾಯವು ನಿಮ್ಮನಿರೀಕ್ಷೆಯನ್ನು ತಲುಪುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸ್ತ್ರೀಯರಿಂದ ಅಡ್ಡಿ ಬರಬಹುದು. ಕುಟುಂಬದ ಕಡೆಗೆ ಸರಿಯಾಗಿ ಗಮನವಹಿಸುವುದು ಅಗತ್ಯ. ಮಕ್ಕಳ ಏಳಿಗೆಯಲ್ಲಿ ನಿಧಾನ ಗತಿಯನ್ನು ಕಾಣ ಬಹುದು. ನಾಟಿ ವೈದ್ಯರುಗಳಿಗೆ ಆಯುರ್ವೇದ ಪಂಡಿತರಿಗೆ ಬೇಡಿಕೆ ಹೆಚ್ಚತ್ತದೆ. ಅವಿವಾಹಿತರಿಗೆ ಪ್ರೀತಿ ಪ್ರೇಮಗಳ ಅವಕಾಶವಿದೆ. ಕಬ್ಬಿಣ ಮತ್ತು ಉಕ್ಕು ಮಾರಾಟಗಾರ ರಿಗೆ ಲಾಭ ಹೆಚ್ಚುವುದು. ವಿದೇಶದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ವ್ಯವಹಾರ ವಿಸ್ತರಣೆಯ ಯೋಗವಿದೆ. (ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಅತಿಯಾದ ಆತ್ಮಭಿಮಾನ ತುಂಬಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಸ್ವಲ್ಪ ಮಟ್ಟಿನ ಲಾಭವಿರುತ್ತದೆ. ಭೂಮಿಯನ್ನು ಅಭಿ ವೃದ್ಧಿಪಡಿಸುವವರಿಗೆ ಮತ್ತು ಮತ್ತು ಭೂಮಿಯ ವ್ಯವಹಾರಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಕ್ರೀಡಾ ಕಲೆಯನ್ನು ಕಲಿಯುತ್ತಿರುವ ವರಿಗೆ ಅಭಿವೃದ್ಧಿ ಇದೆ. ಕೆಲವರಿಗೆ ಶೀತ ಬಾಧೆ ಬಹಳ ಭಾದಿಸಬಹುದು. ಸಂಗಾತಿಯ ಶ್ರಮ ಸಂಸಾರದ ಏಳಿಗೆಗಾಗಿ ವಿನಿಯೋಗವಾಗುತ್ತದೆ. ವಿದೇಶಕ್ಕೆ ಹೋಗಬೇಕೆನ್ನುವವರಿಗೆ ದಾಖಲಾತಿ ಗಳಲ್ಲಿ ವ್ಯತ್ಯಾಸಗಳಾಗಬಹುದು.ವಂಶಪಾರಂಪ ರಿಕ ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ. ಕಣ್ಣಿನ ತೊಂದರೆಗಳ ಬಗ್ಗೆ ಹೆಚ್ಚು ಎಚ್ಚರವಿರಲಿ. ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ದೃಢ ನಿರ್ಧಾರಗಳಿದ್ದರೂ ಅವುಗಳ ಅನುಷ್ಠಾನದ ಬಗ್ಗೆ ಬಹಳ ಪ್ರಯಾಸ ಪಡುವಿರಿ. ಆದಾಯವು ಮಂದಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಸಹಕಾರ ಈಗ ದೊರೆಯಬಹುದು. ಹಿರಿಯರ ಆಸ್ತಿ ಪಡೆಯಲು ಬಹಳ ಪ್ರಯತ್ನಪಡುವಿರಿ. ಮಕ್ಕಳವಿದ್ಯಾಭ್ಯಾಸ ದಲ್ಲಿ ಚೇತರಿಕೆಯನ್ನು ಕಾಣಬಹುದು. ಹಳೆಯ ಕೆಲವು ಕಾಯಿಲೆಗಳು ಮರುಕಳಿಸುವ ಸಾಧ್ಯತೆ ಗಳಿವೆ. ಸಂಗಾತಿಯ ವಿಲಾಸಿ ಜೀವನದ ಬಗ್ಗೆ ಬೇಸರಾಗುವುದು. ಸರ್ಕಾರಿ ಹೂಡಿಕೆಗಳಲ್ಲಿ ಹೆಚ್ಚಿನ ಆದಾಯವನ್ನು ಕಾಣಬಹುದು. ಕೆಲವರಿಗೆ ಕಾಲು ನೋವುಗಳು ಕಾಣಿಸಬಹುದು. ವಿದೇಶದಲ್ಲಿರುವ ಸಂಗಾತಿಯನ್ನು ಈಗ ಹೋಗಿ ಸೇರಿಕೊಳ್ಳಬಹುದು. ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ನಿಮ್ಮ ಮನೋಸ್ಥೈರ್ಯ ಸ್ವಲ್ಪ ಕಡಿಮೆ ಇರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರು ತ್ತದೆ. ಹಿರಿಯರಿಂದ ಸಿಗುವ ಸಹಾಯಗಳು ಕಡಿಮೆಯಾಗುತ್ತವೆ. ಆಸ್ತಿ ವ್ಯವಹಾರ ಮಾಡುವ ವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ನಿರಾಸೆ ಇರುತ್ತದೆ. ಮಕ್ಕಳ ಏಳಿಗೆ ಬಗ್ಗೆ ಸಾಕಷ್ಟು ಚಿಂತೆ ಇರುತ್ತದೆ. ಅತಿ ಉಷ್ಣ ಅಥವಾ ಕೀಲು ನೋವುಗಳು ಕಾಡಬಹುದು. ಸಂಗಾತಿ ಕಡೆಯವರಿಂದ ನಿಮಗೆ ಸ್ವಲ್ಪ ಅನುಕೂಲವಾ ಗುತ್ತದೆ. ಪರಿಚಯದವರಿಂದ ಸರಕಾರಿ ಕೆಲಸ ಗಳಲ್ಲಿ ಅನುಕೂಲ. ಸರ್ಕಾರಿ ಹಣಕಾಸಿನ ಸಂಸ್ಥೆ ಗಳಿಗೆ ಲಾಭವಿರುತ್ತದೆ. ಸಂಗಾತಿಯ ಕಠಿಣ ನಿಲುವುಗಳು ನಿಮಗೆ ಕಷ್ಟ ಅನಿಸಬಹುದು.ಆದಾಯವಿದ್ದರೂ ಅನಿರೀಕ್ಷಿತ ಖರ್ಚಿರುತ್ತದೆ. ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ಕೆಲವು ಒತ್ತಡಗಳ ನಡುವೆಯೂ ಸಹ ಸೌಮ್ಯವಾಗಿರಲು ಪ್ರಯತ್ನ ಪಡುವಿರಿ. ನಿಮ್ಮ ಆದಾಯವು ಮಧ್ಯಮ ಗತಿಯಲ್ಲಿರುತ್ತದೆ.ನಿಮ್ಮ ಕೆಲಸಗಳಿಗೆ ಹಿರಿಯರಿಂದ ಧನ ಸಹಕಾರ ಸಿಗು ತ್ತದೆ. ಸೋದರಿಯರಿಂದ ಹೆಚ್ಚಿನ ಸಹಕಾರಗಳು ದೊರೆಯುತ್ತವೆ. ಸಾವಯವ ಕೃಷಿ ಮಾಡುವವ ರಿಗೆ ಬಹಳ ಉತ್ತೇಜನ ಸಿಗುತ್ತದೆ. ವಿದೇಶದಲ್ಲಿ ರುವ ಮಕ್ಕಳನ್ನು ನೋಡಲು ಹೋಗಬಹುದು. ಶತ್ರುಗಳ ಮೇಲೆ ಜಯವನ್ನು ಪಡೆಯುವಿರಿ. ಸಂಗಾತಿಯಿಂದ ನಿಮಗೆ ಸಾಕಷ್ಟು ಧನಸಹಾಯ ಸಿಗುತ್ತದೆ. ವ್ಯವಹಾರಗಳಲ್ಲಿ ಅನಿರೀಕ್ಷಿತಏರಿಳಿತ ಗಳನ್ನು ಕಾಣಬಹುದು. ತಂದೆಯಿಂದ ವ್ಯವಹಾ ರಕ್ಕೆ ಧನಸಹಾಯ ಸಿಗುತ್ತದೆ. ವೃತ್ತಿಯಲ್ಲಿ ಏಳಿಗೆ ಇರುತ್ತದೆ. (ವಿಶಾಖಾ 4 ಅನುರಾಧ ಜೇಷ್ಠ)
ಧನು
ಎಲ್ಲಾ ವಿಷಯಗಳಲ್ಲಿ ದೃಢವಾದ ನಿರ್ಧಾರಗಳನ್ನು ಕೈಗೊಳ್ಳಿರಿ. ಆದಾಯವು ನಿರೀಕ್ಷೆಯ ಹತ್ತಿರಬರುತ್ತದೆ. ಬಂಧುಗಳು ನಿಮ್ಮ ವಿರುದ್ಧ ತಗಾದೆ ತೆಗೆಯಲು ಹಿಂದೇಟು ಹಾಕು ವರು. ವಿದೇಶದಲ್ಲಿರುವವರಿಗೆ ಸ್ವದೇಶ ಮತ್ತು ವಿದೇಶಗಳಲ್ಲಿ ಆಸ್ತಿಮಾಡಿಕೊಳ್ಳವಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ವಾಯು ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಸಹಕಾರದ ಜೊತೆಗೆಸಲಹೆಗಳು ದೊರೆಯುತ್ತವೆ.ವೃತ್ತಿಯಲ್ಲಿ ಪ್ರಗತಿಯನ್ನು ಕಾಣಬಹುದು. ಸರ್ಕಾರಿ ಸೌಲಭ್ಯ ಗಳು ಸರಾಗವಾಗಿ ಸಿಗುತ್ತವೆ. ಸಂಗಾತಿ ಕಡೆಯ ವರಿಂದ ಸರ್ಕಾರಿ ಕಚೇರಿ ಕೆಲಸಕಾರ್ಯಗಳು ಸರಾಗವಾಗಿ ಆಗುತ್ತದೆ. ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ವಾರದ ಆರಂಭ ಆನಂದದಾಯಕವಾಗಿ ರುತ್ತದೆ. ಆದಾಯ ಕಡಿಮೆ ಇದ್ದರೂ ಹಣ ನಿರ್ವ ಹಣೆಯಾಗುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವ ಬಗ್ಗೆ ಸಾಕಷ್ಟು ತಿಳುವಳಿಕೆ ಪಡೆಯು ವಿರಿ. ಭೂಮಿಯ ವ್ಯವಹಾರ ಮಾಡುವವರಿಗೆ ನಿರೀಕ್ಷಿತಮಟ್ಟದ ಲಾಭವಿರುವುದಿಲ್ಲ.ವಿದ್ಯಾರ್ಥಿ ಗಳಿಗೆ ಈಗ ಅತ್ಯುನ್ನತ ಫಲಿತಾಂಶ ಪಡೆಯುವ ಯೋಗವಿದೆ. ಹರಿತವಾದಗಳನ್ನು ಉಪಯೋಗಿ ಸುವವರು ಬಹಳ ಎಚ್ಚರದಿಂದ ಉಪಯೋಗಿ ಸಿರಿ. ಸಂಗಾತಿಯು ನಿಮ್ಮೆಲ್ಲ ಕೆಲಸಗಳಿಗೆ ಬೆನ್ನೆ ಲುಬಾಗಿ ನಿಲ್ಲುವರು.ಬಂಧುಗಳೊಡನೆಹೊಂದಾ ಣಿಕೆ ಇರುತ್ತದೆ. ಮನೆಪಾಠ ಮಾಡುವವರಿಗೆ ಆದಾಯ ಹೆಚ್ಚುತ್ತದೆ.ಗಣಿತಜ್ಞರಿಗೆ ಮತ್ತು ತೆರಿಗೆ ತಜ್ಞರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಒತ್ತಡದಲ್ಲಿ ಕೆಲಸ ಮಾಡಬೇಕಾದೀತು. ಮಾತಿನಲ್ಲಿ ಬಹಳ ಎಚ್ಚರವಿರಲಿ. ವಿದೇಶಿ ವ್ಯವ ಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಬಂಧುಗಳು ನಿಮಗೆ ಮುಂದುವರೆಯುವ ದಾರಿ ಯನ್ನು ತೋರುವರು. ಆಸ್ತಿ ವ್ಯವಹಾರ ಮಾಡು ವವರಿಗೆ ಹೆಚ್ಚಿನ ಲಾಭವಿರುತ್ತದೆ. ಹಣಕಾಸಿನ ವ್ಯವಹಾರ ಮಾಡೋರಿಗೆ ಸ್ವಲ್ಪ ಮಟ್ಟಿನ ಲಾಭ ವಿರುತ್ತದೆ. ಪೈಲ್ವಾನರಗಳಿಗೆ ಉತ್ತಮ ಅವಕಾಶ ದೊರೆತು ಸಂಪಾದನೆಗೆ ಮಾರ್ಗವಾಗುತ್ತದೆ. ಶೀತ ಸಂಬಂಧಿ ದೋಷ ಇರುವವರಿಗೆ ಹೆಚ್ಚು ವ್ಯತ್ಯಾಸಗಳಾಗಬಹುದು.ಆಭರಣ ತಯಾರಕ ರಿಗೆ ಸ್ವಲ್ಪ ಹಿನ್ನಡೆಯಾಗ ಬಹುದು. ಸಂಗಾತಿ ಕಡೆಯವರಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸುಲಭವಾಗುತ್ತದೆ. ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಅತಿಯಾದ ಆತ್ಮವಿಶ್ವಾಸ ಹೊಮ್ಮುತ್ತಿರುತ್ತದೆ. ಆದಾಯವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಹಿರಿಯರೊಡನೆ ಹೊಂದಾಣಿಕೆ ಮಾಡಿಕೊಂಡು ಅವರ ಸಹಾಯ ಪಡೆಯಲು ಯತ್ನಿಸುವಿರಿ. ಆಸ್ತಿ ವಿಚಾರದಲ್ಲಿ ಮೇಲುಗೈ ಸಾಧಿಸಬಹುದು. ಕೃಷಿಯಿಂದ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಸರ್ಕಾರಿ ಸಾಲ ಗಳು ಸರಾಗವಾಗಿ ದೊರೆಯುತ್ತವೆ.ಸಂಗಾತಿಯ ಅತಿಯಾದ ಧರ್ಮ ಶ್ರದ್ಧೆಬೇಸರತರಿಸಬಹುದು. ನಿಮ್ಮ ಕಾರ್ಯಕ್ರಮಗಳಿಗೆ ತವರು ಮನೆಯಿಂದ ಸಹಾಯ ಸಿಗುವುದು. ಹಿರಿಯರ ವರ್ಚಸ್ಸಿನಿಂದ ವೃತ್ತಿಯಲ್ಲಿ ಸ್ಥಿರತೆ ಇರುತ್ತದೆ. ಕಬ್ಬಿಣದವ್ಯಾಪಾರಿ ಗಳಿಗೆ ವ್ಯಾಪಾರದಲ್ಲಿ ಸಮತೋಲನ ಇರುತ್ತದೆ. ಕೆಲವು ರೈತರಿಗೆ ಅನಿರೀಕ್ಷಿತ ಲಾಭ ವಾಗುವ ಸಾಧ್ಯತೆ ಇದೆ. ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ).
ADVERTISEMENT
ADVERTISEMENT