ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ
Published 1 ಜುಲೈ 2024, 18:52 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಂತು ಹೋಗಿರುವ ವ್ಯವಸಾಯದಲ್ಲಿಯೇ ಹೆಚ್ಚು ಆದಾಯ ಎಂಬುದನ್ನು ಕಂಡುಕೊಳ್ಳುವಿರಿ. ಧರ್ಮಾಚರಣೆಯಲ್ಲಿ ಕುಂದುಕೊರತೆಗಳನ್ನು ಮಾಡುವುದು ಶ್ರೇಯಸ್ಕರವಾಗಿರುವುದಿಲ್ಲ.
ವೃಷಭ
ಅನುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರ ಹಾಕದ ಹೊರತು ಮನೆಯನ್ನು ಚೊಕ್ಕಗೊಳಿಸಲು ಸಾಧ್ಯವಾಗುವುದಿಲ್ಲ. ಸ್ನೇಹಿತರ ಒತ್ತಡದಿಂದಾಗಿ ಮಗಳಿಗೆ ವಿವಾಹ ಸಂಬಂಧ ಕೂಡಿ ಬರಲಿದೆ.
ಮಿಥುನ
ಅಪರೂಪದ ಅಳಿವಿನಂಚಿನಲ್ಲಿರುವ ವಿದ್ಯೆಯ ಬಗ್ಗೆ ಸಂದರ್ಶನ ಕೊಡುವಂತೆ ಪತ್ರಿಕೆ ಅಥವಾ ದೂರದರ್ಶನ ಮಾಧ್ಯಮದವರು ಬರುವರು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಧ್ಯಯನ ಅಗತ್ಯ.
ಕರ್ಕಾಟಕ
ದಾಂಪತ್ಯ ಜೀವನದಲ್ಲಿ ಕೆಲವು ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಒಳ್ಳೆಯದು. ಜೀವನದಲ್ಲಿನ ಸಂತೋಷ ಪಡೆಯಲು ಸಾಕಷ್ಟು ಅವಕಾಶಗಳು ಲಭಿಸಲಿವೆ. ಎಲ್ಲಾ ವಿಚಾರದಲ್ಲೂ ಎಚ್ಚರದ ನಡೆ ಇರಲಿ.
ಸಿಂಹ
ಕೋಪದಿಂದ ಪರಿಹಾರವಾಗದ ಕೌಟುಂಬಿಕ ಸಮಸ್ಯೆಗಳು ಮೃದು ಮಾತಿನಿಂದ ಪರಿಹಾರವಾಗುತ್ತದೆ. ಮುಗಿದ ಸಮಾರಂಭದ ಉಳಿದ ಕೆಲಸಗಳು ಮಾಡಿದಷ್ಟೂ ಇದ್ದಂತೆ ಭಾಸವಾಗುತ್ತದೆ. ಪ್ರಯತ್ನವು ಮುಖ್ಯವಾಗಿರುತ್ತದೆ.
ಕನ್ಯಾ
ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ. ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿಯನ್ನು ಕೊಡಲಿದ್ದಾರೆ. ವ್ಯಾಪಾರದಲ್ಲಿ ಮಿಶ್ರಫಲವಿರುವುದು.
ತುಲಾ
ಅಧಿಕಾರಿಗಳಿಗೆ ಆಹ್ವಾನವನ್ನು ಮಾಡುವ ದಿನಗಣನೆಯನ್ನು ಶುರುಮಾಡುವಿರಿ. ಸುಖ-ದುಃಖದ ಸಮ ಫಲವನ್ನು ಅನುಭವಿಸುವಂತಾಗುವುದು. ಗುರು ಹಿರಿಯರಲ್ಲಿ ಅಗೌರವ ತೋರದಿರಿ.
ವೃಶ್ಚಿಕ
ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳ ಜತೆಯಲ್ಲಿ ಬಯಸಿದ ಜಾಗ ಹಾಗೂ ಹೆಸರಾಂತ ಕಂಪೆನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ವಾದ ವಿವಾದಗಳಿಂದ ದೂರ ಉಳಿಯುವ ಪ್ರಯತ್ನ ಮಾಡಿರಿ.
ಧನು
ಮಕ್ಕಳ ಪ್ರತಿ ಹೆಜ್ಜೆಯ ಮೇಲೂ ಎಚ್ಚರಿಕೆಯ ಕಣ್ಣನ್ನು ಇಟ್ಟಿರಲೇಬೇಕಾಗುತ್ತದೆ. ಬದಲಾದ ದಿನಚರಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸವಾಗಿ ಪರಿಣಮಿಸಬಹುದು. ಹಣದ ಅಡಚಣೆ ಇರುವುದಿಲ್ಲ.
ಮಕರ
ಎಷ್ಟೇ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವುದಾದರೂ ನೋಡುವವರ ಕಣ್ಣಿಗೆ ಹೆಚ್ಚೆಂದು ಕಾಣುವಂಥ ನಡವಳಿಕೆಗಿಂತ ಸರಳತೆಗೆ ಸ್ಥಾನಮಾನ ದೊರಕುತ್ತದೆ. ಲೇವಾದೇವಿ ವ್ಯವಹಾರ ಮುಂದುವರಿಯುವುದು.
ಕುಂಭ
ಯಾವುದೋ ಪುಸ್ತಕಗಳನ್ನು ಓದುವುದರಿಂದಾಗಿ ಮನಸ್ಸು ಶೂನ್ಯದ ಕಡೆಗೆ ವಾಲುತ್ತಿರುವಂತೆ ಭಾಸವಾಗುತ್ತದೆ. ವಿಷಜಂತುಗಳ ಕಡಿತಕ್ಕೆ ಒಳಗಾಗುವಂಥ ಸಾಧ್ಯತೆ ಇರುವುರಿಂದ ಎಚ್ಚರದಲ್ಲಿರಿ.
ಮೀನ
ಸಾಮ್ಯತೆಗಳನ್ನೇ ಹುಡುಕಿ ಗೆಳೆತನ ಮಾಡಿದರೂ ಗೆಳೆತನದಲ್ಲಿ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿ ಕಾಣುವುದು. ತಂದೆ ತಾಯಿಯರನ್ನು ಸಂತೋಷ ಪಡಿಸುವಂಥ ಕ್ಷಣಗಳಿಗೆ ಹೆಮ್ಮೆ ಎಂದೆನಿಸುವುದು.